ETV Bharat / state

ಕ್ಯಾಲಿಫೋರ್ನಿಯಾದಿಂದ ಬೆಂಗಳೂರಿಗೆ ಬಂದಿಳಿದ ನಿಸಾರ್ ಉಪಗ್ರಹ

author img

By

Published : Mar 9, 2023, 7:15 AM IST

'ನಿಸಾರ್' ಉಪಗ್ರಹವನ್ನು ಹೊತ್ತ ಅಮೆರಿಕನ್‌ ವಾಯುಪಡೆಯ ವಿಮಾನವು ಕ್ಯಾಲಿಫೋರ್ನಿಯಾದಿಂದ ಹೊರಟು ಬೆಂಗಳೂರಿಗೆ ಬಂದಿಳಿಯಿತು.

nisar satellite
ಬೆಂಗಳೂರಿಗೆ ಬಂದಿಳಿದ ನಿಸಾರ್ ಉಪಗ್ರಹ

ಬೆಂಗಳೂರು: ಅಮೆರಿಕ ಮತ್ತು ಭಾರತದ ಬಾಂಧವ್ಯ ಬೆಸೆಯುವ ಪ್ರಮುಖ ಹೆಜ್ಜೆಯಾಗಿ ನಾಸಾ ಹಾಗು ಇಸ್ರೋ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ನಿಸಾರ್ ಉಪಗ್ರಹ ಅಮೆರಿಕನ್ ವಾಯುಪಡೆಯ ವಿಮಾನದಲ್ಲಿ ಕ್ಯಾಲಿಫೋರ್ನಿಯಾದಿಂದ ಹೊರಟು ಗುರುವಾರ ಬೆಂಗಳೂರಿಗೆ ಬಂದಿಳಿದಿದೆ. ಭೂಮಿಯ ಹೊರ ಪದರ ಮತ್ತು ಹಿಮದ ಮೇಲ್ಮೈ ಬದಲಾವಣೆಗಳನ್ನು ಅಳೆಯಲು ಈ ಉಪ್ರಗಹವನ್ನು ನಾಸಾ ಮತ್ತು ಇಸ್ರೋ ಜಂಟಿಯಾಗಿ ಅಭಿವೃದ್ಧಿಪಡಿಸಿದೆ. ನಿಸಾರ್ ಉಪಗ್ರಹವು ಪರಿಸರ ವ್ಯವಸ್ಥೆಗಳಲ್ಲಿನ ಬದಲಾವಣೆಗಳನ್ನು ಅಳೆಯುತ್ತದೆ. ಭೂಕಂಪಗಳು ಮತ್ತು ಜ್ವಾಲಾಮುಖಿ ಸ್ಫೋಟಗಳು, ಸಮುದ್ರ ಮಟ್ಟದ ಏರಿಕೆ ಮುಂತಾದ ನೈಸರ್ಗಿಕ ವಿಕೋಪಗಳ ಎಚ್ಚರಿಕೆ ಚಿಹ್ನೆಗಳನ್ನು ಸಹ ನೀಡುತ್ತದೆ.

ಇದನ್ನೂ ಓದಿ: ಚಂದ್ರಯಾನ್ -3: ಪ್ರಮುಖ ರಾಕೆಟ್ ಎಂಜಿನ್ ಟೆಸ್ಟ್​ ಯಶಸ್ವಿಯಾಗಿ ನಡೆಸಿದ ಇಸ್ರೋ

ಭೂಕುಸಿತ ಪೀಡಿತ ಪ್ರದೇಶಗಳ ಮೇಲೆ ನಿಗಾ: ನಾಸಾ ನೀಡಿದ ಮಾಹಿತಿ ಪ್ರಕಾರ, ಈ ಉಪಗ್ರಹ L-ಬ್ಯಾಂಡ್ SAR 24 ಸೆಂ.ಮೀ ತರಂಗಾಂತರದಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ರೆಡಾರ್ ಸಿಗ್ನಲ್‌ಗಳು ಮತ್ತು ದಟ್ಟ ಅರಣ್ಯದಲ್ಲಿ ಕೂಡ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಮತ್ತು ಭಾರತದ ಬಾಹ್ಯಾಕಾಶ ಸಂಸ್ಥೆ ಭೂಕುಸಿತ ಪೀಡಿತ ಪ್ರದೇಶಗಳಲ್ಲಿನ ಹಿಮನದಿಗಳ ಮೇಲೆ ನಿಗಾ ಇಡಲು ಈ ಉಪಗ್ರಹವನ್ನು ಬಳಸಲಿದೆ. ಇದು ಸುಮಾರು 2,800 ಕೆ.ಜಿ ಭಾರವಿದ್ದು, ಸಿಂಥೆಟಿಕ್ ಅಪರ್ಚರ್ ರೆಡಾರ್ ಉಪಕರಣಗಳನ್ನು ಒಳಗೊಂಡಿದೆ.

