ETV Bharat / state

ನವಜಾತ ಶಿಶು ನಾಪತ್ತೆ ಪ್ರಕರಣ: ಹೈಕೋರ್ಟ್ ನಿರ್ದೇಶನ ಬೆನ್ನಲ್ಲೇ‌ ಮಗು ಪತ್ತೆಗೆ ವಿಶೇಷ ತಂಡ ರಚನೆ - new born baby missing

ದೂರು ನೀಡಿ 8 ತಿಂಗಳು‌ ಕಳೆದರೂ ಪೊಲೀಸರು ಮಗು ಪತ್ತೆ ಮಾಡುವಲ್ಲಿ ವಿಫಲರಾಗಿದ್ದರು‌. ಹೀಗಾಗಿ ಹುಸ್ಮಾ ಭಾನು ಹೇಬಿಯಸ್ ಕಾರ್ಪಸ್ ಅಡಿಯಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಅಸಮಾಧಾನ ವ್ಯಕ್ತಪಡಿಸಿ ಮಗು ಪತ್ತೆ ಮಾಡುವಂತೆ ತಾಕೀತು ಮಾಡಿದೆ.

Bangalore
ನಾಪತ್ತೆಯಾದ ಮಗುವಿನ ತಾಯಿ ಹುಸ್ಮಾ ಭಾನು
author img

By

Published : Jan 7, 2021, 3:00 PM IST

ಬೆಂಗಳೂರು: ಕಳೆದ 8 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಗುವನ್ನು ಪತ್ತೆ ಮಾಡುವಲ್ಲಿ ವಿಫಲರಾದ ಪೊಲೀಸರಿಗೆ ಹೈಕೋರ್ಟ್ ಚಾಟಿ ಬೀಸಿದೆ‌‌‌.

ನಾಪತ್ತೆಯಾದ ಮಗುವಿನ ತಾಯಿ ಹುಸ್ಮಾ ಭಾನು

ಹೈಕೋರ್ಟ್ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ನಗರ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ನೇತೃತ್ವದಲ್ಲಿ 4 ಜನ ಇನ್ಸ್​ಪೆಕ್ಟರ್ ಒಳಗೊಂಡ ತಂಡ ರಚಿಸಿ ತನಿಖೆ ಚುರುಕುಗೊಳಿಸಿದ್ದಾರೆ. ಚಾಮರಾಜಪೇಟೆ ಶಿರಸಿ ರಸ್ತೆಯಲ್ಲಿರುವ ಹೆರಿಗೆ ಆಸ್ಪತ್ರೆಯಲ್ಲಿ ಹುಸ್ಮಾ ಭಾನು ಎಂಬುವರಿಗೆ ಕಳೆದ ವರ್ಷ ಮೇ. 29ರಂದು ಗಂಡು ಮಗು ಜನನವಾಗಿತ್ತು. ಹುಟ್ಟಿದ ಕೆಲವೇ ಗಂಟೆಗಳಲ್ಲಿ ನವಜಾತ ಶಿಶು ನಾಪತ್ತೆಯಾಗಿತ್ತು. ಆಸ್ಪತ್ರೆಯ ಅಂಗಳದಲ್ಲಿ ಶೋಧ ಕಾರ್ಯ ನಡೆಸಿದರೂ ಶಿಶು ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಗುವಿನ ತಾಯಿ ಹುಸ್ಮಾ ಭಾನು- ನವೀದ್ ಪಾಷಾ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ‌ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಓದಿ: ಬಹಿರ್ದೆಸೆಗೆ ತೆರಳುತ್ತಿದ್ದ ವೇಳೆ ಹೆರಿಗೆ, ಮಹಿಳೆಯ ಮಗು ನಾಪತ್ತೆ... ಕಾಡು ಪ್ರಾಣಿಗಳ ಪಾಲಾಯ್ತೆ ಶಿಶು?

ದೂರು ನೀಡಿ 8 ತಿಂಗಳು‌ ಕಳೆದರೂ ಪೊಲೀಸರು ಮಗು ಪತ್ತೆ ಮಾಡುವಲ್ಲಿ ವಿಫಲರಾಗಿದ್ದರು‌. ಹೀಗಾಗಿ ಹುಸ್ಮಾ ಬಾನು ಹೇಬಿಯಸ್ ಕಾರ್ಪಸ್ ಅಡಿಯಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಅಸಮಾಧಾನ ವ್ಯಕ್ತಪಡಿಸಿ ಮಗು ಪತ್ತೆ ಮಾಡುವಂತೆ ತಾಕೀತು ಮಾಡಿತ್ತು. ಈ ಹಿನ್ನೆಲೆ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ವಿಶೇಷ ತಂಡ ರಚಿಸಿ ಶೀಘ್ರವೇ ಮಗು ಪತ್ತೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.