ಬೆಂಗಳೂರು: ನಗರದಲ್ಲಿ ಐಸಿಸ್ ಪ್ರೇರಿತ ಉಗ್ರರ ಬಂಧನ ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಉಗ್ರ ಅಬ್ದುಲ್ ಮತೀನ್ ಸುಳಿವು ನೀಡಿದವರಿಗೆ 3 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಎನ್ಐಎ ಘೋಷಿಸಿದೆ.
ತಮಿಳುನಾಡಿನಲ್ಲಿ ಹಿಂದೂ ಮುಖಂಡನ ಹತ್ಯೆಯಲ್ಲಿ ಐಸಿಸ್ ಪ್ರೇರಿತ ಅಬ್ದುಲ್ ಮತೀನ್ ಹಾಗೂ ಆತನ ಸಹಚರರು ಭಾಗಿಯಾಗಿದ್ದರು. ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ವಿಧ್ವಂಸಕ ಕೃತ್ಯವೆಸಗಲು ನಗರದ ಸದ್ದುಗುಂಟೆಪಾಳ್ಯದ ಪಿಜಿಯಲ್ಲಿ ಕುಳಿತು ಸಂಚು ರೂಪಿಸಿದ್ದರು.
ಖಚಿತ ಮಾಹಿತಿ ಮೇರೆಗೆ ಪಿಜಿ ಮೇಲೆ ಎನ್ಐಎ ತನಿಖಾಧಿಕಾರಿಗಳು ದಾಳಿ ನೆಡೆಸಿದ್ದರು. ಉಗ್ರ ಸಂಘಟನೆಯ ಮುಖ್ಯಸ್ಥ ಮೆಹಬೂಬ್ ಪಾಶಾ ಸೇರಿದಂತೆ ದೇಶದ ವಿವಿಧೆಡೆ 12 ಜನ ಉಗ್ರರನ್ನು ಬಂಧಿಸಲಾಗಿತ್ತು. ಮೆಹಬೂಬ್ ಜೊತೆ ನಿಕಟ ಸಂಪರ್ಕ ಹೊಂದಿದ್ದ ಅಬ್ದುಲ್ ಮತೀನ್ ಎಸ್ಕೇಪ್ ಆಗಿದ್ದು, ಈತನ ಬಗ್ಗೆ ಸುಳಿವು ನೀಡಿದವರಿಗೆ 3 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ.