ETV Bharat / state

ಸೈಬರ್​ ವಂಚಕರಿಗೆ ಬೆಂಗಳೂರು ಪೊಲೀಸರ ಮಾಸ್ಟರ್​ ಸ್ಟ್ರೋಕ್​: ಕೃತ್ಯಕ್ಕೆ ಬಳಕೆಯಾಗುವ ಮೊಬೈಲ್​, ಸಿಮ್​ ಕಾರ್ಡ್ಸ್​ ಬ್ಲಾಕ್​ - ಬೆಂಗಳೂರು ಪೊಲೀಸರು

ಸೈಬರ್​ ಕ್ರೈಂ ಪ್ರಕರಣಗಳನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ಹೊಸ ಕಾರ್ಯತಂತ್ರ ಪ್ರಯೋಗಿಸುತ್ತಿದ್ದಾರೆ.

ಸೈಬರ್ ಕ್ರೈಂ
ಸೈಬರ್ ಕ್ರೈಂ
author img

By ETV Bharat Karnataka Team

Published : Sep 8, 2023, 1:54 PM IST

Updated : Sep 9, 2023, 11:14 AM IST

ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್​ ಗುಪ್ತಾ ಮಾಹಿತಿ

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಸೈಬರ್​ ಕ್ರೈಂ ಪ್ರಕರಣಗಳ ಸಂಖ್ಯೆ ಮತ್ತು ಹೊಸ ಹೊಸ ವಿಧದಲ್ಲಿ ಸೈಬರ್​ ವಂಚನೆ ಪ್ರಕರಣಗಳು ವರದಿಯಾಗುತ್ತಿರುವುದನ್ನು ತಡೆಗಟ್ಟಲು ಬೆಂಗಳೂರು ಪೊಲೀಸರು ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ.

ಕೇವಲ ಮೊಬೈಲ್ ಸಂವಹನದಿಂದಲೇ ಸಾರ್ವಜನಿಕರ ಖಾತೆಗಳಿಗೆ ಕನ್ನ ಹಾಕುತ್ತಿದ್ದ ವಂಚಕರು ಬಳಸುತ್ತಿದ್ದ ಸಿಮ್ ಕಾರ್ಡ್ಸ್ ಹಾಗೂ ಫೋನ್‌ಗಳನ್ನೆ ನಿಷ್ಕ್ರಿಯ (ಬ್ಲಾಕ್) ಮಾಡಿಸುವ ಮೂಲಕ ಮಾಸ್ಟರ್ ಸ್ಟ್ರೋಕ್ ನೀಡಲಾರಂಭಿಸಿದ್ದಾರೆ.

ಜನವರಿಯಿಂದ ಇದುವರೆಗಿನ ಸೈಬರ್ ವಂಚನೆ ಪ್ರಕರಣಗಳ ಮಾಹಿತಿಯನ್ನು ಪೊಲೀಸ್ ಕಂಟ್ರೋಲ್ ರೂಮ್ ಪಡೆದಿದ್ದು, ನಗರದಲ್ಲಿ ಬರೋಬ್ಬರಿ 20 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ‌. ಎಲ್ಲಾ ಠಾಣೆಗಳಿಂದ ಸೈಬರ್ ವಂಚನೆ ಪ್ರಕರಣಗಳ ಮಾಹಿತಿ ಪಡೆದು, ಆ ವಂಚನೆಗೆ ಬಳಕೆಯಾದ ಸಿಮ್ ಕಾರ್ಡ್‌ಗಳನ್ನು ಶಾಶ್ವತವಾಗಿ ಬ್ಲಾಕ್ ಮಾಡಿಸಲಾರಂಭಿಸಿದ್ದಾರೆ.

ಕೇಂದ್ರ ದೂರಸಂಪರ್ಕ ಇಲಾಖೆ ಮತ್ತು ಟೆಲಿಕಾಂ ಕಂಪನಿಗಳ ಜೊತೆ ಮಾತನಾಡಿ, ಸೈಬರ್ ಕ್ರೈಂಗೆ ಬಳಕೆಯಾದ ಸಿಮ್ ಕಾರ್ಡ್ಸ್ ನಿಷ್ಕ್ರಿಯಗೊಳಿಸಲಾಗುತ್ತಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಈ ರೀತಿಯ ಕ್ರಮ ಕೈಗೊಳ್ಳಲಾಗಿದ್ದು, ಕೇವಲ ಹದಿನೈದೇ ದಿನದಲ್ಲೇ ಸರಿಸುಮಾರು ಹನ್ನೆರಡು ಸಾವಿರ ಸಿಮ್ ಕಾರ್ಡ್ಸ್ ಬ್ಲಾಕ್ ಮಾಡಿಸಲಾಗಿದೆ.

