ETV Bharat / state

ವೈದ್ಯಾಧಿಕಾರಿ ಆತ್ಮಹತ್ಯೆ: ಕಪ್ಪು ಪಟ್ಟಿ ಧರಿಸಿ ರಾಜ್ಯಾದ್ಯಂತ ವೈದ್ಯರ ಪ್ರತಿಭಟನೆ

ನಂಜನಗೂಡಿನ ವೈದ್ಯಾಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ವೈದ್ಯಕೀಯ ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ. ಇದರ ಜೊತೆಗೆ ಇಂದು ಮತ್ತು ನಾಳೆ ಕಪ್ಪು ಪಟ್ಟಿ ಧರಿಸಿ ಕಾರ್ಯ ನಿರ್ವಹಿಸಲು ಮುಂದಾಗಿದ್ದಾರೆ.

Bangalore doctors
Bangalore doctors
author img

By

Published : Aug 21, 2020, 10:40 PM IST

ಬೆಂಗಳೂರು: ನಂಜನಗೂಡಿನ‌ ‌ ತಾಲೂಕು ‌ವೈದ್ಯಾಧಿಕಾರಿ ಡಾ.ನಾಗೇಂದ್ರರ ಆತ್ಮಹತ್ಯೆ ನಿಜಕ್ಕೂ ‌ದಿಗ್ಭ್ರಮೆ ಮೂಡಿಸಿದೆ ಎಂದು ಭಾರತೀಯ ವೈದ್ಯಕೀಯ ಸಂಘ ಸಂತಾಪ ಸೂಚಿಸಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಸಂಘ, ಕುಟುಂಬದಿಂದ ದೂರ ಉಳಿದು‌ ನಿರಂತರ‌ ಒತ್ತಡದಲ್ಲಿ ಎಲ್ಲಾ ಇಲ್ಲಗಳ ಹಾಗೂ ಅತ್ಯಂತ ‌ಸಂಕೀರ್ಣ ವ್ಯವಸ್ಥೆಯ ನಡುವೆ‌ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದ‌ ಇಂತಹ ಕಾಯಕ‌ ಜೀವಿಯನ್ನು ಕಳೆದು‌ಕೊಂಡಿರುವುದು ವಿಷಾದನೀಯ.

ಈ ರೀತಿಯ‌ ಅನಾಹುತಗಳು‌ ನಡೆಯಲು‌‌ ಕಾರಣ ಮತ್ತು‌ ಅವು‌ ಪುನಃ ‌ಮರುಕಳಿಸದಂತೆ ಜಾಗೃತಿ ವಹಿಸುವುದರ ಜೊತೆಗೆ ವೈದ್ಯರನ್ನು ಬೆದರಿಸುವ, ಕಾನೂನಿನ‌‌ ಗುಮ್ಮ ತೋರಿಸುವುದನ್ನು‌ ಬಿಟ್ಟು ಸೌಹಾರ್ದಯುತವಾಗಿ ನಡೆಸಿಕೊಂಡು ಹೋಗಬೇಕೆಂದು ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ. ಈ ಘಟನೆಯನ್ನು ಖಂಡಿಸುತ್ತಾ ಇದಕ್ಕೆ ಕಾರಣವಾದವರನ್ನು ಶಿಕ್ಷಿಸಬೇಕೆಂದು ಒತ್ತಾಯಿಸಿದೆ.

ಹೀಗಾಗಿ ಇಂದು ಮತ್ತು ನಾಳೆ ರಾಜ್ಯಾದ್ಯಂತ ಕಪ್ಪು ಪಟ್ಟಿ ಧರಿಸಿ ಕಾರ್ಯ ನಿರ್ವಹಿಸಲಾಗುತ್ತಿದೆ. ಭಾನುವಾರದಂದು ರಾತ್ರಿ 8 ಗಂಟೆಗೆ ದೀಪ ಬೆಳಗಿ ಈ ಮೂಲಕ ಸರ್ಕಾರದ ಗಮನ ಸೆಳೆಯಲು ಮುಂದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.