ಬೆಂಗಳೂರು: ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಖಾಸಗಿ ಆಸ್ಪತ್ರೆಗಳ ಅವ್ಯವಹಾರ ತಡೆಯೊದಕ್ಕೆ ಐಪಿಎಸ್, ಐಎಎಸ್ ಅಧಿಕಾರಿಗಳ ತಂಡ ರಚನೆ ಮಾಡಿದೆ. ಸದ್ಯ ಅಧಿಕಾರಿಗಳು ಖಾಸಗಿ ಆಸ್ಪತ್ರೆಗೆ ಭೇಟಿ ಕೊಟ್ಟು ಬಿಸಿ ಮುಟ್ಟಿಸಿದರೂ ಕೂಡ ಆಸ್ಪತ್ರೆಗಳಲ್ಲಿ ಬದಲಾವಣೆ ಕಾಣ್ತಿಲ್ಲ.
ಪೀಣ್ಯ, ದಾಸರಹಳ್ಳಿ ನಿವಾಸಿಗೆ ಕೊರೊನಾ ಲಕ್ಷಣ ಕಂಡು ಬಂದ ಕಾರಣ ತೀವ್ರ ಉಸಿರಾಟದ ತೊಂದರೆಯಾಗಿತ್ತು. ಹೀಗಾಗಿ ತಂದೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಕಾರಣ ಮಗ ವೆಂಕಟೇಶ್ ತನ್ನ ತಂದೆಯ ಜೀವ ಉಳಿಸೋದಕ್ಕೆ ನಗರದಲ್ಲಿ ಇರುವಂತಹ ಎಂ.ಎಸ್.ರಾಮಯ್ಯ, ಕೊಲಂಬಿಯಾ ಏಷ್ಯಾ, ಪೀಪಲ್ ಟ್ರೀ, ಸಪ್ತಗಿರಿ ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಇಷ್ಟೆಲ್ಲಾ ತಿರುಗಾಡಿದರೂ ಆಸ್ಪತ್ರೆಯವರು ಬೆಡ್ ಇಲ್ಲವೆಂದು ವಾಪಸ್ ಕಳಿಸಿದ್ದಾರಂತೆ.
ನಂತರ ತಂದೆಗೆ ಈ ರೀತಿಯಾದ ಅನುಭವದಿಂದ ಮಗ ಮನನೊಂದು ವಿಡಿಯೋ ಮೂಲಕ ತನ್ನ ನೋವು ತೋಡಿಕೊಂಡಿದ್ದಾನೆ. ಸದ್ಯ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಲ್ಲಿ ಕೂಡ ವೆಂಟಿಲೇರ್ ಅಳವಡಿಸಿಲ್ಲ ಎಂದು ಆರೋಪಿಸಿದ್ದಾನೆ. ಈಗಾಗಲೇ ರಚನೆಯಾಗಿರುವ ಐಪಿಎಸ್ ತಂಡದ ಗಮನಕ್ಕೆ ಈ ವಿಚಾರವನ್ನ ತಂದಿರುವುದಾಗಿ ಹೇಳಿಕೊಂಡಿದ್ದಾನೆ.