ETV Bharat / state

ಇನ್ಮುಂದೆ ನಿಜವಾದ ರಾಜಕಾರಣ ಆರಂಭವಾಗಲಿದೆ: ನಿಖಿಲ್ ಕುಮಾರಸ್ವಾಮಿ - ಬೆಂಗಳೂರಿನಲ್ಲಿ ಜೆಡಿಎಸ್​ ಸಭೆ ಲೇಟೆಸ್ಟ್​ ಸುದ್ದಿ

ಜೆಡಿಎಸ್ ಪಕ್ಷದ ಬಗ್ಗೆ ಹಲವು ರೀತಿಯ ಚರ್ಚೆಗಳಾಗುತ್ತಿವೆ. ಯಾವುದೇ ಕಾರಣಕ್ಕೂ ಪಕ್ಷವನ್ನು ವಿಲೀನ ಮಾಡುವ ಸಂದರ್ಭ ಬರುವುದಿಲ್ಲ. ಯಾವ ಪಕ್ಷದ ಜೊತೆಗೂ ನಮ್ಮ ಪಕ್ಷವನ್ನು ವಿಲೀನ ಮಾಡುವುದಿಲ್ಲ. ಇದನ್ನು ನಾನು ಮತ್ತೆ ಮತ್ತೆ ಸ್ಪಷ್ಟಪಡಿಸುತ್ತಿದ್ದೇನೆ ಎಂದು ಇಂದು ನಡೆದ ಜೆಡಿಎಸ್​ ಸಭೆಯಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಹೇಳಿದ್ದಾರೆ.

nikhil kumarswamy speech in Jds meeting
ನಿಖಿಲ್ ಕುಮಾರಸ್ವಾಮಿ ಹೇಳಿಕೆ
author img

By

Published : Jan 4, 2021, 7:29 PM IST

ಬೆಂಗಳೂರು: ಇಲ್ಲಿಯವರೆಗೂ ಒಂದು ರೀತಿಯ ರಾಜಕಾರಣ ನಡೆಯಿತು. ಇನ್ನು ಮುಂದಿನ ದಿನಗಳಲ್ಲಿ ನಿಜವಾದ ರಾಜಕಾರಣ ಆರಂಭವಾಗಲಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ, ನಟ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ನಿಖಿಲ್ ಕುಮಾರಸ್ವಾಮಿ

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ನಡೆದ ಯುವ ಘಟಕ ಹಾಗೂ ವಿದ್ಯಾರ್ಥಿ ಘಟಕಗಳ ಸಂಘಟನಾ ಸಭೆಯಲ್ಲಿ ನಿಖಿಲ್​​ ಮಾತನಾಡಿದ್ರು. ಪಕ್ಷದ ಯಾರೊಬ್ಬರೂ ನಿರುತ್ಸಾಹಿಗಳಾಗದೆ ಕೆಲಸ ಮಾಡಿ ಎಂದ್ರು. ಮುಂಬರುವ ಚುನಾವಣೆಗಳಲ್ಲಿ ಯುವಕರಿಗೆ ಆದ್ಯತೆ ಇರಲಿದೆ. ಮತ್ತೊಮ್ಮೆ ಕುಮಾರಣ್ಣ ಸಿಎಂ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ‌ ಶ್ರಮವಹಿಸಿ ‌ಪಕ್ಷ ಸಂಘಟಿಸಬೇಕಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಕೆಲಸ ಮಾಡುತ್ತೇನೆ. ಪ್ರತಿ ಜಿಲ್ಲೆಗೆ ವೈಯಕ್ತಿಕವಾಗಿ ಭೇಟಿ ಮಾಡುತ್ತೇನೆ ಎಂದರು.

ಜೆಡಿಎಸ್ ಪಕ್ಷದ ಬಗ್ಗೆ ಹಲವು ರೀತಿಯ ಚರ್ಚೆಗಳಾಗುತ್ತಿವೆ. ಯಾವುದೇ ಕಾರಣಕ್ಕೂ ಪಕ್ಷವನ್ನು ವಿಲೀನ ಮಾಡುವ ಸಂದರ್ಭ ಬರುವುದಿಲ್ಲ. ಯಾವ ಪಕ್ಷದ ಜೊತೆಗೂ ನಮ್ಮ ಪಕ್ಷವನ್ನು ವಿಲೀನ ಮಾಡುವುದಿಲ್ಲ. ಇದನ್ನು ನಾನು ಮತ್ತೆ ಮತ್ತೆ ಸ್ಪಷ್ಟಪಡಿಸುತ್ತಿದ್ದೇನೆ. ಯಾರೂ ಉತ್ಸಾಹ ಕಳೆದುಕೊಳ್ಳಬೇಡಿ‌. ನಾವು ನಿಮ್ಮ ಜೊತೆ ಇದ್ದೇವೆ. ತಳಮಟ್ಟದಲ್ಲಿ ಪಕ್ಷ ಸಾಕಷ್ಟು ಸದೃಢವಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆಯೇ ಇದಕ್ಕೆ ಸಾಕ್ಷಿ ಎಂದರು.

