ETV Bharat / state

ಬೆಂಗಳೂರು ಗಲಭೆ ಪ್ರಕರಣ: ಎನ್​ಐಎ ಸಲ್ಲಿಸಿದ 7 ಸಾವಿರ ಪುಟಗಳ ಚಾರ್ಜ್​ಶೀಟ್​ನಲ್ಲಿ ಏನಿದೆ? - ಡಿ.ಜೆ.ಹಳ್ಳಿ ಗಲಭೆ ಚಾರ್ಜ್​ಶೀಟ್

ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಡಿಜೆ ಹಳ್ಳಿ ಕೆಜಿ ಹಳ್ಳಿ ಘಟನೆ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ 7 ಸಾವಿರ ಪುಟಗಳ ಚಾರ್ಜ್​ಶೀಟ್​ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಈ ಗಲಭೆ ಬಗೆಗಿನ ಸಂಪೂರ್ಣ ಮಾಹಿತಿ ಹಾಗೂ ಗಲಭೆಗೆ ಕಾರಣವಾದ ಪ್ರಮುಖ ಅಂಶಗಳನ್ನು ಉಲ್ಲೇಖಿಸಲಾಗಿದೆ.

File Photo
ಸಂಗ್ರಹ ಚಿತ್ರ
author img

By

Published : Feb 23, 2021, 6:04 PM IST

ಬೆಂಗಳೂರು: ಕಳೆದ ವರ್ಷ ಆ. 11ರಂದು ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ‌ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಫೆ. 10ರಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಚಾರ್ಜ್​ಶೀಟ್ ಲಭ್ಯವಾಗಿದೆ.

ಫೆ. 10ರಂದು ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಎನ್ಐಎ 7 ಸಾವಿರ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದೆ. ಗಲಭೆಯಲ್ಲಿ ಇದೂವರೆಗೆ 247 ಮಂದಿ ಆರೋಪಿಗಳ ಬಂಧನವಾಗಿದ್ದು, ಈ ಪೈಕಿ 40ಕ್ಕೂ ಅಧಿಕ ಗಲಭೆಕೋರರು ಸೋಷಿಯಲ್‌ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್​​​ಡಿಪಿಐ) ಸಂಘಟನೆಯ ಸದಸ್ಯರಾಗಿದ್ದಾರೆ. ಫೈರೋಜ್ ಪಾಶಾ, ಮೊಹಮ್ಮದ್ ಶರೀಫ್, ಮುಜಾಮಿಲ್ ಪಾಶಾ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮೊದಲೇ ಸಂಚು ರೂಪಿಸಿದ್ದ ಆರೋಪಿಗಳು,‌ ಕೃಷ್ಣ ಜನ್ಮಾಷ್ಟಮಿ ದಿನವನ್ನು ಟಾರ್ಗೆಟ್​ ಮಾಡಿದ್ದರು. ಇದೇ ವೇಳೆ ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಂಬಂಧಿ ನವೀನ್, ಫೇಸ್​ಬುಕ್​ನಲ್ಲಿ ಅವಹೇಳಕಾರಿಯಾಗಿ ಪೋಸ್ಟ್ ಮಾಡಿದ್ದ. ಈ ಪರಿಸ್ಥಿತಿಯನ್ನೇ ಸದುಪಯೋಗಪಡಿಸಿಕೊಂಡ ಆರೋಪಿಗಳು, ಗಲಭೆ ಎಬ್ಬಿಸಿದ್ದರು ಎಂದು ಉಲ್ಲೇಖಿಸಲಾಗಿದೆ.

ಅವಹೇಳನಕಾರಿ ಪೋಸ್ಟ್ ಬೆನ್ನಲ್ಲೇ ಎಸ್​​ಡಿಪಿಐ ಸಂಘಟನೆ ಸದಸ್ಯರು, ಶಾಸಕರ ಮನೆ ಹಾಗೂ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಠಾಣೆಗಳ ಮುಂದೆ ಜಮಾವಣೆಗೊಂಡಿದ್ದರು. ಪ್ರತಿಭಟನಾಕಾರರು ಫೇಸ್​​ಬುಕ್ ಹಾಗೂ ಇತರ ಸಾಮಾಜಿಕ ಮಾಧ್ಯಮಗಳ ಮೂಲಕ ಗಲಭೆಯಲ್ಲಿ ಪಾಲ್ಗೊಳ್ಳುವಂತೆ ಪ್ರಚೋದನೆ ಮಾಡಿದ್ದರಿಂದ ಹೊರಗಿನಿಂದ ಜನ ಸೇರಲು ಕಾರಣವಾಯಿತು.

ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ಒಗ್ಗೂಡಿಸಿದ್ದ ಕಾರ್ಯಕರ್ತರು, ಗಲಭೆ ಎಬ್ಬಿಸಿದ್ದಾರೆ. ಪೊಲೀಸ್​​ ಠಾಣೆಗಳ ಮೇಲಿನ ದಾಳಿಗೆ ಪ್ರೇರಣೆಯಾಗಿದ್ದೂ ಸಹ ಸಾಮಾಜಿಕ ಜಾಲತಾಣವಾಗಿದೆ ಎಂದು ಎನ್‌ಐಎ ಸಲ್ಲಿಸಿದ ಚಾರ್ಜ್​ಶೀಟ್​​ನಲ್ಲಿ ಪ್ರಮುಖ ಅಂಶಗಳಾಗಿ ಉಲ್ಲೇಖಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.