ETV Bharat / state

ದ್ವಿಚಕ್ರ ವಾಹನ ಓಡಿಸುವ ಜನರೆ ಒಂಚೂರು ಇತ್ತ ನೀವು ಕಿವಿಕೊಡಿ... ಈ ಹಾಡು ಕೇಳಿ ಹುಷಾರಾಗಿರಿ​​​!

ಕರ್ನಾಟಕ ರಾಜ್ಯ ಶ್ವಾನ ವಿಭಾಗದ ಕಾನ್​​ಸ್ಟೇಬಲ್ ಮೌಲಾಲಿ ಕೆ.‌ ಆಲಗೂರ ಎಂಬುವರು ಸಂಚಾರಿ ನಿಯಮ ಪಾಲಿಸುವಂತೆ ಹಾಗೂ ಉಲ್ಲಂಘನೆಯಿಂದ ಆಗಬಹುದಾದ ನಷ್ಟದ ಬಗ್ಗೆ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಸರಳವಾಗಿ ಸಾಹಿತ್ಯ ರಚಿಸಿದ್ದಾರೆ.

ಸಂಚಾರಿ ನಿಯಮ ಪಾಲಿಸುವಂತೆ ಕಾನ್ ಸ್ಟೇಬಲ್​ನಿಂದ ಹೊಸ ಟ್ರಾಫಿಕ್ ಆಲ್ಬಂ ಸಾಂಗ್...
author img

By

Published : Sep 15, 2019, 8:53 PM IST

ಬೆಂಗಳೂರು: ಸರಗಳ್ಳತನ, ಡ್ರಗ್ಸ್ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸಿದ್ದಾಯ್ತು. ಇದೀಗ ಟ್ರಾಫಿಕ್ ರೂಲ್ಸ್​ ಬ್ರೇಕ್​ ಸರದಿ. ನಗರದಲ್ಲಿ ಸಂಚಾರಿ ನಿಯಮಗಳ ಪಾಲನೆ ಬಗ್ಗೆ ಪೊಲೀಸ್ ಕಾನ್​​ಸ್ಟೇಬಲ್ ಒಬ್ಬರು ಸಾಹಿತ್ಯ ರಚಿಸಿ ವಿಡಿಯೋ ಸಾಂಗ್​​ ಮಾಡಿದ್ದಾರೆ.

ಸಂಚಾರಿ ನಿಯಮ ಪಾಲಿಸುವಂತೆ ಕಾನ್​​ಸ್ಟೇಬಲ್​ನಿಂದ ಹೊಸ ಟ್ರಾಫಿಕ್ ಜಾಗೃತಿ ಸಾಂಗ್

ಈ ಹಿಂದೆ ಬೈಯ್ಯಪ್ಪನ ಹಳ್ಳಿ ಪೊಲೀಸ್ ಠಾಣೆಯ ಕಾನ್​​ಸ್ಟೇಬಲ್ ಸುಬ್ರಹ್ಮಣ್ಯ ಶಾನಬೋಗ ಎಂಬುವರು ಸರಗಳ್ಳತನ, ಡ್ರಗ್ಸ್ ನಿಯಂತ್ರಣ, ಮಹಿಳೆ ಹಾಗೂ ಮಕ್ಕಳ ಮೇಲಿನ ಶೋಷಣೆ ಬಗ್ಗೆ ಸಾಹಿತ್ಯ ರಚಿಸಿ ವಿಡಿಯೋ ಆಲ್ಬಂ ಮಾಡಿದ್ದರು. ಇದಾದ ಬಳಿಕ ಕರ್ನಾಟಕ ರಾಜ್ಯ ಶ್ವಾನ ವಿಭಾಗದ ಕಾನ್​​ಸ್ಟೇಬಲ್ ಮೌಲಾಲಿ ಕೆ.‌ ಆಲಗೂರ ಎಂಬುವರು ಸಂಚಾರಿ ನಿಯಮ ಪಾಲಿಸುವಂತೆ ಹಾಗೂ ಉಲ್ಲಂಘನೆಯಿಂದ ಆಗಬಹುದಾದ ನಷ್ಟದ ಬಗ್ಗೆ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಸರಳವಾಗಿ ಸಾಹಿತ್ಯ ರಚಿಸಿದ್ದಾರೆ. ಈ ಹಾಡಿಗೆ ನವೀನ್ ರಂಜುಲಗಿ ಎಂ. ಎಂಬುವರು ದನಿ ನೀಡಿದ್ದಾರೆ.

ಮುಂಗಾರು ಮಳೆ ಚಿತ್ರ ಖ್ಯಾತಿಯ ಯೋಗರಾಜ್ ಭಟ್ ‌ನಿರ್ದೇಶನದಲ್ಲಿ ಪರಪಂಚ ಚಿತ್ರದಲ್ಲಿ ಹುಚ್ಚ ವೆಂಕಟ್ ಹಾಡಿದ್ದ ಹುಟ್ಟಿದ್ದ ಊರನು ಬಿಟ್ಟು ಬಂದ ಮೇಲೆ... ಕಂಪೋಸಿಂಗ್​ನಲ್ಲೇ ಹೊಸ ಟ್ರಾಫಿಕ್ ಸಾಂಗ್ ವಿಡಿಯೋ ಮಾಡಿದ್ದಾರೆ. ಮುಂದಿನ ವಾರದಲ್ಲಿ ಹಾಡು ಬಿಡುಗಡೆ ಮಾಡಲಾಗುವುದು ಎಂದು ಮೌಲಾಲಿ ಆಲಗೂರ ತಿಳಿಸಿದ್ದಾರೆ.

Intro:Body:

ಸಂಚಾರಿ ನಿಯಮ ಪಾಲಿಸುವಂತೆ ಕಾನ್ ಸ್ಟೇಬಲ್ ನಿಂದ ಹೊಸ ಟ್ರಾಫಿಕ್ ಆಲ್ಬಂ ಸಾಂಗ್...

ಬೆಂಗಳೂರು: ಸರಗಳ್ಳತನ, ಡ್ರಗ್ಸ್ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸಿದಾಯ್ತು‌.. ಇದೀಗ ಟ್ರಾಫಿಕ್ ವೈಲೇಷನ್ ಸರದಿ.. ನಗರದಲ್ಲಿ ಸಂಚಾರ ನಿಯಮಗಳ ಪಾಲನೆ ಬಗ್ಗೆ ಪೊಲೀಸ್ ಕಾನ್ ಸ್ಟೇಬಲ್ ರೊಬ್ಬರು ಸಾಹಿತ್ಯ ರಚಿಸಿ ವಿಡಿಯೊ ಆಲ್ಬಂ ಮಾಡಿದ್ದಾರೆ.

ಈ ಹಿಂದೆ ಬೈಯ್ಯಪ್ಪನ ಹಳ್ಳಿ ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ಸುಬ್ರಮಣ್ಯ ಶಾನಬೋಗ ಎಂಬುವರು ಸರಗಳ್ಳತನ, ಡ್ರಗ್ಸ್ ನಿಯಂತ್ರಣ, ಮಹಿಳೆ ಹಾಗೂ ಮಕ್ಕಳ ಮೇಲೆ ಶೋಷಣೆ ಬಗ್ಗೆ ಸಾಹಿತ್ಯ ರಚಿಸಿ ವಿಡಿಯೊ ಆಲ್ಬಂ ಮಾಡಿದ್ದರು. ಇದಾದ ಬಳಿಕ ಕರ್ನಾಟಕ ರಾಜ್ಯ ಶ್ವಾನ ವಿಭಾಗದ ಕಾನ್ ಸ್ಟೇಬಲ್ ಮೌಲಾಲಿ ಕೆ.‌ಆಲಗೂರ ಎಂಬುವರು ಸಂಚಾರಿ ನಿಯಮ ಪಾಲಿಸುವಂತೆ ಹಾಗೂ ಉಲ್ಲಂಘನೆಯಿಂದ ಆಗಬಹುದಾದ ನಷ್ಟದ ಬಗ್ಗೆ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಸರಳವಾಗಿ ಸಾಹಿತ್ಯ ರಚಿಸಿದ್ದಾರೆ. ಈ ಹಾಡಿಗೆ ನವೀನ್ ರಂಜುಲಗಿ ಎಂ ಎಂಬುವರು ಹಾಡಿಗೆ ದನಿಯಾಗಿದ್ದಾರೆ.‌
ಮುಂಗಾರುಮಳೆ ಚಿತ್ರದ ಖ್ಯಾತಿಯ ಯೋಗರಾಜ್ ಭಟ್ ‌ನಿರ್ದೇಶನದಲ್ಲಿ ಪರಪಂಚ ಚಿತ್ರದಲ್ಲಿ ಹುಚ್ಚ ವೆಂಕಟ್ ಹಾಡಿದ್ದ ಹುಟ್ಟಿದ್ದ ಊರನ್ನು ಬಿಟ್ಟು ಬಂದ ಮೇಲೆ. .. ಕಂಪೋಸಿಂಗ್ ನಲ್ಲೇ ಹೊಸ ಟ್ರಾಫಿಕ್ ಸಾಂಗ್ ವಿಡಿಯೊ ಆಲ್ಬಂ ಮಾಡಿದ್ದಾರೆ. ಮುಂದಿನ ವಾರದಲ್ಲಿ ಹಾಡು ಬಿಡುಗಡೆ ಮಾಡಲಾಗುವುದು ಎಂದು ಮೌಲಾಲಿ ಆಲಗೂರ ತಿಳಿಸಿದ್ದಾರೆ.

ಟ್ರಾಫಿಕ್ ಸಾಂಗ್ ಸಾಹಿತ್ಯ ಹೀಗಿದೆ..

ದ್ವಿಚಕ್ರ ವಾಹನ ಓಡಿಸುವ ಜನರೇ ಒನ್ಚೂರು
ಇತ್ತ ನೀವು ಕಿವಿ ಕೋಡಿ...
ನಿಮ್ಮಯ ಜೀವ ರಕ್ಷಣೆಗಾಗಿ ಹೆಲ್ಮೆಟ್ ಕಡ್ಡಾಯ
ಬಳಸಿ ಬೀಡಿ...

ಮೂರು ಜನರು ಕುಳಿತುಕೊಂಡು ಪೈನು
ನಮಗೆ ಕಟ್ಟಬೇಡಿ
ನಿಮ್ಗಳ ರಕ್ಷಣೆ ನಿಮ್ಮಯ ಕೈಯಲ್ಲಿ
ಎಂಬುದನ್ನು ಮರಿಬೇಡಿ

ಅವರಸ ಯಾಕೆ ನಿಮ್ಗೆ
ಕ್ಷೇಮದಿ ಹೋಗಿ ಸೇರಿ ಮನ್ಗೆ
ವೇಗವಾಗಿ ಹೋಗ ಬೇಡಿ
ವಿಧಾನದಿಂದ ಗಾಡಿ ಬೀಡಿ

ದ್ವಿಚಕ್ರ ವಾಹನ ಓಡಿಸುವ ಜನರೇ ಒನ್ಚೂರು
ಇತ್ತ ನೀವು ಕಿವಿ ಕೋಡಿ...
ನಿಮ್ಮಯ ಜೀವ ರಕ್ಷಣೆಗಾಗಿ ಹೆಲ್ಮೆಟ್
ಕಡ್ಡಾಯ ಬಳಸಿ ಬೀಡಿ...

ಕಾನೂನು ಪಾಲನೆ ಎಲ್ಲರ ಹೊಣೆ
ಮಾಡದಿರಿ ನೀವು ಉಲ್ಲಂಘನೆ
ಕುಡಿದು ವಾಹನ ಚಾಲನೆ ಮಾಡಿದ್ರೆ
ಸಂಭವಿಸುವುದು ದುರ್ಘಟನೆ

ಸುಮ್ಮ ಸುಮ್ಮನೆ ವೇಗದಿ ವಾಹನ
ಹೈವೇಲಿ ಓಡಿಸುತ್ತಾ ನೀ ಬಂದೆ
ಪಟ್ಟಣ್ಣಕ್ಕೆ ಬಂದು ಮೇಲಿಂದ ಮೇಲೆ
ದಂಡವ ಕಟ್ಟತ ನೀ ನಿಂತೆ

