ETV Bharat / state

ಕಸದ ಸಮಸ್ಯೆ ಬಗೆಹರಿಸಲು ಪಾಲಿಕೆ ಸದಸ್ಯರ ಸಲಹೆ ಕೇಳಿದ ಎನ್​ಜಿಟಿ ಮುಖ್ಯಸ್ಥ - banglore latest news

ನಿನ್ನೆ ನಡೆದ ಪಾಲಿಕೆ ವಿಶೇಷ ಕೌನ್ಸಿಲ್ ಸಭೆಯಲ್ಲಿ ಎನ್​ಜಿಟಿ ಮುಖ್ಯಸ್ಥರಾದ ಸುಭಾಷ್​ ಬಿ ಅಡಿ ಅವರು ನವೆಂಬರ್​​ ಒಳಗೆ ಬೆಂಗಳೂರಿನ ಕಸದ ಸಮಸ್ಯೆ ಬಗೆಹರಿಸಲು ಪಾಲಿಕೆ ಸದಸ್ಯರ ಸಲಹೆ ಕೇಳಿ, ಮಾಹಿತಿ ಪಡೆದರು.

ಕಸದ ಸಮಸ್ಯೆ ಬಗೆಹರಿಸಲು ಪಾಲಿಕೆ ಸದಸ್ಯರ ಸಲಹೆ ಕೇಳಿದ ಎನ್​ಜಿಟಿ ಮುಖ್ಯಸ್ಥ
author img

By

Published : Aug 18, 2019, 5:57 AM IST

ಬೆಂಗಳೂರು: ಬೆಂಗಳೂರಿನ ಕಸದ ಸಮಸ್ಯೆ ನವೆಂಬರ್ ವೇಳೆಗೆ ಸಂಪೂರ್ಣವಾಗಿ ಬಗೆಹರಿಯಬೇಕು. ಇದಕ್ಕೆ ಪಾಲಿಕೆ ಸದಸ್ಯರ ಬೆಂಬಲವೂ ಅತ್ಯಗತ್ಯ ಎಂದು ವಿಶೇಷ ಕೌನ್ಸಿಲ್ ಸಭೆಯಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಹಾಗೂ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯ ಘಟಕದ ಅಧ್ಯಕ್ಷ ಸುಭಾಷ್ ಬಿ ಅಡಿ ಅವರು ಪಾಲಿಕೆ ಸದಸ್ಯರ ಸಲಹೆ ಕೇಳಿದರು.

ಕಸದ ಸಮಸ್ಯೆ ಬಗೆಹರಿಸಲು ಪಾಲಿಕೆ ಸದಸ್ಯರ ಸಲಹೆ ಕೇಳಿದ ಎನ್​ಜಿಟಿ ಮುಖ್ಯಸ್ಥ

ನೂತನವಾಗಿ ಪಾಲಿಕೆ ಮಾಡುತ್ತಿರುವ ಹೊಸ ಹಸಿ ಕಸದ ಟೆಂಡರ್ ಬಗ್ಗೆ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಆಕ್ಷೇಪ ವ್ಯಕ್ತಪಡಿಸಿ, ಹೊಸ ಟೆಂಡರ್ ಪ್ರಕಾರ ಪ್ರತಿ ದಿನ ಹಸಿ ಕಸ ಕಲೆಕ್ಷನ್, ಎರಡು ದಿನ ಮಾತ್ರ ಒಣಕಸ ಕಲೆಕ್ಷನ್ ಈ ಯೋಜನೆ ಸಫಲವಾಗೋದಿಲ್ಲ ಎಂದರು.

ಇದಕ್ಕೆ ಸುಭಾಷ್ ಅಡಿಯವರು ಇಡೀ ರಾಜ್ಯದಲ್ಲಿ ಈ ನಿಯಮ ಒಪ್ಪದಿರುವವರು ನೀವು ಮಾತ್ರ ಎಂದ್ರು. ಇದಕ್ಕೆ ಪ್ರತ್ಯುತ್ತರ ನೀಡಿದ ಕಟ್ಟೆ ಸತ್ಯನಾರಾಯಣ, 23 ವರ್ಷದ ಅನುಭವದಿಂದ ಇದನ್ನು ಹೇಳುತ್ತಿದ್ದೇವೆ. ನಮ್ಮ ಮಾತನ್ನೂ ಕೇಳಬೇಕು ನೀವು. ಇಲ್ಲಿ ಬಂದು ಆರ್ಡರ್ ಮಾಡುವುದು ಸರಿಯಲ್ಲ ಎಂದರು. ಕಟ್ಟೆ ಮಾತಿಗೆ ತಿರುಗೇಟು ನೀಡಿದ ಸುಭಾಷ್​ ಅಡಿ, ಇದು ಮಾತನಾಡುವ ರೀತಿ ಅಲ್ಲ. ನಾನು ನಿಮ್ಮಿಂದ ಸಲಹೆ ಪಡೆಯಲು ಹಾಗೂ ವಿನಂತಿ ಮಾಡಿಕೊಳ್ಳಲು ಬಂದಿದ್ದೇನೆ. ಪಾರದರ್ಶಕವಾಗಿ ಕಸ ವಿಲೇವಾರಿಯಾಗಬೇಕು. ಪಾಲಿಕೆ ವೆಚ್ಚ ಕಡಿಮೆಯಾಗ್ಬೇಕು ಅನ್ನೋದು ನನ್ನ ಕಾಳಜಿ ಎಂದರು.

