ETV Bharat / state

ರಾಜ್ಯದಲ್ಲಿಂದು 857 ಮಂದಿಗೆ ಕೊರೊನಾ ದೃಢ: 7 ಮಂದಿ ಬಲಿ - ಬೆಂಗಳೂರು ಕೊರೊನಾ

ಬೆಂಗಳೂರಲ್ಲೇ ಒಟ್ಟು 471 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಅಲ್ಲದೇ ನಗರದಲ್ಲಿ 8,795 ಸಕ್ರಿಯ ಪ್ರಕರಣಗಳಿವೆ.

BBMP Office
ಬಿಬಿಎಂಪಿ ಕಚೇರಿ
author img

By

Published : Dec 26, 2020, 8:15 PM IST

ಬೆಂಗಳೂರು: ರಾಜ್ಯದಲ್ಲಿ 857 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,15,345ಕ್ಕೆ ಏರಿಕೆ ಆಗಿದೆ. ಇಂದು 7 ಮಂದಿ ಕೋವಿಡ್​​ಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 12,051ಕ್ಕೆ ಏರಿಕೆಯಾಗಿದೆ. 19 ಮಂದಿ ಸೋಂಕಿತರು ಅನ್ಯ ಕಾರಣಕ್ಕೆ ಮೃತರಾಗಿದ್ದಾರೆ. 964 ಸೋಂಕಿತರು ಇಂದು ಗುಣಮುಖರಾಗಿದ್ದು, ಈವರೆಗೆ 8,89,881 ಡಿಸ್ಜಾರ್ಜ್ ಆಗಿದ್ದಾರೆ.‌

ತೀವ್ರ ನಿಗಾ ಘಟಕದಲ್ಲಿ 205 ಜನರು ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ರಾಜ್ಯದಲ್ಲಿ 13,395 ಸಕ್ರಿಯ ಪ್ರಕರಣಗಳಿವೆ. ಕಳೆದ 7 ದಿನಗಳಲ್ಲಿ 27,772 ಮಂದಿ ಹೋಮ್​ ಕ್ವಾರಂಟೈನ್​​ನಲ್ಲಿದ್ದಾರೆ. ಇನ್ನು ಲಂಡನ್​​ನಿಂದ ಬಂದಿದ್ದ 15 ಮಂದಿಗೆ ಆರ್​​​ಟಿಪಿಸಿಆರ್ ಪರೀಕ್ಷೆ ಮಾಡಿದ್ದು, 9 ಮಂದಿಗೆ ಪಾಸಿಟಿವ್ ದೃಢವಾಗಿದೆ. ಉಳಿದ 6 ಮಂದಿಯ ವರದಿ ಬರಬೇಕಿದೆ. ಒಟ್ಟಾರೆ 1,434 ಮಂದಿಗೆ ಪರೀಕ್ಷೆ ನಡೆಸಿದ್ದು ಇದರಲ್ಲಿ 908 ಜನರಿಗೆ ನೆಗೆಟಿವ್ ರಿಪೋರ್ಟ್ ಬಂದಿದೆ.‌ ಲಂಡನ್​​ನಿಂದ ಆಗಮಿಸಿದ 23 ಮಂದಿಗೆ ಸೋಂಕು ದೃಢವಾಗಿದೆ.‌ 503 ಜನರ ವರದಿ ಬರಬೇಕಿದೆ.

ಇಂದಿನ ಪ್ರಕರಣದಲ್ಲಿ ಬೆಂಗಳೂರು ಒಂದರಲ್ಲೇ 471 ಮಂದಿ ಕೋವಿಡ್​ ಪಾಸಿಟಿವ್ ಬಂದಿದ್ದು, 4 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಇದನ್ನೂ ಓದಿ: ಸಾವಿನ ಸಂಖ್ಯೆಯಲ್ಲಿ ಇಳಿಕೆ: ದೇಶದಲ್ಲಿ ನಿನ್ನೆ ಕೋವಿಡ್​​ಗೆ 251 ಮಂದಿ ಬಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.