ETV Bharat / state

ಬೆಂಗಳೂರಲ್ಲಿ ಶಂಕಿತ ಐಸಿಸ್​ ಉಗ್ರನ ಬಂಧನ

author img

By

Published : Nov 17, 2021, 10:27 PM IST

ಬೆಂಗಳೂರಲ್ಲಿ ಶಂಕಿತ ಉಗ್ರನನ್ನು(Suspected ISIS Terrorist) ಬಂಧಿಸಲಾಗಿದ್ದು, ಈತ ಸಿರಿಯಾದ ಮುಸ್ಲಿಂ ಜನಾಂಗದವರ ಮೇಲೆ ನಡೆಯುತ್ತಿರುವ ಹಿಂಸಾಚಾರದ ದೃಶ್ಯಗಳನ್ನು ತೋರಿಸಿ ಪ್ರಚೋದನೆ ಮಾಡುತ್ತಿದ್ದ. ಸ್ಥಳೀಯ ಧರ್ಮದ ಯುವಕರನ್ನು ಸೆಳೆದು, ಟರ್ಕಿ ಮೂಲಕ ಸಿರಿಯಾ ದೇಶಕ್ಕೆ ಕಳಿಸುತ್ತಿದ್ದ.

nia-arrested-suspected-isis-terrorist-in-bengaluru
ಬೆಂಗಳೂರಲ್ಲಿ ಶಂಕಿತ ಐಸಿಸ್​ ಉಗ್ರನ ಬಂಧನ

ಬೆಂಗಳೂರು: ನಿಷೇಧಿತ ಐಸಿಸ್ ಉಗ್ರ ಸಂಘಟನೆಯ ಮತ್ತೊಬ್ಬ ಶಂಕಿತ ಉಗ್ರನನ್ನು (Suspected ISIS Terrorist arrested in Bengaluru) ರಾಷ್ಟ್ರೀಯ ತನಿಖಾ ತಂಡ ಬಂಧಿಸಿದೆ.

ಹಲವು ತಿಂಗಳಿಂದ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರ ಜೊಹೈಬ್ ಮನ್ನಾ(Suspected terrorist Johaib Manna) ಎಂಬಾತನನ್ನು ಬಂಧಿಸಲಾಗಿದೆ. ನಿಷೇಧಿತ ಉಗ್ರ ಸಂಘಟನೆಗಳಾದ ಐಸಿಸ್, ಐಎಸ್ಐಎಲ್ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಈತನಿಗಾಗಿ 2020ರಿಂದಲೂ ಹುಡುಕಾಟ ನಡೆದಿತ್ತು.

ಜೊಹೈಬ್ ನಿರ್ದಿಷ್ಟ ಯುವಕರನ್ನ ಸೆಳೆದು ಐಸಿಸ್ ಸಂಘಟನೆಗೆ ಕಳಿಸುವಲ್ಲಿ ನಿರತನಾಗಿದ್ದ‌. ಕುರಾನ್ ಸರ್ಕಲ್ ಹೆಸರಿನಲ್ಲಿ ಗ್ರೂಪ್‌ ಮೂಲಕ ಅನ್ಯ ಕೋಮಿನ ಯುವಕರನ್ನ ಸೆಳೆದು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಪ್ರಚೋದನೆ ನೀಡುತ್ತಿದ್ದ‌. ಬಂಧಿತನು ಸಿರಿಯಾದ ಮುಸ್ಲಿಂ ಜನಾಂಗದವರ ಮೇಲೆ ನಡೆಯುತ್ತಿರುವ ಹಿಂಸಾಚಾರದ ದೃಶ್ಯಗಳನ್ನು ತೋರಿಸಿ ಪ್ರಚೋದನೆ ಮಾಡುತ್ತಿದ್ದನು. ಸ್ಥಳೀಯ ಧರ್ಮದ ಯುವಕರನ್ನ ಸೆಳೆದು, ಟರ್ಕಿ ಮೂಲಕ ಸಿರಿಯಾ ದೇಶಕ್ಕೆ ಕಳಿಸುತ್ತಿದ್ದ ಎಂದು ಎನ್ಐಎ ತನಿಖೆಯಲ್ಲಿ(NIA arrested ISIS Terrorist) ತಿಳಿದುಬಂದಿದೆ.

