ಬೆಂಗಳೂರು: ನಕಲಿ ಭಾರತೀಯ ನೋಟು ಚಲಾವಣೆ ದಂಧೆಯ ಕುರಿತು ಮಾಹಿತಿ ಆಧರಿಸಿದ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಬೆಂಗಳೂರು ಸೇರಿದಂತೆ ದೇಶಾದ್ಯಂತ ಹಲವೆಡೆ ದಾಳಿ ನಡೆಸಿದೆ. ಮುಂಬೈ, ಉತ್ತರ ಪ್ರದೇಶ, ಕರ್ನಾಟಕದ ಬಳ್ಳಾರಿ, ಬೆಂಗಳೂರಿನ ಪುಲಿಕೇಶಿ ನಗರ, ಜೆ ಸಿ ನಗರ, ಫ್ರೇಜರ್ ಟೌನ್ ಸೇರಿದಂತೆ ವಿವಿಧೆಡೆ ಎನ್ಐಎ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಕೆಲ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಬೆಂಗಳೂರು ಪೂರ್ವ ವಿಭಾಗದ ಹಲವು ಕಡೆಗಳಲ್ಲಿ ಶೋಧ ಮುಂದುವರೆದಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮಂಗಳೂರು: ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಆರೋಪಿ ಸೆರೆ