ಕ್ವಾರಿಗೆ ಕಸ ಹಾಕುವುದು ಕಾನೂನು ಬಾಹಿರ

ಎನ್​ಜಿಟಿ ನಿಯಮದ ಪ್ರಕಾರ ಕಲ್ಲು ಕ್ವಾರಿಗಳಲ್ಲಿ ಮಿಶ್ರತ್ಯಾಜ್ಯ ಹಾಕುವುದು ಅಪರಾಧ. ಇನ್ನು ಮುಂದೆ ಎನ್​ಜಿಟಿ ದೊಡ್ಡ ಮೊತ್ತದ ಫೈನ್ ಹಾಕಲಿದೆ. ಆದ್ರೆ ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಆರು ಸಾವಿರ ಟನ್ ಕಸದಲ್ಲಿ ಶೇಕಡಾ ಅರವತ್ತರಷ್ಟೂ ಕ್ವಾರಿಗೆ ಹೋಗುತ್ತಿದೆ. ಇದನ್ನು ತಕ್ಷಣವೇ ಸ್ಥಗಿತಗೊಳಿಸಬೇಕೆಂದು ಸುಭಾಷ್ ಬಿ ಅಡಿ ಸಭೆಯ ಗಮನಕ್ಕೆ ತಂದರು‌.

ವಾರ್ಡ್ ಗಳಲ್ಲೇ ಹಸಿಕಸ ಕಾಂಪೋಸ್ಟ್ ಮಾಡಲು ಸಲಹೆ

ಇನ್ನು, ಬಿಬಿಎಂಪಿ ವ್ಯಾಪ್ತಿಯಲ್ಲಿ ಏಳು ತ್ಯಾಜ್ಯ ಸಸ್ಕರಣಾ ಘಟಕಗಳಿದ್ದರೂ ಹೆಚ್ಚಿನ ಕಸ ಮಿಶ್ರತ್ಯಾಜ್ಯವಾಗಿರುವುದರಿಂದ ಕ್ವಾರಿಗಳಿಗೆ ಹೋಗುತ್ತಿವೆ. ಇನ್ಮುಂದೆ ಹಸಿ ಕಸ ಮೂಲದಲ್ಲಿಯೇ ಬೇರ್ಪಡಿಸಿ, ವಾರ್ಡ್ ಮಟ್ಟದಲ್ಲಿರುವ ಜಾಗದಲ್ಲಿ ಕಡ್ಡಾಯವಾಗಿ ಕಾಂಪೋಸ್ಟ್ ಮಾಡಲು ಪ್ರಯತ್ನಿಸಿ ಎಂದು ಸದಸ್ಯರಿಗೆ ಸಲಹೆ ನೀಡಿದ್ರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯರು ವಾರ್ಡ್​ಗಳಲ್ಲಿ ಜಾಗದ ಕೊರತೆಯಿದೆ ಎಂದರು. ಅಲ್ಲದೆ ಕೈಗಾರಿಕೆಗಳು, ಕಾರ್ಖಾನೆಗಳ ಕಸವನ್ನು ಪ್ರತ್ಯೇಕವಾಗಿ ವಿಲೇವಾರಿ ಮಾಡುವಂತೆ ಪೀಣ್ಯ, ರಾಜಾಜಿನಗರ ವಲಯದ ಸದಸ್ಯರು ಮನವಿ ಮಾಡಿದ್ರು.

ಇನ್ನು, ಸೆಪ್ಟೆಂಬರ್ ಒಂದರಿಂದಲೇ ಎಲ್ಲಾ ರೀತಿಯ ಪ್ಲಾಸ್ಟಿಕ್ ನಿಷೇಧ ಮಾಡಬೇಕು ಎಂದು ಸುಭಾಷ್ ಅಡಿ ಅವರು ಸದಸ್ಯರಲ್ಲಿ ಮನವಿ ಮಾಡಿದರು.

