ಬೆಂಗಳೂರು: ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮ ಜಯಂತಿ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ನುಡಿ ನಮನ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಂಪುಟದ ಹಲವು ಸಚಿವರು ಟ್ವೀಟ್ ಮೂಲಕ ಒಡೆಯರ್ ಜನ್ಮ ಜಯಂತಿ ಸಂದರ್ಭದಲ್ಲಿ ರಾಜ್ಯಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಟ್ವೀಟ್: ಪ್ರಜಾಪ್ರತಿನಿಧಿ ಸಭೆಯ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದ, ಮೈಸೂರು ಬ್ಯಾಂಕಿನ ಸ್ಥಾಪನೆ ಮೂಲಕ ಸುಸ್ಥಿರ ಆರ್ಥಿಕ ವ್ಯವಸ್ಥೆಗೆ ಚಾಲನೆ ನೀಡಿದ, ಕೃಷ್ಣರಾಜ ಸಾಗರ, ವಾಣಿವಿಲಾಸ ಸಾಗರ ಜಲಾಶಯಗಳ ಮೂಲಕ ಕೃಷಿ ಚಟುವಟಿಕೆಗಳಿಗೆ ಜೀವತುಂಬಿದ, ಮೈಸೂರು ವಿವಿ, ಕೃಷಿ ವಿವಿಗಳ ಸ್ಥಾಪನೆ ಮೂಲಕ ಯುವಜನರ ಭವಿಷ್ಯ ರೂಪಿಸಿದ, ಮೀಸಲಾತಿ ಜಾರಿ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತ ನಾಡಿಗೆ ಸುವರ್ಣಯುಗದಂತೆ. ನನ್ನ ಪಾಲಿನ ಪ್ರೇರಣಾ ಶಕ್ತಿಯ ಜಯಂತಿಯಂದು ಗೌರವಪೂರ್ವಕ ನಮನಗಳು ಎಂದು ಹೇಳಿದ್ದಾರೆ.
-
ಕೃಷ್ಣರಾಜ ಸಾಗರ ಜಲಾಶಯಕ್ಕೆ ಅಡಿಗಲ್ಲು ಹಾಕಿದ, ದೇಶದ ಮೊದಲ ಬೃಹತ್ ಜಲ ವಿದ್ಯುತ್ ಕೇಂದ್ರ ಸ್ಥಾಪಿಸಿದ,
— Karnataka Congress (@INCKarnataka) June 4, 2023 " class="align-text-top noRightClick twitterSection" data="
ಮೈಸೂರು ವಿಶ್ವವಿದ್ಯಾಲಯ, ಮೈಸೂರು ಬ್ಯಾಂಕ್, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಮುನ್ನುಡಿ ಬರೆದ,
ಮೈಸೂರು ಸಂಸ್ಥಾನದ ನವ ನಿರ್ಮಾತೃ, ಅಭಿವೃದ್ಧಿಯ ಹರಿಕಾರ 'ನಾಲ್ವಡಿ ಕೃಷ್ಣರಾಜ ಒಡೆಯರ್' ಜನ್ಮದಿನದಂದು ಅವರಿಗೆ ನಮ್ಮ ಗೌರವ… pic.twitter.com/ZrBeqEgvp6
">ಕೃಷ್ಣರಾಜ ಸಾಗರ ಜಲಾಶಯಕ್ಕೆ ಅಡಿಗಲ್ಲು ಹಾಕಿದ, ದೇಶದ ಮೊದಲ ಬೃಹತ್ ಜಲ ವಿದ್ಯುತ್ ಕೇಂದ್ರ ಸ್ಥಾಪಿಸಿದ,
— Karnataka Congress (@INCKarnataka) June 4, 2023
ಮೈಸೂರು ವಿಶ್ವವಿದ್ಯಾಲಯ, ಮೈಸೂರು ಬ್ಯಾಂಕ್, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಮುನ್ನುಡಿ ಬರೆದ,
ಮೈಸೂರು ಸಂಸ್ಥಾನದ ನವ ನಿರ್ಮಾತೃ, ಅಭಿವೃದ್ಧಿಯ ಹರಿಕಾರ 'ನಾಲ್ವಡಿ ಕೃಷ್ಣರಾಜ ಒಡೆಯರ್' ಜನ್ಮದಿನದಂದು ಅವರಿಗೆ ನಮ್ಮ ಗೌರವ… pic.twitter.com/ZrBeqEgvp6ಕೃಷ್ಣರಾಜ ಸಾಗರ ಜಲಾಶಯಕ್ಕೆ ಅಡಿಗಲ್ಲು ಹಾಕಿದ, ದೇಶದ ಮೊದಲ ಬೃಹತ್ ಜಲ ವಿದ್ಯುತ್ ಕೇಂದ್ರ ಸ್ಥಾಪಿಸಿದ,
— Karnataka Congress (@INCKarnataka) June 4, 2023
ಮೈಸೂರು ವಿಶ್ವವಿದ್ಯಾಲಯ, ಮೈಸೂರು ಬ್ಯಾಂಕ್, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಮುನ್ನುಡಿ ಬರೆದ,
ಮೈಸೂರು ಸಂಸ್ಥಾನದ ನವ ನಿರ್ಮಾತೃ, ಅಭಿವೃದ್ಧಿಯ ಹರಿಕಾರ 'ನಾಲ್ವಡಿ ಕೃಷ್ಣರಾಜ ಒಡೆಯರ್' ಜನ್ಮದಿನದಂದು ಅವರಿಗೆ ನಮ್ಮ ಗೌರವ… pic.twitter.com/ZrBeqEgvp6
ಕಾಂಗ್ರೆಸ್ ಪಕ್ಷ ಟ್ವೀಟ್: ಕೃಷ್ಣರಾಜ ಸಾಗರ ಜಲಾಶಯಕ್ಕೆ ಅಡಿಗಲ್ಲು ಹಾಕಿದ, ದೇಶದ ಮೊದಲ ಬೃಹತ್ ಜಲ ವಿದ್ಯುತ್ ಕೇಂದ್ರ ಸ್ಥಾಪಿಸಿದ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ಬ್ಯಾಂಕ್, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಮುನ್ನುಡಿ ಬರೆದ, ಮೈಸೂರು ಸಂಸ್ಥಾನದ ನವ ನಿರ್ಮಾತೃ, ಅಭಿವೃದ್ಧಿಯ ಹರಿಕಾರ 'ನಾಲ್ವಡಿ ಕೃಷ್ಣರಾಜ ಒಡೆಯರ್' ಜನ್ಮದಿನದಂದು ಅವರಿಗೆ ನಮ್ಮ ಗೌರವ ನಮನಗಳು ಎಂದಿದೆ.
