ETV Bharat / state

ನಿಮ್ಮಲ್ಲಿ ಸ್ಮಾರ್ಟ್ ಫೋನ್ ಇದ್ದರೆ, ನಾಳೆಯಿಂದ ಮೆಟ್ರೋ ಪ್ರಯಾಣ ಇನ್ನೂ ಸುಲಭ

'ನಮ್ಮ ಮೆಟ್ರೋ' ಕ್ಯೂಆರ್‌ ಕೋಡ್‌ ಆಧಾರಿತ ಟಿಕೆಟ್‌ ವ್ಯವಸ್ಥೆಯನ್ನು ನ.1ರಿಂದ ಜಾರಿಗೆ ತರಲಿದೆ.

Namma Metro
ನಮ್ಮ ಮೆಟ್ರೋ
author img

By

Published : Oct 31, 2022, 6:57 PM IST

Updated : Oct 31, 2022, 7:15 PM IST

ಬೆಂಗಳೂರು: ಕನ್ನಡ ರಾಜ್ಯೋತ್ಸವ ಹಿನ್ನೆಲೆ ಪ್ರಯಾಣಿಕರಿಗೆ 'ನಮ್ಮ ಮೆಟ್ರೋ' ಸಿಹಿ ಸುದ್ದಿ ನೀಡಿದೆ. ನಾಳೆಯಿಂದ ಮೊಬೈಲ್​​ನಲ್ಲೇ ಮೆಟ್ರೋ ಟಿಕೆಟ್ ಖರೀದಿ ಮಾಡಬಹುದು. ಕ್ಯೂಆರ್ ಕೋಡ್ ಮೂಲಕ ಪ್ರಯಾಣಿಕರು ನಮ್ಮ‌ ಮೆಟ್ರೋದಲ್ಲಿ ಮಂಗಳವಾರದಿಂದ ಪ್ರಯಾಣ ಬೆಳಸಬಹುದಾಗಿದೆ. ಪ್ರಯಾಣಿಕರ ಸಮಯ ಉಳಿತಾಯ, ಚಿಲ್ಲರೆ ಸಮಸ್ಯೆ ದೂರಮಾಡುವ ಉದ್ದೇಶದಿಂದ ಈ ಹೊಸ ಯೋಜನೆಯನ್ನು ಪ್ರಾರಂಭಿಸಿದೆ.

ಕನ್ನಡ ರಾಜ್ಯೋತ್ಸವ ದಿನದಿಂದ ಸ್ಮಾರ್ಟ್ ಫೋನ್ ಹೊಂದಿರುವ ಮೆಟ್ರೋ ಪ್ರಯಾಣಿಕರು ಟೋಕನ್ ಖರೀದಿಸಲು ಟಿಕೆಟ್‌ ಕೌಂಟರ್‌ಗಳ ಮುಂದೆ ನಿಲ್ಲುವ ಅಗತ್ಯ ವಿರುವುದಿಲ್ಲ. ಕ್ಯೂಆರ್ ಟಿಕೆಟ್‌ಗಳನ್ನು ಆನ್‌ಲೈನ್‌ ಮೂಲಕ ಖರೀದಿಸಬಹುದು. ಕ್ಯೂಆರ್ ಟಿಕೆಟ್‌ಗಳನ್ನು ಖರೀದಿಸಲು ಪ್ರಯಾಣಿಕರು ಆಂಡ್ರಾಯ್ಡ್ ಓಎಸ್ ಹೊಂದಿರುವ ಮೊಬೈಲ್​ನಿಂದ ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ತಮ್ಮನ್ನು ನೋಂದಾಯಿಸಿಕೊಳ್ಳಬಹುದು.

ಅಧಿಕೃತ ಬಿಎಂಆರ್‌ಸಿಎಲ್ ನ WhatsApp ಚಾಟ್‌ಬಾಟ್ ಮೊಬೈಲ್ ನಂ 810 555 66 77 ಅನ್ನು ಮೊಬೈಲ್ ನಲ್ಲಿ ಸೇವ್ ಮಾಡಿ, "ಹಾಯ್" ಎಂಬ ಸಂದೇಶವನ್ನು ಕಳುಹಿಸುವ ಮೂಲಕ QR ಟಿಕೆಟ್‌ಗಳನ್ನು ಖರೀದಿಸಲು ಚಾಟ್‌ಬಾಟ್‌ ನೊಂದಿಗೆ ಸಂವಹನವನ್ನು ಪ್ರಾರಂಭಿಸಬಹುದು. ಆಂಡ್ರಾಯ್ಡ್ ಮತ್ತು ಐಒಎಸ್ ಮೊಬೈಲ್ ಬಳಕೆದಾರರಿಗೆ ಚಾಟ್‌ಬಾಟ್ (Chatbot) ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಗಳಲ್ಲಿ ಲಭ್ಯವಿದೆ.