ಮೊಬೈಲ್ ಬೇಡ ಚಲಿಸುವಾಗ
ರಸ್ತೆಯ ಮೇಲೆ ಇರಲಿ ನಿಗಾ

ಪರವಾನಿಕೆ ಪತ್ರ ಜೊತೆಗಿರಲಿ
ವಾಹನ ನೊಂದಣಿಯಾಗಿರಲಿ
ಟೈಯರು, ಬ್ರೇಕ್ಕು ಸರಿ ಇರಲಿ
ಮತ್ತೊಬ್ಬರಿಗೆ ಕುತ್ತು ತರದಿರಲಿ
ನಂಬರು ಪ್ಲೇಟು ಕಾಣುತ್ತಿರಲಿ
ಹೆಟ್ ಲೈಟು ಆಗಾಗ್ಗೆ ಹಾಕ್ಕುತ್ತಿರಿ

ಸಂಚಾರಿ ನಿಯಮ ಹಿಂಗಿವೆ
ಅರಿತು ನಡಿಸಿ ಸರಿಯಾಗಿ
ಸಿಗ್ನಲ್ ನೋಡಿ ಗಾಡಿ ನಿಲ್ಸಿ
ನಮ್ಮೊಂದಿಗೆ ಸಹಕರಿಸಿ

ದ್ವಿಚಕ್ರ ವಾಹನ ಓಡಿಸುವ ಜನರೇ ಒನ್ಚೂರು
ಇತ್ತ ನೀವು ಕಿವಿ ಕೋಡಿ...
ನಿಮ್ಮಯ ಜೀವ ರಕ್ಷಣೆಗಾಗಿ ಹೆಲ್ಮೆಟ್ ಕಡ್ಡಾಯ
ಬಳಸಿ ಬೀಡಿ...

ಸಿಟಿನ ಬೆಲ್ಟು ಹಾಕಿದ್ರೆ ಟೈಟು
ಅಪಾಯದಿಂದ ಪಾರಾದಂತೆ
ಚಿಕಿತ್ಸೆ ಪೆಟ್ಟಿಗೆ ವಾಹನದೊಳಗೆ
ಕಡ್ಡಾಯವಾಗಿ ಇರಲಂತೆ

ಹಾರನ್ ಬಳಕೆ ಮಿತವಾಗಿ ಇದ್ದರೆ
ಶಬ್ದ ಮಾಲಿನ್ಯ ತಡೆದಂತೆ
ಕಾರೂ, ಬೈಕೂ ಒನ್ವೇಲಿ ಸಾಗಿ ಟ್ರಾಫಿಕ್
ಜಾಮೂ ಮಾಡೊದ್ಯಾಕೆ

ಸಿಗರೆಟು ಬೇಡ ಚಲಿಸುವಾಗ
ಅರವತ್ತು ದಾಟದಿರಲಿ ಗಾಡಿ ವೇಗ
ಸಂಚಾರಿ ನಿಯಮ ಪಾಲಿಸಿ
ಸರ್ಕಾರಿ ವಾಹನವೆ ನಿತ್ಯ ಬಳಸಿ

ಖಾಸಗಿ ವಾಹನ ಹೆಚ್ಚಾಗಿದೆ
ಪರಿಶುದ್ಧ ಗಾಳಿ ಸಿಗದಾಗಿದೆ
ಸಂಚಾರಿ ನಿಯಮ ತಿಳಿದಿರಿ
ಕಾನೂನು ಪಾಲನೆ ಮಾಡರಿ

ನಿಮ್ಮೊಂದಿಗೆ ಇರುವೆವೂ ನಾವು
ನಮಗೆ ಸಹಕಾರಿಸಿ ನೀವು

ದ್ವಿಚಕ್ರ ವಾಹನ ಓಡಿಸುವ
ಜನರೇ ಒನ್ಚೂರು
ಇತ್ತ ನೀವು ಕಿವಿ ಕೋಡಿ...
ನಿಮ್ಮಯ ಜೀವ ರಕ್ಷಣೆಗಾಗಿ ಹೆಲ್ಮೆಟ್ ಕಡ್ಡಾಯ
ಬಳಸಿ ಬೀಡಿ...Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.