ಬೆಂಗಳೂರು: ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಪಾಲಿಕೆ ವ್ಯಾಪ್ತಿಯ ಪ್ರಮುಖ ಮಾಲ್ಗಳಲ್ಲಿ ರಾಷ್ಟ್ರಧ್ವಜ ಮಾರಾಟ ಮಾಡಲಾಗುವುದು ಎಂದು ಪಾಲಿಕೆ ತಿಳಿಸಿದೆ.
![ರಾಷ್ಟ್ರಧ್ವಜ ವಿತರಣೆ](https://etvbharatimages.akamaized.net/etvbharat/prod-images/kn-bng-04-in-major-malls-flag-7210969_10082022163212_1008f_1660129332_1000.jpg)
ಈ ಹಿನ್ನೆಲೆಯಲ್ಲಿ 75ನೇ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ನಿಮಿತ್ತ ಆಗಸ್ಟ್ 13 ರಿಂದ 15 ರವರೆಗೆ ಹಮ್ಮಿಕೊಂಡಿರುವ "ಹರ್ ಘರ್ ತಿರಂಗಾ"(ಪ್ರತಿ ಮನೆಯಲ್ಲೂ ರಾಷ್ಟ್ರ ಧ್ವಜ) ಅಭಿಯಾನದ ಪ್ರಯುಕ್ತ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತಗಾರ ರಾಕೇಶ್ ಸಿಂಗ್ ಪೂರ್ವ ವಲಯದ ಜಂಟಿ ಆಯುಕ್ತೆ ಶಿಲ್ಪಾ ಅವರಿಗೆ ಹಣವನ್ನು ನೀಡುವ ಮೂಲಕ ಸೋಮವಾರ ಧ್ವಜವನ್ನು ಸ್ವೀಕರಿಸಿ ಅಧಿಕೃತವಾಗಿ ಅಭಿಯಾನಕ್ಕೆ ಚಾಲನೆ ನೀಡಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಯಲಹಂಕ ವಲಯದ ಜಂಟಿ ಆಯುಕ್ತೆ ಪಿ. ವಿ ಪೂರ್ಣಿಮಾರಿಗೆ ಹಣವನ್ನು ನೀಡಿ ಧ್ವಜ ಸ್ವೀಕರಿಸಿದರು. ಈ ವೇಳೆ, ಪೌರ ಕಾರ್ಮಿಕರು ಹಾಗೂ ಹಿರಿಯ ನಾಗರಿಕರಿಗೆ ರಾಷ್ಟ್ರ ಧ್ವಜ ನೀಡಿ ತಮ್ಮ ತಮ್ಮ ಮನೆಗಳಲ್ಲಿ ಆಗಸ್ಟ್ 13 ರಿಂದ 15 ರವರೆಗೆ ಧ್ವಜಗಳನ್ನು ಹಾರಿಸಲು ಕರೆ ನೀಡಿದರು.
ಮಾಲ್ಗಳಲ್ಲಿ ಧ್ವಜಗಳ ಮಾರಾಟ: ಹರ್ ಘರ್ ತಿರಂಗಾ ಅಭಿಯಾನದ ನಿಮಿತ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಆಯಾ ವಲಯ ಜಂಟಿ ಆಯುಕ್ತರ ಕಚೇರಿ, ವಾರ್ಡ್ ಕಚೇರಿಗಳಿಗೆ ನಾಗರಿಕರಿಗೆ ಧ್ವಜಗಳನ್ನು ಮಾರಾಟ ಮಾಡಲಾಗುತ್ತಿದೆ. ಅಲ್ಲದೇ, ವಲಯದ ಪ್ರಮುಖ ಸ್ಥಳ/ಮಾಲ್ಗಳಲ್ಲಿ ಧ್ವಜಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಯಾವ ಮಾಲ್ಗಳಲ್ಲಿ ಧ್ವಜ ಮಾರಾಟ:
1. ಪಶ್ಚಿಮ ವಲಯ
• ಮಂತ್ರಿ ಮಾಲ್
• ಒರಾಯನ್ ಮಾಲ್
• ಲುಲು ಮಾಲ್ (ಗ್ಲೋಬಲ್ ಮಾಲ್)
• ಗೋಪಾಲನ್ ಮಾಲ್
2. ಪೂರ್ವ ವಲಯ
• ಗರುಡ ಮಾಲ್
• ಸೆಂಟ್ರಲ್ ಮಾಲ್
• 1 ಎಂ.ಜಿ ಮಾಲ್
• ಎಂ.ಎಸ್ ಬಿಲ್ಡಿಂಗ್
3. ದಕ್ಷಿಣ ವಲಯ
• ಲೈಫ್ ಸ್ಟೈಲ್ ಮಾಲ್
• ಜಿಟಿ ವರ್ಲ್ಡ್ ಮಾಲ್
• ಸ್ವಾಗತ್ ಗರುಡ ಮಾಲ್
• ಫೋರಂ ಮಾಲ್
• ಮೋರ್ ಮಾರ್ಟ್, ಬುಲ್ ಟೆಂಪಲ್ ರಸ್ತೆ
• ಗೋಪಾಲನ್ ಮಾಲ್
• ಸೆಂಟ್ರಲ್ ಮಾಲ್
4. ಮಹದೇವಪುರ ವಲಯ:
• ಫಿನೀಕ್ಸ್ ಮಾಲ್
• ಫೋರಂ ಮಾಲ್, ವೈಟ್ ಫೀಲ್ಡ್
• ಶಾಂತಿನಿಕೇತನ್ ಫೋರಮ್ ಮಾಲ್
• ಮೋರ್ ಮಾರ್ಕೆಟ್, ಮಾರತಹಳ್ಳಿ
• ಟೋಟಲ್ ಮಾಲ್, ಬೆಳಂದೂರು
• ಸೆಂಟ್ರಲ್ ಮಾಲ್, ಬೆಳಂದೂರು
• ಕೆ.ಎಲ್.ಎಂ ಮಾಲ್, ಮಾರತಹಳ್ಳಿ
• ಮಲ್ಟಿಪ್ಲೇಕ್ಸ್, ಮಾರತಹಳ್ಳಿ
• ಬ್ರ್ಯಾಂಡ್ ಫ್ಯಾಕ್ಟರಿ, ಮಾರತಹಳ್ಳಿ
• ಡಿ ಮಾರ್ಟ್, ಸಿದ್ದಾಪುರ
• ಹೈಪರ್ ಸಿಟಿ ಮಾಲ್, ತೂಬರ ಹಳ್ಳಿ
• ಬ್ರೂಕ್ ಫೀಲ್ಡ್ ಮಾಲ್, ಕುಂದರಹಳ್ಳಿ
• ಟಿನ್ ಫ್ಯಾಕ್ಟರಿ ಬಸ್ ನಿಲ್ದಾಣ
5. ಯಲಹಂಕ ವಲಯ:
• ಆರ್. ಎಂ ಝಡ್ ಮಾಲ್, ಯಲಹಂಕ.
• ಎಸ್ಟಿಮ್ ಮಾಲ್
• ಎಲಿಮಂಟ್ಸ್ ಮಾಲ್,
6. ರಾಜರಾಜೇಶ್ವರಿನಗರ ವಲಯ:
• ಜೆ. ಪಿ ಪಾರ್ಕ್
• ಗೋಪಾಲನ್ ಆರ್ಕೇಡ್
• ರಾಯಲ್ ಮಾರ್ಟ್
7. ಬೊಮ್ಮನಹಳ್ಳಿ ವಲಯ:
• ರಾಯಲ್ ಮಿನಾಕ್ಷಿ ಮಾಲ್
• ವೆಗಾಸಿಟಿ ಮಾಲ್
• ರಿಲಯನ್ಸ್ ಮಾರ್ಟ್
8. ದಾಸರಹಳ್ಳಿ ವಲಯ:
• ಐಕಿಯಾ
• ರಂಗ ಮಂದಿರ, ಬಾಗಲಗುಂಟೆ
ಓದಿ: ಅಮಿತ್ ಶಾ ರಾಜ್ಯ ಬಿಜೆಪಿ ನಾಯಕರಿಗೆ ವೀಳ್ಯೆದೆಲೆ ಶಾಸ್ತ್ರ ಮಾಡಲು ಬಂದಿದ್ದರಾ ಎಂದ ಬಿ ಕೆ ಹರಿಪ್ರಸಾದ್