Intro:ಎನ್ ಜಿಟಿ ರಾಜ್ಯ ಮುಖ್ಯಸ್ಥರು ಹಾಗೂ ಪಾಲಿಕೆ ಸದಸ್ಯರ ನಡುವೆ ಮಾತಿನ ಚಕಮಕಿ

ಬೆಂಗಳೂರು- ಬೆಂಗಳೂರಿನ ಕಸದ ಸಮಸ್ಯೆ ನವೆಂಬರ್ ವೇಳೆಗೆ ಸಂಪೂರ್ಣವಾಗಿ ಬಗೆಹರಿಯಬೇಕು. ಇದಕ್ಕೆ ಪಾಲಿಕೆ ಸದಸ್ಯರ ಬೆಂಬಲವೂ ಅತ್ಯಗತ್ಯ ಎಂದು ಇಂದಿನ ವಿಶೇಷ ಕೌನ್ಸಿಲ್ ಸಭೆಯಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಹಾಗೂ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ರಾಜ್ಯ ಘಟಕದ ಅಧ್ಯಕ್ಷರಾಗಿರುವ ಸುಭಾಷ್ ಬಿ ಅಡಿ ಅವರು ಪಾಲಿಕೆ ಸದಸ್ಯರ ಸಲಹೆ ಕೇಳಿದರು.
ಈ ವೇಳೆ ನೂತನವಾಗಿ ಪಾಲಿಕೆ ಮಾಡುತ್ತಿರುವ ಹೊಸ ಹಸಿ ಕಸದ ಟೆಂಡರ್ ಬಗ್ಗೆ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಆಕ್ಷೇಪ ವ್ಯಕ್ತಪಡಿಸಿದಾಗ, ಸುಭಾಷ್ ಬಿ ಆಡಿ ಹಾಗೂ ಕಟ್ಟೆ ಸತ್ಯನಾರಾಯಣ ನಡುವೆ ಮಾತಿನ ಚಕಮಕಿ ನಡೆಯಿತು. ಎಲ್ಲಾ ದಿನವೂ ಒಣಕಸವನ್ನೂ ಜೊತೆಗೆ ತೆಗೆದುಕೊಂಡು ಹೋಗದಿದ್ದರೆ, ಮತ್ತೆ ರಸ್ತೆಯಲ್ಲೇ ಜನ ಕಸ ಎಸೆಯುತ್ತಾರೆ. ಹೊಸ ಟೆಂಡರ್ ಪ್ರಕಾರ ಪ್ರತೀದಿನ ಹಸಿ ಕಸ ಕಲೆಕ್ಷನ್, ಎರಡು ದಿನ ಮಾತ್ರ ಒಣಕಸ ಕಲೆಕ್ಷನ್, ಈ ಯೋಜನೆ ಸಫಲವಾಗೋದಿಲ್ಲ ಎಂದರು.ಈ ವೇಳೆ ಸುಭಾಷ್ ಅಡಿಯವರು ಮಾತಬಾಡಿ, ಇಡೀ ರಾಜ್ಯದಲ್ಲಿ ಈ ನಿಯಮ ಒಪ್ಪದಿರುವವರು ನೀವು ಮಾತ್ರ ಎಂದರು. ಇದಕ್ಕೆ ಪ್ರತ್ಯುತ್ತರ ನೀಡಿದ ಕಟ್ಟೆ, 23 ವರ್ಷದ ಅನುಭವದಿಂದ ಇದನ್ನು ಹೇಳುತ್ತಿದ್ದೇವೆ. ನಮ್ಮ ಮಾತನ್ನೂ ಕೇಳಬೇಕು ನೀವು. ಇಲ್ಲಿ ಬಂದು ಆರ್ಡರ್ ಮಾಡುವುದು ಸರಿಯಲ್ಲ ಎಂದರು. ಇದು ಮಾತನಾಡುವ ರೀತಿ ಅಲ್ಲ, ನಾನು ನಿಮ್ಮಿಂದ ಸಲಹೆ ಪಡೆಯಲು, ವಿನಂತಿ ಮಾಡಿಕೊಳ್ಳಲು ಬಂದಿದ್ದೇನೆ. ಪಾರದರ್ಶಕವಾಗಿ ಕಸ ವಿಲೇವಾರಿಯಾಗಬೇಕು, ಪಾಲಿಕೆ ವೆಚ್ಚ ಕಡಿಮೆಯಾಗ್ಬೇಕು ಅನ್ನೋದು ನನ್ನ ಕಾಳಜಿ ಎಂದು ಸುಭಾಷ್ ಬಿ ಅಡಿ ತಿರುಗೇಟು ನೀಡಿದರು‌.