ಕೇವಲ ಸಿಮ್ ಕಾರ್ಡ್ಸ್ ಮಾತ್ರವಲ್ಲದೇ ಕೃತ್ಯಕ್ಕೆ ಬಳಕೆಯಾಗುವ ಮೊಬೈಲ್ ಫೋನ್‌ಗಳನ್ನೂ ಸಹ ಬ್ಲಾಕ್ ಮಾಡಿಸಲಾಗುತ್ತಿದೆ. ಕೆಲವೊಂದು ಪ್ರಕರಣಗಳಲ್ಲಿ ಸಿಮ್ ಕಾರ್ಡ್ ಮಾತ್ರವಲ್ಲದೇ, ಕೃತ್ಯಕ್ಕೆ ಬಳಕೆಯಾದ ಹ್ಯಾಂಡ್ ಸೆಟ್ ಮಾಹಿತಿಯೂ ಲಭ್ಯವಾಗುವುದರಿಂದ ಅಂಥಹ ಹ್ಯಾಂಡ್ ಸೆಟ್​ಗಳನ್ನು ಸಹ ಬ್ಲಾಕ್ ಮಾಡಿಸಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್​ ಗುಪ್ತಾ ತಿಳಿಸಿದ್ದಾರೆ.

ಸೈಬರ್ ಲಾ ತಜ್ಞ ನಾ. ವಿಜಯಶಂಕರ್ ಅವರ ಅಭಿಪ್ರಾಯ

''ಮೊಬೈಲ್​ಗಳ ಬಳಕೆ ಹೆಚ್ಚಾಗುತ್ತಿದ್ದು ಬೇರೆ ಬೇರೆ ವಿಧಾನಗಳ ಮೂಲಕ ವಂಚನೆ ಮಾಡುವಂತಹ ಸೈಬರ್ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ಸೈಬರ್ ಅಪರಾಧಗಳನ್ನು ಹತ್ತಿಕ್ಕಲು ಪೊಲೀಸರು ಹೊಸ ವಿಧಾನಗಳ ಮೊರೆ ಹೋಗಿದ್ದು ಸ್ವಾಗತಾರ್ಹ. ಕೃತ್ಯಕ್ಕೆ ಬಳಕೆಯಾದ ಮೊಬೈಲ್​ ಹಾಗೂ ಸಿಮ್ ಕಾರ್ಡ್​​ಗಳನ್ನು ನಿಷ್ಕ್ರಿಯ (ಬ್ಲಾಕ್) ಮಾಡುವ ಹೊಸ ವಿಧಾನದಿಂದ ಸಾರ್ವಜನಿಕರಿಗೆ ಬಹಳ ಅನುಕೂಲವಾಗಲಿದೆ. ಆದರೆ, ಸದ್ಯಕ್ಕೆ ಜಾರಿಗೆ ತರಲಾದ ಬ್ಲಾಕ್ ಮಾಡುವ ವಿಧಾನ ನಮಗೆ ಸಹಾಯವಾದರೂ ಈ ವ್ಯವಸ್ಥೆ ಬಹಳ ದಿನ ಇರದು. ಕಾರಣ ಆರೋಪಿಗಳು ಒಂದು ಸಾರಿ ಅಪರಾಧ ಕೃತ್ಯಕ್ಕೆ ಬಳಕೆ ಮಾಡಿದ ಸಿಮ್ ಅನ್ನು​ ಮತ್ತೊಂದು ಕೃತ್ಯಕ್ಕೆ ಬಳಕೆ ಮಾಡುವುದಿಲ್ಲ. ಆದರೆ, ಐಎಂಇಐ (International Mobile Equipment Identity) ಸಂಖ್ಯೆ ಉಪಯೋಗಿಸಿ ಮೊಬೈಲ್​ಗಳನ್ನೇ ನಿಷ್ಕ್ರಿಯ ಮಾಡುವ ವಿಧಾನದಿಂದ ಇಂತಹ ಅಪರಾಧ ಪ್ರಕರಣಗಳು ತಗ್ಗಬಹುದು. ಇದು ಹೀಗೆ ನಿರಂತರವಾಗಿರಬೇಕು.'' - ನಾ. ವಿಜಯಶಂಕರ್, ಸೈಬರ್ ಲಾ ತಜ್ಞ.

