ETV Bharat / state

'ಕರೋನಾಕುಚ್': ಇಂದಿನಿಂದ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಉಪವಾಸ ಆರಂಭ - National fasting starts from Today news

ಕಾರ್ಮಿಕರು ಗುಳೆ ಹೋಗುತ್ತಿರುವ ಪರಿಸ್ಥಿತಿಗೆ 'ಕರೋನಾಕುಚ್' 'ಏನಾದರೂ ಮಾಡು' ಟ್ಯಾಗ್ ಲೈನ್ ಅಡಿ ಇಂದಿನಿಂದ ಉಪವಾಸ ವ್ರತ ಆರಂಭವಾಗಲಿದೆ. ಸಾಮಾಜಿಕ ಹೋರಾಟಗಾರ ಪ್ರಸನ್ನ ಹೆಗ್ಗೋಡು ಅವರು ಕೂಡ ಅಭಿಯಾನಕ್ಕೆ ಕೈಜೋಡಿಸಿದ್ದಾರೆ.

National fasting starts from Today
ಇಂದಿನಿಂದ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಉಪವಾಸ ಆರಂಭ
author img

By

Published : Apr 10, 2020, 8:48 AM IST

ಬೆಂಗಳೂರು: ದೇಶದಾದ್ಯಂತ ಅನೇಕ ಜನರು 'ರಾಷ್ಟ್ರೀಯ ಉಪವಾಸವನ್ನು' ಇಂದು ಹಮ್ಮಿಕೊಂಡಿದ್ದು ರಂಗಕರ್ಮಿ, ಸಾಮಾಜಿಕ ಹೋರಾಟಗಾರ ಪ್ರಸನ್ನ ಹೆಗ್ಗೋಡು ಕೂಡಾ ಉಪವಾಸ ಆರಂಭಿಸಲಿದ್ದಾರೆ. ಪವಿತ್ರ ಆರ್ಥಿಕತೆಯ ಜಾರಿಗಾಗಿ, ಗ್ರಾಮೀಣ ಬಡವರು, ಕಾರ್ಮಿಕರು ಗುಳೆ ಹೋಗುತ್ತಿರುವ ಪರಿಸ್ಥಿತಿಗೆ 'ಕರೋನಾಕುಚ್' 'ಏನಾದರೂ ಮಾಡು' ಟ್ಯಾಗ್ ಲೈನ್ ಅಡಿ, ಗುಳೆ ಎದ್ದಿರುವ ಕಾರ್ಮಿಕರ ನೋವಿನಲ್ಲಿ ಭಾಗಿಯಾಗಲು ಉಪವಾಸ ಕೈಗೊಳ್ಳಲಿದ್ದಾರೆ.

National fasting starts from Today
ರಾಷ್ಟ್ರೀಯ ಉಪವಾಸ ವ್ರತ

ಬೆಳಗ್ಗೆ 6 ರಿಂದ ಸಂಜೆ 6 ರವರೆ ರಾಷ್ಟ್ರೀಯ ಉಪವಾಸ ವ್ರತದಲ್ಲಿ ಭಾಗಿಯಾಗಲಿದ್ದಾರೆ. ಗ್ರಾಮ ಸೇವಾ ಸಂಘದ ನೇತಾರರಾದ ಪ್ರಸನ್ನ ಅವರು ಅನಿರ್ದಿಷ್ಟ ಅವಧಿಯವರೆಗೆ ಉಪವಾಸ ವ್ರತವನ್ನು ಮುಂದುವರೆಸಲಿದ್ದಾರೆ. ರಾಷ್ಟ್ರೀಯ ಉಪವಾಸ ವ್ರತ ಹಾಗೂ ಅದರ ಮುಂದುವರಿಕೆ ನಮ್ಮ ರಾಷ್ಟ್ರ ಪ್ರಜ್ಞೆಯನ್ನು ಮೀಟುವ ಒಂದು ಸಣ್ಣ ಪ್ರಯತ್ನವಾಗಿರುತ್ತದೆ ಎಂದು ತಿಳಿಸಿದ್ದಾರೆ.

National fasting starts from Today
ರಾಷ್ಟ್ರೀಯ ಉಪವಾಸ ವ್ರತ

ನಮ್ಮ ಸತ್ಯಾಗ್ರಹವು ಸಾರ್ವಜನಿಕ ಪ್ರತಿಭಟನೆಯಲ್ಲ. ಪ್ರಸನ್ನರವರು ಸಾವು ಬರಲಿ ಎಂಬ ಹಠದಿಂದ ಉಪವಾಸ ಮಾಡುತ್ತಿಲ್ಲ. ಸಾವನ್ನು ಮುಂದೂಡುವ ಸಲುವಾಗಿ ಅವರು ಪ್ರತಿದಿನ ನೀರನ್ನು ಸೇವಿಸಲಿದ್ದಾರೆ. ಒಂದು ಹರಳು ಉಪ್ಪಿನ ಜೊತೆಗೆ ಅರ್ಧ ಚಮಚೆ ನಿಂಬೆರಸವನ್ನು ದಿನಕ್ಕೊಮ್ಮೆ ಸೇವಿಸಲಿದ್ದಾರೆ. ಉಪವಾಸದ ಮೂರನೆಯ ದಿನದಿಂದ, ರಕ್ತದ ಸಕ್ಕರೆಯ ಪ್ರಮಾಣವನ್ನು ಕನಿಷ್ಠ ಮಟ್ಟದಲ್ಲಿ ಉಳಿಸಿಕೊಳ್ಳಲೆಂದು, ದಿನಕ್ಕೆರಡು ಬಾರಿ ಜೇನು ಸೇವಿಸಲಿದ್ದಾರೆ ಎಂದು ಸಂಘದವರು ತಿಳಿಸಿದ್ದಾರೆ.

National fasting starts from Today
ರಾಷ್ಟ್ರೀಯ ಉಪವಾಸ ವ್ರತ

ಉಪವಾಸ ವ್ರತ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸುವ ಹಾಗೂ ವ್ರತನಿರತರೊಡನೆ ಮಾತಿಗಿಳಿಯುವ ಪ್ರಯತ್ನವನ್ನು ಮಾಡಬಾರದೆಂದು ಉಪವಾಸದ ಸ್ಥಳವನ್ನು ತಿಳಿಸಲು ಇಚ್ಚಿಸಿಲ್ಲ. ಒಂದೊಮ್ಮೆ ಸರಕಾರಗಳಿಗೆ ಉಪವಾಸ ವ್ರತವೆಂಬುದು ಕಾನೂನು ಬಾಹಿರ ಅನ್ನಿಸಿದರೆ, ನಾವೆಲ್ಲರೂ ಬಂಧನಕ್ಕೊಳಗಾಗಲು ಸಂತೋಷದಿಂದ ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.