ಬೆಂಗಳೂರು: ಸದ್ಯ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ನಾನ್ ಕೋವಿಡ್ ರೋಗಿಗಳ ನರಳಾಟ ಹೇಳತೀರದಾಗಿದೆ.
ರಾಜ್ಯ ರಾಜಧಾನಿಯಲ್ಲಿ ನಾನ್ ಕೋವಿಡ್ ರೋಗಿಗಳಿಗೆ ನಿತ್ಯ ನರಕ ದರ್ಶನವಾಗುತ್ತಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಮುಂದೆ ನಾನ್ ಕೋವಿಡ್ ರೋಗಿಯೊಬ್ಬರು ನರಳಾಡಿದ್ದಾರೆ. ಉತ್ತರಹಳ್ಳಿ ರಸ್ತೆಯಲ್ಲಿರುವ ಬಿಜಿಎಸ್, ಜಿಮ್ಸ್ ಖಾಸಗಿ ಆಸ್ಪತ್ರೆಯ ಆಂಬ್ಯುಲೆನ್ಸ್ನಲ್ಲಿಯೇ 2 ಗಂಟೆ ನರಳಾಡುತ್ತಿದ್ದರೂ ವೈದ್ಯರು ಕ್ಯಾರೇ ಎಂದಿಲ್ಲ ಎನ್ನಲಾಗಿದೆ.
ಆರೋಗ್ಯ ಸಚಿವರು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಇಂತಹ ರೋಗಿಗಳಿಗೆ ನೆರವಾಗಬೇಕಿದೆ. ಎಮರ್ಜೆನ್ಸಿ ರೋಗಿಗಳಿಗೆ ಚಿಕಿತ್ಸೆ ನೀಡುವಂತಾಗಬೇಕಿದೆ.