ಸಚಿವ ಎಂ.ಬಿ. ಪಾಟೀಲ್ ಟ್ವೀಟ್: ಜಲ ವಿದ್ಯುತ್, ಶಿಕ್ಷಣ, ಆರೋಗ್ಯ, ಉದ್ಯೋಗ, ಕಲೆ-ಸಂಸ್ಕೃತಿ, ಭಾಷೆ ಸೇರಿದಂತೆ ನಾಡಿನ ಸಮಗ್ರ ಅಭಿವೃದ್ಧಿಗೆ ಹಲವು ಕೊಡುಗೆಗಳನ್ನು ನೀಡಿದ ಸಮರ್ಥ ಆಡಳಿತಗಾರ ರಾಜರ್ಷಿ ನಾಲ್ವಡಿಕೃಷ್ಣರಾಜ ಒಡೆಯರ್ ಅವರ ಜನ್ಮದಿನದಂದು ಆ ಮಹಾನ್ ಚೇತನಕ್ಕೆ ಗೌರವದ ನಮನಗಳು. ಅವರ ಅಧಿಕಾರಾವಧಿಯನ್ನು ಡಿವಿಜಿಯವರು ‘ಸುವರ್ಣ ಯುಗ’ವೆಂದು ವರ್ಣಿಸಿದ್ದಾರೆ. ರಾಜ್ಯ ಮಾತ್ರವಲ್ಲದೆ ರಾಷ್ಟ್ರವೇ ಹೆಮ್ಮೆ ಪಡುವ ಅನನ್ಯ ಸಾಧಕ ಅವರು ಎಂದಿದ್ದಾರೆ.
ಸಚಿವ ಈಶ್ವರ್ ಖಂಡ್ರೆ ಟ್ವೀಟ್: ಮೈಸೂರು ಸಂಸ್ಥಾನದ ನವ ನಿರ್ಮಾತೃ, ಅಭಿವೃದ್ಧಿಯ ಹರಿಕಾರ 'ನಾಲ್ವಡಿ ಕೃಷ್ಣರಾಜ ಒಡೆಯರ್' ಜನ್ಮದಿನದಂದು ಅವರಿಗೆ ನನ್ನ ಗೌರವ ನಮನಗಳು ಎಂದಿದ್ದಾರೆ. ಸಚಿವ ಎನ್. ಚಲುವರಾಯಸ್ವಾಮಿ ಟ್ವೀಟ್ ಮಾಡಿದ್ದು, ನಾಡು ಕಂಡ ಶ್ರೇಷ್ಠ ಆಡಳಿತಗಾರ, ಆಧುನಿಕ ಮೈಸೂರಿನ ರೂವಾರಿ, ಕನ್ನಡ ನಾಡಿನ ಸಾಮಾಜಿಕ, ಶೈಕ್ಷಣಿಕ ಆರ್ಥಿಕ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದ, ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಚಿಗುರಿಸಿದ, ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಿದ ದಿವ್ಯ ಚೇತನಕ್ಕೆ ಭಾವಪೂರ್ವ ನಮನಗಳು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನವಾದ ಇಂದು ಅವರಿಗೆ ಭಾವಪೂರ್ಣ ನಮನಗಳು ಎಂದಿದ್ದಾರೆ. ಸಚಿವರಾದ ಶಿವರಾಜ್ ತಂಗಡಗಿ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಹಲವು ನಾಯಕರು ಟ್ವೀಟ್ ಮಾಡಿ ಶುಭಾಶಯ ಕೋರಿದ್ದಾರೆ.
ಇದನ್ನೂ ಓದಿ: ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಸಣ್ಣ ಲೋಪವನ್ನೂ ಸಹಿಸಲಾಗದು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್