2020ರ ಸೆಪ್ಟೆಂಬರ್‌ನಲ್ಲಿ ಐಸಿಸ್ ಸಂಘಟನೆಗೆ ಯುವಕರ ನೇಮಕ ಮತ್ತು ದೇಣಿಗೆ ಸಂಗ್ರಹ ಪ್ರಕರಣದಲ್ಲಿ ಎನ್‌ಐಎ ಕಾರ್ಯಾಚರಣೆ ನಡೆಸಿ ಫ್ರೇಜರ್ ಟೌನ್‌ನ ಅಕ್ಕಿ ವ್ಯಾಪಾರಿ ಇರ್ಫಾನ್ ನಾಸೀರ್ ಮತ್ತು ತಮಿಳುನಾಡಿನ ಬ್ಯಾಂಕ್ ನೌಕರ ಅಹಮ್ಮದ್ ಅಬ್ದುಲ್ ಖಾದರ್, ದಂತ ವೈದ್ಯ ಡಾ.ಮಹಮ್ಮದ್ ತೌಕೀರ್ ಮೆಹಬೂಬ್ ಎಂಬುವರನ್ನು ಬಂಧಿಸಿದ್ದರು. ಈ ಗ್ಯಾಂಗ್‌ನ ಜುಹೇಬ್ ಹಮ್ಮಿದ್ ತಲೆಮರೆಸಿಕೊಂಡಿದ್ದ. 1 ವರ್ಷದ ಬಳಿಕ ಶಂಕಿತನನ್ನು ಎನ್‌ಐಎ ಅಧಿಕಾರಿಗಳು ಕಸ್ಟಡಿಗೆ ಪಡೆದು ತನಿಖೆ ಮುಂದುವರೆಸಿದ್ದಾರೆ.

ಸಿರಿಯಾದ ಐಸಿಸ್ ಭಯೋತ್ಪಾದಕ ಸಂಘಟನೆ ನಾಯಕರ ಜತೆ ಸಂಪರ್ಕ ಹೊಂದಿದ್ದ ಶಂಕಿತರು ಹಣಕಾಸಿನ ನೆರವು ಪಡೆಯುತ್ತಿದ್ದರು. ಸಿಲಿಕಾನ್ ಸಿಟಿಯ ಮುಸ್ಲಿಂ ಯುವಕರನ್ನು ಸಂಪರ್ಕ ಮಾಡಿ ಧರ್ಮ ಬೋಧನೆ ನೆಪದಲ್ಲಿ ಐಸಿಸ್ ಒಲವು ಮೂಡಿಸುತ್ತಿದ್ದರು. ಉಗ್ರ ಚಟುವಟಿಕೆಗಳಿಗೆ ಪ್ರಚೋದನೆ ನೀಡಿ ಐಸಿಸ್ ಸಂಘಟನೆಗೆ ನೇಮಕಾತಿ ಮಾಡುತ್ತಿದ್ದರು. ತಮ್ಮ ಬಲೆಗೆ ಬಿದ್ದ ಮೂಲಭೂತವಾದಿಗಳ ಮನ ಪರಿವರ್ತನೆ ಮಾಡಿ ಹಣಕಾಸಿನ ನೆರವು ನೀಡಿ ತುರ್ಕಿ ವೀಸಾ ಕೊಟ್ಟು ಸಿರಿಯಾಗೆ ಕಳುಹಿಸಿ ಐಸಿಸ್ ತರಬೇತಿ ಕೊಡಿಸುತ್ತಿದ್ದರು. ಸಿರಿಯಾ ಗಡಿ ಭಾಗವನ್ನು ದಾಟಿಸುವವರೆಗೂ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದರು. ಆರೇಳು ಗುಂಪನ್ನು ಸಿರಿಯಾಗೆ ಕಳುಹಿಸಿರುವುದು ಎನ್‌ಐಎ (NIA) ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.

ಬೆಂಗಳೂರು ಹೊರವಲಯದಲ್ಲಿ ಕ್ಯಾಂಪ್:

ಶಂಕಿತ ಉಗ್ರ ಜೊಹೈಬ್​ಗೆ ಸೌದಿ ಅರೇಬಿಯಾದಲ್ಲಿ ನೆಲೆಸಿದ್ದ ಕೆಲ ಶಂಕಿತರು ಕುರಾನ್ ಸರ್ಕಲ್‌ಗೆ ಆರ್ಥಿಕ ನೆರವು ನೀಡುತ್ತಿದ್ದ. ಯಾವ ವ್ಯಕ್ತಿಯನ್ನು ಟಾರ್ಗೆಟ್ ಮಾಡಬೇಕೆಂದು ಸೂಚನೆ ಸಹ ಕೊಡುತ್ತಿದ್ದರು. ಬೆಂಗಳೂರು ಹೊರ ವಲಯದಲ್ಲಿ 'ಇಕ್ರಾ ಕ್ಯಾಂಪ್' ನಡೆಸಿ ಉಗ್ರ ಚಟುವಟಿಕೆ ಕುರಿತು ತರಬೇತಿ ನೀಡಿದ್ದಾರೆ. ಕ್ಯಾಂಪ್‌ನಲ್ಲಿ 'ಭವಿಷ್ಯದ ಐಸಿಸ್' ನಿರ್ಮಾಣ ಕುರಿತು ಪ್ಲ್ಯಾನ್ ಮಾಡುತ್ತಿದ್ದರು ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Weather Report : ರಾಜ್ಯದಲ್ಲಿ ಈಶಾನ್ಯ ಹಿಂಗಾರು ಚುರುಕು, ಇನ್ನೆರಡು ದಿನ ಮಳೆ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.