ಇದನ್ನೂ ಓದಿ: ಇಸ್ರೋ ಉಪಗ್ರಹಕ್ಕೆ ಸರ್ಕಾರಿ ಶಾಲಾ ವಿದ್ಯಾರ್ಥಿನಿಯರು ತಯಾರಿಸಿದ ಚಿಪ್ ಅಳವಡಿಕೆ!

2024ರಲ್ಲಿ ಉಡಾವಣೆ: ಈ ಉಪಗ್ರಹವು ಮೋಡಗಳನ್ನು ಭೇದಿಸುವ ಮತ್ತು ಹವಾಮಾನ ಪರಿಸ್ಥಿತಿಗಳನ್ನು ಲೆಕ್ಕಿಸದೆ, ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ಸೆರೆ ಹಿಡಿಯಲಿದೆ. 2024 ರಲ್ಲಿ ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಉಡಾವಣೆಯಾಗುವ ಸಾಧ್ಯತೆಯಿದೆ. ಈ ಮುಖೇನ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೆರಿಕ ಮತ್ತು ಭಾರತದ ಸಹಭಾಗಿತ್ವ ವೃದ್ಧಿಯಾಗುತ್ತಿದೆ. ನಾಸಾ ಹಾಗೂ ಇಸ್ರೋ ಬಾಹ್ಯಾಕಾಶ ಸಂಸ್ಥೆಗಳು ಪರಸ್ಪರ ಪೂರಕವಾಗಿ ಕೆಲಸ ಮಾಡುವ ಮೂಲಕ ಜಾಗತಿಕವಾಗಿ ಇತರೆ ದೇಶಗಳ ಗಮನ ಸೆಳೆಯುತ್ತಿವೆ.

ಇದನ್ನೂ ಓದಿ: 2023ರಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋದಿಂದ ಮತ್ತಷ್ಟು ಸಾಧನೆ.... ಸಿದ್ಧವಾಗ್ತಿವೆ ಮಹತ್ವದ ಯೋಜನೆಗಳು

ಗಗನಯಾನ್ ಮಿಷನ್: ಸಿಬ್ಬಂದಿ ಮಾಡ್ಯೂಲ್ ಚೇತರಿಕೆ ಪ್ರಯೋಗ ನಡೆಸಿದ ಇಸ್ರೋ

ಇತ್ತೀಚೆಗಿನ ಇಸ್ರೋ ಸಾಧನೆ: ಬಾಹ್ಯಾಕಾಶದಲ್ಲಿ ಉಪಗ್ರಹ ದಟ್ಟಣೆ ಮತ್ತು ತ್ಯಾಜ್ಯ ಹೆಚ್ಚಾಗಿರುವ ಮಧ್ಯೆ ಇಸ್ರೋ ಇತ್ತೀಚೆಗೆ ಮಹತ್ವದ ಸಾಧನೆ ಮಾಡಿದೆ. ಬಾಹ್ಯಾಕಾಶದಲ್ಲಿನ ನಿರುಪಯುಕ್ತ ಉಪಗ್ರಹವೊಂದನ್ನು ಭೂಕಕ್ಷೆಗೆ ತಂದು ಅದನ್ನು ಫೆಸಿಪಿಕ್​ ಸಾಗರದಲ್ಲಿ ಬೀಳಿಸುವಲ್ಲಿ ಯಶಸ್ವಿಯಾಗಿದೆ. 2011ರಲ್ಲಿ ಉಷ್ಣ ವಲಯದ ವಾತಾವರಣ ಮತ್ತು ಹವಾಮಾನ ಅಧ್ಯಯನ ಮಾಡಲು ಫ್ರೆಂಚ್ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಜೊತೆಗೂಡಿ ಉಡಾಯಿಸಲಾಗಿದ್ದ ಉಪಗ್ರಹವಾದ ಮೇಘಾ ಟ್ರೋಪಿಕ್ಸ್-1 (ಎಂಟಿ-1) ಅನ್ನು ಯಶಸ್ವಿಯಾಗಿ ಕೆಳಗಿಳಿಸಿತು. ನಿರೀಕ್ಷಿತ ಅಕ್ಷಾಂಶ ಮತ್ತು ರೇಖಾಂಶದ ಗಡಿಗಳಲ್ಲಿ ಪೆಸಿಫಿಕ್ ಮಹಾಸಾಗರದಲ್ಲಿ ಅದನ್ನು ಪತನಗೊಳಿಸಲಾಗಿದೆ. ಇದು ಅತ್ಯಂತ ಸವಾಲಿನ ಕೆಲಸವಾಗಿತ್ತು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: ನಿರುಪಯಕ್ತ ಉಪಗ್ರಹವನ್ನು ಭೂಮಿಗೆ ಯಶಸ್ವಿಯಾಗಿ ಇಳಿಸಿದ ಇಸ್ರೋ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.