ETV Bharat / state

ಐಸಿಸ್ ಬೆಂಬಲಿಸುತ್ತಿದ್ದ ಆರೋಪಿ ದೋಷಿ: ಎನ್ಐಎ ವಿಶೇಷ ನ್ಯಾಯಾಲಯ ತೀರ್ಪು

author img

By ETV Bharat Karnataka Team

Published : Jan 18, 2024, 12:31 PM IST

Updated : Jan 18, 2024, 2:16 PM IST

ಐಸಿಸ್‌ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುತ್ತಿದ್ದ ಆರೋಪಿಯನ್ನು 'ದೋಷಿ' ಎಂದು ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಎನ್ಐಎ ವಿಶೇಷ ನ್ಯಾಯಾಲಯ
ಎನ್ಐಎ ವಿಶೇಷ ನ್ಯಾಯಾಲಯ

ಬೆಂಗಳೂರು: ಐಸಿಸ್ ಭಯೋತ್ಪಾದಕ ಸಂಘಟನೆಗೆ ಬೆಂಬಲವಾಗಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಈ ಹಿಂದೆ ಟ್ವಿಟ್ಟರ್‌) ಮಾಹಿತಿ ಪ್ರಕಟಿಸುತ್ತಿದ್ದ ಆರೋಪಿಯನ್ನು 'ದೋಷಿ' ಎಂದು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಪ್ರಕರಣಗಳ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. 2012 ಮತ್ತು 2014ರ ಅವಧಿಯಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಮಾಡುವ ಮೂಲಕ ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲವಾಗಿದ್ದ ಮೆಹದಿ ಮಸ್ರೂರ್ ಬಿಸ್ವಾಸ್ (33) ಎಂಬಾತ ದೋಷಿ ಎಂದು ನ್ಯಾಯಾಲಯ ತೀರ್ಪಿತ್ತಿದೆ. ಶಿಕ್ಷೆಯ ಪ್ರಮಾಣವನ್ನು ಶುಕ್ರವಾರ ಪ್ರಕಟಿಸಲಿದೆ.

2014ರ ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಆರೋಪಿ ಬಿಸ್ವಾಸ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಈತ @ShamiWitness ಮೂಲಕ ಐಸಿಸ್‌ ಸಿದ್ಧಾಂತಗಳಿಗೆ ಬೆಂಬಲ ಸೂಚಿಸುತ್ತಿದ್ದ. ಈ ಕುರಿತು ಯುಕೆ ಮೂಲದ ಮಾಧ್ಯಮವೊಂದು ವರದಿ ಮಾಡಿತ್ತು. ನಂತರ ಜಾಲಹಳ್ಳಿಯಲ್ಲಿರುವ ಫ್ಲಾಟ್‌ನಿಂದ ಆರೋಪಿಯನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು ಆತನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದರು. ಈ ವೇಳೆ ಜಾಮೀನು ಪಡೆಯಲು ಯತ್ನಿಸಿದ್ದ ಆರೋಪಿ ವಿಫಲವಾಗಿದ್ದನು.

ಕಾನೂನುಬಾಹಿರ ಚಟುವಟಿಕೆ (ತಡೆಗಟ್ಟುವಿಕೆ) ಕಾಯಿದೆ ಜೊತೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 121 (ಭಾರತ ಸರ್ಕಾರದ ವಿರುದ್ಧ ಯುದ್ಧ/ಯುದ್ಧ ಪ್ರಯತ್ನ), 125 (ಭಾರತ ಸರ್ಕಾರದೊಂದಿಗೆ ಮೈತ್ರಿ ಹೊಂದಿರುವ ಯಾವುದೇ ಏಷ್ಯಾಟಿಕ್ ಶಕ್ತಿಯ ವಿರುದ್ಧ ಯುದ್ಧ) ಮತ್ತು 153-ಎ (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ ಮತ್ತು ಭಾಷೆಯ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸೌಹಾರ್ದತೆ ಕಾಪಾಡಲು ಪೂರ್ವಾಗ್ರಹ ಪೀಡಿತ ಕೃತ್ಯಗಳನ್ನು ಮಾಡುವುದು) ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಈತನ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು.

ಈ ಪೈಕಿ ಐಪಿಸಿ ಸೆಕ್ಷನ್ 121ರ ಅಪರಾಧದಿಂದ ಕೋರ್ಟ್‌ ಆರೋಪಿಯನ್ನು ಖುಲಾಸೆಗೊಳಿಸಿತ್ತು. ಆದರೆ ಕಾನೂನುಬಾಹಿರ ಚಟುವಟಿಕೆಗಳಿಗೆ ಸಂಬಂಧಿಸಿದ ಯುಎಪಿಎ ಸೆಕ್ಷನ್‌ಗಳು, ಭಯೋತ್ಪಾದಕ ಕೃತ್ಯಗಳಿಗೆ ಕೇಡರ್ ನೇಮಕಾತಿ ಮತ್ತು ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸುವುದೂ ಸೇರಿದಂತೆ ಇತರ ಸೆಕ್ಷನ್‌ಗಳಡಿಯಲ್ಲಿ 'ಅಪರಾಧಿ' ಎಂದು ಘೋಷಿಸಲಾಗಿದೆ.

ಆರೋಪಿ ಒಟ್ಟಾರೆ 1,22,208 ಟ್ವೀಟ್‌ಗಳನ್ನು ಮಾಡಿದ್ದು, ಅವುಗಳಲ್ಲಿ ಹೆಚ್ಚಿನವು ಐಸಿಸ್ ಚಟುವಟಿಕೆಗಳಿಗೆ ಸಂಬಂಧಿಸಿವೆ. ಟ್ವೀಟ್‌ಗಳೊಂದಿಗೆ 15,500 ಚಿತ್ರಗಳನ್ನೂ ಪೋಸ್ಟ್ ಮಾಡಿದ್ದನು. ಆರಂಭದಲ್ಲಿ, ಜಮಾತ್ ನುಸ್ರತ್ ಅಲ್-ಇಸ್ಲಾಂ ವಾಲ್ ಮುಸ್ಲಿಮಿನ್ (ಜೆಎನ್‌ಐಎಂ) ಸಂಘಟನೆಯನ್ನು ಬೆಂಬಲಿಸುತ್ತಿದ್ದ ಬಿಸ್ವಾಸ್ ನಂತರ ಐಸಿಸ್ ಬೆಂಬಲಿಸಲಾರಂಭಿಸಿದ್ದ. ಸಿರಿಯಾ ಮತ್ತು ಇತರ ದೇಶಗಳಿಂದ ಭಯೋತ್ಪಾದಕ ಶಂಕಿತರು ಎಂದು ಗುರುತಿಸಲಾದ 88 ಜನರೊಂದಿಗೆ ಸಂಪರ್ಕದಲ್ಲಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿತ್ತು.

ಇದನ್ನೂ ಓದಿ: ಬೆಂಗಳೂರು: ಇಬ್ಬರು ಅಲ್-ಖೈದಾ ಸದಸ್ಯರಿಗೆ 7 ವರ್ಷ ಜೈಲು ಶಿಕ್ಷೆ

Last Updated : Jan 18, 2024, 2:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.