ಕ್ವಾರಿಗೆ ಕಸ ಹಾಕುವುದು ಕಾನೂನು ಬಾಹಿರ
ಎನ್ ಜಿಟಿ ನಿಯಮದ ಪ್ರಕಾರ ಕಲ್ಲುಕ್ವಾರಿಗಳಲ್ಲಿ ಮಿಶ್ರತ್ಯಾಜ್ಯ ಹಾಕುವುದು ಅಪರಾಧ. ಇನ್ನು ಮುಂದೆ ಎನ್ ಜಿಟಿ ದೊಡ್ಡ ಮೊತ್ತದ ಫೈನ್ ಹಾಕಲಿದೆ. ಆದ್ರೆ ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಆರು ಸಾವಿರ ಟನ್ ಕಸದಲ್ಲಿ ಶೇಕಡಾ ಅರವತ್ತರಷ್ಟೂ ಕೂಡಾ ಕ್ವಾರಿಗೆ ಹೋಗುತ್ತಿದೆ. ಇದನ್ನು ತಕ್ಷಣವೇ ಸ್ಥಗಿತಗೊಳಿಸಬೇಕೆಂದು ಸುಭಾಷ್ ಬಿ ಅಡಿ ಸಭೆಯ ಗಮನಕ್ಕೆ ತಂದರು‌.

ವಾರ್ಡ್ ಗಳಲ್ಲೇ ಹಸಿಕಸ ಕಾಂಪೋಸ್ಟ್ ಮಾಡಲು ಸಲಹೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ಏಳು ತ್ಯಾಜ್ಯ ಸಸ್ಕರಣಾ ಘಟಕಗಳಿದ್ದರೂ, ಹೆಚ್ಚಿನ ಕಸ ಮಿಶ್ರತ್ಯಾಜ್ಯವಾಗಿರುವುದರಿಂದ ಕ್ವಾರಿಗಳಿಗೆ ಹೋಗುತ್ತಿವೆ. ಇನ್ಮುಂದೆ ಹಸಿ ಕಸ ಮೂಲದಲ್ಲಿಯೇ ಬೇರ್ಪಡಿಸಿ, ವಾರ್ಡ್ ಮಟ್ಟದಲ್ಲೇ ಇರುವ ಜಾಗದಲ್ಲಿ ಕಡ್ಡಾಯವಾಗಿ ಕಾಂಪೋಸ್ಟ್ ಮಾಡಲು ಪ್ರಯತ್ನಿಸಿ ಎಂದು ಸದಸ್ಯರಿಗೆ ಸಲಹೆ ನೀಡಿದ್ರು. ಆದ್ರೆ ವಾರ್ಡ್ ಗಳಲ್ಲಿ ಜಾಗದ ಕೊರತೆ ಇದೆ ಎಂದು ಸದಸ್ಯರು ಉತ್ತರಿಸಿದರು. ಅಲ್ಲದೆ ಕೈಗಾರಿಕೆಗಳು, ಕಾರ್ಖಾನೆಗಳ ಕಸವನ್ನು ಪ್ರತ್ಯೇಕವಾಗಿ ವಿಲೇವಾರಿ ಮಾಡುವಂತೆ ಪೀಣ್ಯ, ರಾಜಾಜಿನಗರ ವಲಯದ ಸದಸ್ಯರು ಮನವಿ ಮಾಡಿದರು‌.
ಸೆಪ್ಟೆಂಬರ್ ಒಂದರಿಂದಲೇ ಎಲ್ಲಾ ರೀತಿಯ ಪ್ಲಾಸ್ಟಿಕ್ ನಿಷೇಧ ಮಾಡಬೇಕು ಎಂದು ಸುಭಾಷ್ ಬಿ ಅಡಿ ಮನವಿ ಮಾಡಿದರು.

ಆದರೆ ಪ್ರಮುಖ ಸಭೆಗೆ ಜನಪ್ರತಿನಿಧಿಗಳಿಗೇ ಆಸಕ್ತಿ ಇರಲಿಲ್ಲ. ಯಾಕಂದ್ರೆ ಶೇಕಡಾ ಐವತ್ತರಷ್ಟು ಪಾಲಿಕೆ ಸದಸ್ಯರು ವಿಶೇಷ ಸಭೆಗೆ ಗೈರಾಗಿದ್ದರು.

ಸೌಮ್ಯಶ್ರೀ
Kn_Bng_04_council_ngt_jatapati_7202707
Body:.Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.