7 ವರ್ಷಗಳಲ್ಲಿ 50 ಸಾವಿರ ಪ್ರಕರಣ: ಆನ್​ಲೈನ್ ವಂಚನೆ ಪ್ರಕರಣ ಹೆಚ್ಚಾಗುತ್ತಿದ್ದಂತೆ ಬೆಂಗಳೂರು ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ 2017ರ ಮಾರ್ಚ್​ನಲ್ಲಿ ಸೈಬರ್ ಕೈಂ ಪೊಲೀಸ್ ಠಾಣೆ ತೆರೆಯಲಾಯಿತು. ಇದಾದ ಕೆಲ ವರ್ಷಗಳಲ್ಲಿ ನಗರದ ವಲಯಕ್ಕೊಂದರಂತೆ 8 ಸೈಬರ್, ಆರ್ಥಿಕ, ನಾರ್ಕೋಟಿಕ್ಸ್ ವಿಭಾಗದ (ಸೆನ್ ) ಪೊಲೀಸ್ ಠಾಣೆಗಳನ್ನ ತೆರೆದು ದೂರು ದಾಖಲಿಸುವ ಕೆಲಸವಾಯಿತು. ವರ್ಷದಿಂದ ವರ್ಷಕ್ಕೆ ದಾಖಲಾಗುವ ಆನ್​ಲೈನ್ ವಂಚನೆ ಪ್ರಕರಣಗಳು ಅಧಿಕವಾಗುತ್ತಲೇ ಇದೆ. ಕಳೆದ ಏಳು ವರ್ಷಗಳಲ್ಲಿ 50,027 ಪ್ರಕರಣ ದಾಖಲಾಗಿವೆ ಎಂದು ಪೊಲೀಸ್ ಇಲಾಖೆ ನೀಡಿದ ಅಂಕಿ - ಅಂಶಗಳೇ ಪುಷ್ಟಿಕರಿಸಿದೆ.

ಡೆಬಿಟ್ / ಕ್ರೆಡಿಟ್ ಕಾರ್ಡ್ ಹೆಸರಿನಲ್ಲಿ ವಂಚನೆ : ಕಳೆದ ಏಳು ವರ್ಷಗಳಲ್ಲಿ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಹೆಸರಿನಲ್ಲಿ ಒಟ್ಟು 20662 ವಂಚನೆ ಪ್ರಕರಣಗಳು ದಾಖಲಾಗಿವೆ. ಬಹುತೇಕರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಹೆಸರಿನಲ್ಲಿ ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿ ಖಾತೆದಾರರ ಪಾಸ್ ವರ್ಡ್, ಒಟಿಪಿ ಸೇರಿದಂತೆ ವೈಯಕ್ತಿಕ ವಿವರ ಸಂಗ್ರಹಿಸುವ ಖದೀಮರು ಕ್ಷಣಾರ್ಧದಲ್ಲಿ ಹಣ ಎಗರಿಸುವ ಕಲೆ ಸಿದ್ದಿಸಿಕೊಂಡಿದ್ದಾರೆ. 2022ರಲ್ಲಿ 4252 ಕೇಸ್ ದಾಖಲಾದರೆ, ಈ ವರ್ಷ ಮೊದಲ ಐದು ತಿಂಗಳಲ್ಲಿ 1872 ಪ್ರಕರಣ ದಾಖಲಾಗಿರುವುದು ಕಳವಳಕಾರಿಯಾಗಿದೆ.

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲ.. ಸೈಬರ್ ಕ್ರೈಂ ಸಿಟಿ.. ! ಕಳೆದ ಏಳು ವರ್ಷಗಳಲ್ಲಿ 50 ಸಾವಿರ ಕೇಸ್ ದಾಖಲು

Last Updated : Sep 9, 2023, 11:14 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.