2023ರ ಸಾರ್ವತ್ರಿಕ ಚುನಾವಣೆ, ತಾಲೂಕುಮಟ್ಟದ ಚುನಾವಣೆ, ಜಿಲ್ಲಾ ಪಂಚಾಯತ್ ಚುನಾವಣೆಗೆ ಅತಿ ಹೆಚ್ಚು ಆದ್ಯತೆ ನೀಡುತ್ತೇನೆ‌. ಪಕ್ಷ ಒಂದು ಜವಾಬ್ದಾರಿ ನೀಡಿದೆ. ಒಂದು ದಿನ ಬೆಳಗ್ಗೆ ದೇವೇಗೌಡರ ಪಿಎ ಅಂಜನಗೌಡರು ಫೋನ್ ಮಾಡಿ ತಕ್ಷಣ ಪಕ್ಷದ ಕಚೇರಿಗೆ ಬನ್ನಿ ಎಂದು ಹೇಳಿದ್ರು, ಬಂದೆ. ವಿದ್ಯಾರ್ಥಿ ಘಟಕದ ಅಧ್ಯಕ್ಷನನ್ನಾಗಿ ಮಾಡಿದರು. ಕುಮಾರಸ್ವಾಮಿ ಅವರ ಹಾಗೆ ನಾನು ತಾಳ್ಮೆಯಿಂದ ವರ್ತನೆ ಮಾಡುತ್ತೇನೆ ಎಂದರು.

ಪಕ್ಷ ವೀಕ್ ಇಲ್ಲ, ಸಮರ್ಥವಾಗಿದೆ. ಹಿರಿಯರು ನಮ್ಮ ಪಕ್ಷದಲ್ಲಿ ಇದ್ದಾರೆ, ಅವರು ಅವರ ಅನುಭವವನ್ನು ನೀಡುತ್ತಾರೆ. ಪಕ್ಷ ಕಟ್ಟುವುದಕ್ಕೆ ಕುಮಾರಣ್ಣ ಮನಸಿನಲ್ಲಿ ದೃಢ ನಿರ್ಧಾರ ಮಾಡಿದ್ದಾರೆ. ಪ್ರಜ್ವಲ್ ಅವರಿಗೆ ಹೇಳಿದ ಕಿವಿಮಾತು ನಾನು ನೆನಪಿಟ್ಟುಕೊಂಡಿದ್ದೇನೆ. ಅಧಿಕಾರಕ್ಕೆ ಕೆಲಸ ಮಾಡಬೇಡಿ, ಕೆಲಸ ಮಾಡುತ್ತಾ ಹೋಗಿ ಎಂದು ಹೇಳಿದ್ದಾರೆ. ನಾನು ಅದನ್ನು ಪಾಲಿಸುತ್ತೇನೆ ಎಂದು ಹೇಳಿದರು.

ನಾನು ಮುಂದಿನ ದಿನಗಳಲ್ಲಿ ಮತ್ತೆ ರಾಜಕೀಯ ಜೀವನ ಪ್ರಾರಂಭ ಮಾಡುತ್ತೇನೆ ಎಂದು ಪತ್ರಿಕೆಗಳಲ್ಲಿ ಬರೆಯುತ್ತಿದ್ದಾರೆ. ಯುವ ಜನತಾದಳದಲ್ಲಿ ವಯೋಮಿತಿ ಮಾಡಿಕೊಳ್ಳುವ ಬಗ್ಗೆ ನಿಮ್ಮ ಬಳಿ ಅಭಿಪ್ರಾಯ ಕೇಳುತ್ತೇನೆ. ಏಕೆಂದರೆ ಬೇರೆ ಪಕ್ಷದಲ್ಲಿ ವಯೋಮಿತಿ ಇದೆ ಎಂದರು.

ಸೋಷಿಯಲ್ ಮೀಡಿಯಾ ಬಳಕೆ: ಸೋಷಿಯಲ್ ಮೀಡಿಯಾ ಬಳಕೆ ಮಾಡಿಕೊಳ್ಳುವುದರಲ್ಲಿ ನಾವು ವೀಕ್ ಆಗಿದ್ದೇವೆ. ಹಾಗಾಗಿ ಅದನ್ನು ಸಮರ್ಥವಾಗಿ ಬಳಕೆ ಮಾಡುತ್ತೇವೆ ಎಂದರು.

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಹೇಳಿಕೆ:
ಪಕ್ಷ ಸೊರಗುತ್ತಿದೆ ಎಂಬುವುದು ಅಪ್ಪಟ ಸುಳ್ಳು. ಹೊಸ ವರ್ಷದಲ್ಲಿ ಯುವ ಜನರ ಸಂಘಟನೆಯಿಂದ ಆಗಬೇಕು ಎಂಬುದನ್ನು ನಿಖಿಲ್ ಕುಮಾರಸ್ವಾಮಿ ಅವರು ಅತ್ಯಂತ ಸ್ಪಷ್ಟವಾಗಿ ಮಾತಾಡಿದ್ದಾರೆ. ಅವರು ದೇವೇಗೌಡ, ಕುಮಾರಣ್ಣನ ಗರಡಿಯಲ್ಲಿ ಪಳಗಿದ್ದಾರೆ ಎಂದು ಹೇಳಿದರು. ಸರ್ಕಾರ ಹೋಗಲು, ನಮ್ಮ ನಾಯಕರು, ಕಾರ್ಯಕರ್ತರು, ದೇವೇಗೌಡರು, ಕುಮಾರಣ್ಣ ಮಾಡಿದ ಕೆಲಸ ಹೇಳದೆ ಇದ್ದದ್ದು ಕೂಡ ಕಾರಣ. ಗ್ರಾಮ ಪಂಚಾಯಿತಿಯಲ್ಲಿ ನಮ್ಮ ಪಕ್ಷದ ಯುವಕರು ಹೆಚ್ಚು ಗೆದ್ದಿದ್ದಾರೆ. ನಾವು ಪಕ್ಷವನ್ನು ನಿರಂತರವಾಗಿ ಸಂಘಟನೆ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ:ನಮ್ಮದು ಜಾಗತಿಕ ಕಂಪನಿ, ಲಸಿಕೆ ಬಗ್ಗೆ ಯಾವುದೇ ಅನುಮಾನ ಬೇಡ: ಭಾರತ್​ ಬಯೋಟೆಕ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.