ಬಿಎಂಆರ್‌ಸಿಎಲ್ ಗ್ಲೋಬಲ್ ಟ್ರಾನ್ಸಿಟ್ ಸ್ಪೇಸ್‌ನಲ್ಲಿ ವಾಟ್ಸ್ ಆ್ಯಪ್​​ನಲ್ಲಿ ಎಂಡ್-ಟು-ಎಂಡ್ ಟಿಕೆಟಿಂಗ್ ವ್ಯವಸ್ಥೆಯನ್ನು ಪರಿಚಯಿಸಿದ ಮೊದಲ ಮೆಟ್ರೋ ಇದಾಗಿದೆ.

ವಾಟ್ಸ್​​ಆ್ಯಪ್ ಚಾಟ್‌ಬಾಟ್​​ನಲ್ಲಿ ಲಭ್ಯವಿರುವ ವೈಶಿಷ್ಟ್ಯಗಳು:

  • ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಸಂವಾದ ಮಾಡುವ ಆಯ್ಕೆಗಳು.
  • QR ಟಿಕೆಟ್‌ಗಳ ಖರೀದಿ.
  • ಮೆಟ್ರೋ ಸ್ಮಾರ್ಟ್ ಕಾರ್ಡ್‌ಗಳ ರೀಚಾರ್ಜ್.
  • ಪ್ರಸ್ತುತ ಪ್ರಯಾಣಿಕರ ಸ್ಥಳದ ಹತ್ತಿರವಿರುವ ಮೆಟ್ರೋ ನಿಲ್ದಾಣದ ಮಾಹಿತಿ.
  • ವಿವಿಧ ನಿಲ್ದಾಣಗಳಲ್ಲಿ ರೈಲು ಹೊರಡುವ ಸಮಯದ ಮಾಹಿತಿ.
  • ಯಾವುದೇ ಎರಡು ನಿಲ್ದಾಣಗಳ ನಡುವಿನ ದರದ ಮಾಹಿತಿ.

QR ಟಿಕೆಟ್ ಹೇಗೆ ಬಳಸುವುದು?: ಪ್ರಯಾಣಿಕರು ದಿನದ ಪ್ರವೇಶ ಮತ್ತು ತಲುಪುವ ನಿಲ್ದಾಣ ನಿರ್ದಿಷ್ಟ ಪಡಿಸಿಕೊಂಡು ನಮ್ಮ ಮೆಟ್ರೋ ಅಪ್ಲಿಕೇಶನ್ ಅಥವಾ WhatsApp ನಲ್ಲಿ QR ಟಿಕೆಟ್ ಪಡೆಯಬಹುದು.

ನಿಲ್ದಾಣಗಳಲ್ಲಿನ ಸ್ವಯಂಚಾಲಿತ ಗೇಟ್‌ಗಳಲ್ಲಿ ಅಳವಡಿಸಿರುವ ಕ್ಯೂಆರ್ ರೀಡರ್​​ಗಳಿಗೆ ಮೊಬೈಲ್ ಫೋನ್‌ನಲ್ಲಿರುವ QR ಟಿಕೆಟ್‌ಗಳನ್ನು ಪ್ರವೇಶ ಮತ್ತು ನಿರ್ಗಮಿಸುವಾಗ ತೋರಿಸಿ ಸ್ಕ್ಯಾನ್ ಮಾಡಬೇಕು.

ಖರೀದಿಸಿದ ಮೊಬೈಲ್ QR ಟಿಕೆಟ್‌ಗಳು, ದಿನದ ಸೇವೆಯ ಸಮಯದವರೆಗೆ ಮಾನ್ಯವಾಗಿರುತ್ತವೆ. ಆದಾಗ್ಯೂ, ಪ್ರಯಾಣವನ್ನು ಮಾಡದಿದ್ದರೆ, ಅದೇ ದಿನದಂದು ಟಿಕೆಟ್‌ ರದ್ದತಿ ವಿಧಾನವನ್ನು ಬಳಸಿ ಮೊತ್ತವನ್ನು ಮರುಪಾವತಿ ಪಡೆಯಬಹುದು.

QR ಟಿಕೆಟ್‌ಗಳನ್ನು ಟೋಕನ್ ದರಕ್ಕಿಂತ 5% ರಿಯಾಯಿತಿಯಲ್ಲಿ ನೀಡಲಾಗುತ್ತಿದೆ. ಡಿಜಿಟಲೀಕರಣವನ್ನು ಉತ್ತೇಜಿಸಲು ಮತ್ತು ಕಡಿಮೆ ವೆಚ್ಚದಲ್ಲಿ ಅನುಕೂಲಕರವಾಗಿ ಪ್ರಯಾಣಿಸಲು ಎಲ್ಲಾ ಪ್ರಯಾಣಿಕರು ಕ್ಯೂಆರ್ ಟಿಕೆಟ್‌ಗಳ ಸೌಲಭ್ಯವನ್ನು ಬಳಸಿಕೊಳ್ಳಲು ವಿನಂತಿಸಲಾಗಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ.. ಜಾರಿಗೆ ಬರಲಿವೆ ಕ್ಯೂಆರ್​ ಕೋಡ್​ ಟಿಕೆಟಿಂಗ್, ಪ್ರಿ ಪೇಯ್ಡ್ ಆಟೋ ಸ್ಟ್ಯಾಂಡ್ಸ್

Last Updated : Oct 31, 2022, 7:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.