ಬೆಂಗಳೂರು : ಭಾರತದ ಹಾಗೂ ಈ ಕನ್ನಡ ಮಣ್ಣಿನ ಇತಿಹಾಸ ಎಂದೂ ಮರೆಯದ ಸಾಧನೆ ಮಾಡಿರುವ ಹೆಚ್.ಡಿ. ದೇವೇಗೌಡ ಅವರು ದೆಹಲಿಯ ಗದ್ದುಗೆ ಏರಿ ಇಂದಿಗೆ (ಜೂ.1 ಕ್ಕೆ ) 25 ವರ್ಷಗಳಾದವು ಎಂದು ಗೌಡರ ಮೊಮ್ಮಗ, ನಟ ಹಾಗೂ ಜೆಡಿಎಎಸ್ನ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಮರಿಸಿಕೊಂಡಿದ್ದಾರೆ.
ಈ ಕುರಿತು ತಮ್ಮ ಟ್ವೀಟ್ ಖಾತೆಯಲ್ಲಿ ಇಂದು ತಾತ (ದೇವೇಗೌಡ) ಅವರ ಬಗ್ಗೆ ಹಂಚಿಕೊಂಡಿದ್ದಾರೆ. ಭಾರತದ ಹಾಗೂ ಈ ಕನ್ನಡ ಮಣ್ಣಿನ ಇತಿಹಾಸ ಎಂದೂ ಮರೆಯದ ಸಾಧನೆ ಮಾಡಿರುವ @H_D_Devegowda ದೆಹಲಿಯ ಗದ್ದುಗೆ ಏರಿ ಇಂದಿಗೆ 25 ವರ್ಷಗಳಾದವು. ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದರೂ ಅತ್ಯುನ್ನತ ಹುದ್ದೆ ಏರಿದ ಈ ಅಪ್ರತಿಮ ಸಾಧನೆ ಪ್ರತಿಯೊಬ್ಬ ಕನ್ನಡಿಗನಿಗೂ ಸ್ಪೂರ್ತಿಯಾಗಲಿ ಎಂದು ಹೇಳಿದ್ದಾರೆ.
ಅನಿರೀಕ್ಷಿತವಾಗಿ ದೇವೇಗೌಡರು 1996 ಜೂ. 1 ರಂದು ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಕರ್ನಾಟಕದಿಂದ ಪ್ರಧಾನಿಯಾದ ಏಕೈಕ ರಾಜಕಾರಣಿ ಎಂಬ ಹೆಗ್ಗಳಿಕೆಗೆ ದೇವೇಗೌಡರು ಪಾತ್ರರಾಗಿದ್ದಾರೆ. ಕೇವಲ 10 ತಿಂಗಳ ಕಾಲ ಅಧಿಕಾರ ನಡೆಸಿದ ಗೌಡರು, ಎಲ್ಲರ ಹುಬ್ಬೇರಿಸುಂತೆ ಕಾರ್ಯ ನಿರ್ವಹಿಸಿದ್ದರು.