ETV Bharat / state

ಎನ್​ಸಿಬಿ ಅಧಿಕಾರಿಗಳ ಭರ್ಜರಿ ಬೇಟೆ: ಸಿನಿಮಾ ತಾರೆಯರಿಗೆ ಡ್ರಗ್ಸ್ ಸರಬುರಾಜು ಮಾಡ್ತಿದ್ದ ಕಿಂಗ್​ಪಿನ್ ಅರೆಸ್ಟ್ - bangalore latest news

ಸ್ಯಾಂಡಲ್​ವುಡ್​ಗೆ ಮಾದಕ ವಸ್ತುಗಳ ಸರಬರಾಜು ಮಾಡುತ್ತಿದ್ದ ಕಿಂಗ್​ಪಿನ್​ ಆರೋಪಿ ಅಹ್ಮದ್​ ನನ್ನು ಎನ್​ಸಿಬಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಮುಂಬೈನಲ್ಲಿ ಬಂಧಿಸಿದ್ದಾರೆ.

NCB policers arrest the drug kingpin
ಎನ್​ಸಿಬಿ ಕಾರ್ಯಾಚರಣೆ
author img

By

Published : Sep 1, 2020, 10:53 PM IST

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಡ್ರಗ್ ನಂಟು ಇರುವ‌ ಮಾಹಿತಿ ಮೇರೆಗೆ ಬೆನ್ನುಬಿದ್ದ ಎನ್​ಸಿಬಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿ ಬೆಂಗಳೂರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಕಿಂಗ್​ ಪಿನ್​ನನ್ನು ಬಯಲಿಗೆ ಎಳೆದಿದ್ದಾರೆ.

ಎನ್​ಸಿಬಿ ಕಾರ್ಯಾಚರಣೆ
ಡ್ರಗ್ಸ್

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಹ್ಮದ್​ನನ್ನು ಬಂಧಿಸಲಾಗಿದೆ. ಗೋವಾದ ಪ್ರತಿಷ್ಠಿತ ರೆಸಾರ್ಟ್​ನ ಕಾರು ಚಾಲಕನಾಗಿದ್ದ‌ ಈತ ಬೆಂಗಳೂರಿನ ಸಿನಿ ತಾರೆಯರಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಎಂಬ ಮಾಹಿತಿ ಮೇರೆಗೆ ಎನ್​ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಸ್ಯಾಂಡಲ್ ವುಡ್ ಗಿರಾಕಿಗಳಿಗೆ ಈತ ಪ್ರತಿ ಗ್ರಾಂ.ಗೆ 5 ಸಾವಿರದಂತೆ ಮಾರಾಟ‌‌ ಮಾಡುತ್ತಿದ್ದ ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಸದ್ಯ ಮುಂಬೈನಲ್ಲಿ 3.5 ಕೆಜಿ ಮಾದಕ ದ್ರವ್ಯ ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯು ಮಾದಕ ದ್ರವ್ಯವನ್ನು ಕ್ರಿಪ್ಟೋ ಕರೆನ್ಸಿ ಬಳಸಿ ಉಎಸ್ಎ​ದಿಂದ ಅನಧಿಕೃತವಾಗಿ ಆಮದು ಮಾಡಿ, ಮುಂಬೈ, ಗೋವಾ ಮೂಲಕ ಹಲವಾರು ಜನರಿಗೆ ನೀಡಿದ್ದಾನೆ. ಸದ್ಯ ಬೆಂಗಳೂರು, ದೆಹಲಿ, ಮುಂಬೈನ ಎನ್​ಸಿಬಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ‌ ನಡೆಸಿ, ಹೆಚ್ಚಿನ ತನಿಖೆ ಕೈಗೆತ್ತಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.