ಬೆಂಗಳೂರು: ಪರಮಾಣು ಶಕ್ತಿ ನಿಯಂತ್ರಣ ಮಂಡಳಿ (ಎಇಆರ್‌ಬಿ) ತನ್ನ ಮಾಹಿತಿ ನೀಡುವ ವಿಶಿಷ್ಟ ಮಳಿಗೆಯನ್ನು ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ತೆರೆದಿದೆ.
ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಐಐಎಸ್ಸಿ ಸಮಾವೇಶದಲ್ಲಿ ಹಲವು ಅಂಶಗಳು ಗಮನ ಸೆಳೆಯುತ್ತಿವೆ. ಇದರಲ್ಲಿ ಎಇಆರ್‌ಬಿ ಕೂಡ ಒಂದಾಗಿದೆ. ರಾಷ್ಟ್ರೀಯ ಸಂಸ್ಥೆಯಾಗಿರುವ ಇದು ಪರಮಾಣು ಸುರಕ್ಷತೆ ಕುರಿತು ಮಹತ್ವದ ಕ್ರಮ ಕೈಗೊಳ್ಳುವ ಕಾರ್ಯ ಮಾಡುತ್ತಿದೆ. ದೇಶದಲ್ಲಿ ತಾವು ಯಾವ ರೀತಿ ಕಾರ್ಯನಿರ್ವಹಿಸುತ್ತಿದ್ದೇವೆ, ಎಷ್ಟರ ಪ್ರಮಾಣದಲ್ಲಿ ತಮ್ಮ ಸಾಮರ್ಥ್ಯವಿದೆ ಹಾಗೂ ಯಾವ ರೀತಿಯ ಕಾರ್ಯನಿರ್ವಹಿಸುತ್ತೇವೆ ಎಂಬ ವಿವರವನ್ನು ಈ ಮಳಿಗೆಯ ಮೂಲಕ ಸಾರ್ವಜನಿಕರಿಗೆ ನೀಡುವ ಪ್ರಯತ್ನ ಇಲ್ಲಿ ಆಗಿದೆ.
ಕಡಿಮೆ ಅವಧಿಯಲ್ಲಿ ಅತ್ಯಂತ ಸರಳ ಹಾಗೂ ಸ್ಪಷ್ಟವಾಗಿ ಜನರಿಗೆ ಮಾಹಿತಿ ತಲುಪಿಸುವ ಅಗತ್ಯ ಫಲಕ ಅಳವಡಿಸಲಾಗಿದೆ. ಅದರ ಮೂಲಕ ಅರಿವು ಮೂಡಿಸುವ ಕಾರ್ಯವಾಗುತ್ತಿದೆ. ಪರಮಾಣು ಶಕ್ತಿ ಸಂಬಂಧ ಜನರಿಗೆ ಸಾಕಷ್ಟು ಕುತೂಹಲವಿದೆ. ಅದನ್ನು ತಣಿಸುವ ಕಾರ್ಯವಾಗುತ್ತಿದೆ. ಜೀವ ಸುರಕ್ಷತೆಗೆ ಯಾವ ವಿದಧ ಕ್ರಮ ಕೈಗೊಳ್ಳಲಾಗಿದೆ ಎಂಬ ಕುರಿತು ನಾವು ಇಲ್ಲಿ ಪ್ರಾತ್ಯಕ್ಷಿಕೆ ಮೂಲಕ ಜನರಿಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದೇವೆ.
ಇದು ಅತ್ಯಂತ ಪರಿಣಾಮಕಾರಿಯಾಗಿ ಜನರಿಗೆ ಹಾಗೂ ಇಂತಹ ಪರಮಾಣು ಶಕ್ತಿ ಉತ್ಪಾದನಾ ಸ್ಥಳದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಸಹಾಯ ಮಾಡಲಿದೆ. ನಮ್ಮ ಕಾರ್ಯನಿರ್ವಹಣೆಯನ್ನ ಸರಳವಾಗಿ ಜನರಿಗೆ ವಿವರಿಸುವ ಕಾರ್ಯವನ್ನು ಮಾಡಿದ್ದೇವೆ ಎಂದು ಎಇಆರ್‌ಬಿ ವೈಜ್ಞಾನಿಕ ವಿಭಾಗದ ಅಧಿಕಾರಿ ಸೌಮೇನ್ ಸಿನ್ಹಾ ವಿವರಿಸಿದ್ದಾರೆ.