ETV Bharat / state

ಮೈಸೂರು ದಸರಾ: ಹೆಚ್ಚುವರಿ ಜನದಟ್ಟಣೆ ನಿವಾರಣೆಗೆ ವಿಶೇಷ ರೈಲುಗಳ ವ್ಯವಸ್ಥೆ - ​ ETV Bharat Karnataka

ಮೈಸೂರು ದಸರಾಕ್ಕೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಿರುವ ನೈರುತ್ಯ ರೈಲ್ವೆ, ಪ್ರಯಾಣಿಕರು ಕಾಯ್ದಿರಿಸದ ಟಿಕೆಟ್‌ಗಳನ್ನು ತೊಂದರೆಮುಕ್ತವಾಗಿ ಖರೀದಿಸಲು ಯುಟಿಎಸ್ ಮೊಬೈಲ್ ಅಪ್ಲಿಕೇಶನ್ ವ್ಯವಸ್ಥೆ ಮಾಡಿದೆ.

Etv Bharat
ನೈರುತ್ಯ ರೈಲ್ವೆ
author img

By ETV Bharat Karnataka Team

Published : Oct 19, 2023, 6:08 PM IST

ಬೆಂಗಳೂರು: ಮೈಸೂರು ದಸರಾ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆಯು ಮೈಸೂರು-ಧಾರವಾಡ ಹಾಗು ಮೈಸೂರು-ವಿಜಯಪುರ ನಡುವೆ ವಿಶೇಷ ರೈಲು ಸೇವೆ ಒದಗಿಸಲು ನಿರ್ಧರಿಸಿದೆ.

  • ರೈಲು ಸಂಖ್ಯೆ 06205 ಮೈಸೂರಿನಿಂದ ಧಾರವಾಡಕ್ಕೆ ಅಕ್ಟೋಬರ್ 22 ಮತ್ತು 24 ರಂದು ಎರಡು ಸಲ ಪ್ರಯಾಣವನ್ನು ಪ್ರಾರಂಭಿಸುತ್ತದೆ. ರೈಲು ಮೈಸೂರಿನಿಂದ 22:35 ಗಂಟೆಗೆ ಹೊರಡುತ್ತದೆ ಮತ್ತು ಮರುದಿನ 08:00 ಕ್ಕೆ ಧಾರವಾಡ ತಲುಪುತ್ತದೆ. ಮಾರ್ಗದಲ್ಲಿ ರೈಲಿಗೆ ಕೃಷ್ಣರಾಜನಗರ, ಹೊಳೆನರಸೀಪುರ, ಹಾಸನ, ಅರಸೀಕೆರೆ, ಕಡೂರು, ಬೀರೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಬ್ಯಾಡಗಿ, ಹಾವೇರಿ ಮತ್ತು ಹುಬ್ಬಳ್ಳಿಯಲ್ಲಿ ವಾಣಿಜ್ಯ ನಿಲುಗಡೆ ನೀಡಲಾಗಿದೆ.
  • ರೈಲು ನಂ.06206 ಧಾರವಾಡದಿಂದ ಮೈಸೂರಿಗೆ ಪ್ರಯಾಣವನ್ನು ಎರಡು ಸಲ, ಅಂದರೆ, ಅಕ್ಟೋಬರ್ 23 ಮತ್ತು 25 ರಂದು ಪ್ರಾರಂಭಿಸುತ್ತದೆ. ರೈಲು ಧಾರವಾಡದಿಂದ 11:15 ಗಂಟೆಗೆ ಹೊರಡುತ್ತದೆ ಮತ್ತು ಅದೇ ದಿನ 21:30 ಗಂಟೆಗೆ ಮೈಸೂರು ತಲುಪುತ್ತದೆ. ರೈಲು ಮಾರ್ಗದಲ್ಲಿ ಹುಬ್ಬಳ್ಳಿ, ಹಾವೇರಿ, ಬ್ಯಾಡಗಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಕಡೂರು, ಅರಸೀಕೆರೆ, ಹಾಸನ, ಹೊಳೆನರಸೀಪುರ ಮತ್ತು ಕೃಷ್ಣರಾಜನಗರದಲ್ಲಿ ವಾಣಿಜ್ಯ ನಿಲುಗಡೆ ಇರುತ್ತದೆ.
  • ರೈಲು ಸಂಖ್ಯೆ.06205 ಮತ್ತು 06206 ಒಂದು ಎರಡನೆಯ ದರ್ಜೆ ಎಸಿ, ಮೂರು ಮೂರನೆಯ ದರ್ಜೆ ಎಸಿ, ಎಂಟು ಸ್ಲೀಪರ್ ದರ್ಜೆ ಮತ್ತು ನಾಲ್ಕು ದ್ವಿತೀಯ ದರ್ಜೆ ಆಸನದ ಕೋಚ್‌ಗಳ ಸಂಯೋಜನೆಯನ್ನು ಹೊಂದಿರುತ್ತದೆ.
  • ರೈಲು ನಂ.06203 ಅಕ್ಟೋಬರ್ 20 ರಂದು ಮೈಸೂರಿನಿಂದ ಬಿಜಾಪುರಕ್ಕೆ ಒಂದು ಬಾರಿಯ ಪ್ರಯಾಣವನ್ನು ಪ್ರಾರಂಭಿಸುತ್ತದೆ. ಅದು ಕೆಎಸ್‌ಆರ್ ಬೆಂಗಳೂರು ನಿಲ್ದಾಣದ ಮೂಲಕ ಹಾದು ಹೋಗುತ್ತದೆ. ರೈಲು ಮೈಸೂರಿನಿಂದ 17:30 ಗಂಟೆಗೆ ಹೊರಟು ಮರುದಿನ 10:00 ಗಂಟೆಗೆ ಬಿಜಾಪುರ ತಲುಪಲಿದೆ. ರೈಲಿಗೆ ಮಾರ್ಗ ಮದ್ಯದಲ್ಲಿ ಮಂಡ್ಯ, ರಾಮನಗರ, ಕೆಂಗೇರಿ, ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಕರಜಗಿ, ಹುಬ್ಬಳ್ಳಿ, ಹೊಳೆ ಆಲೂರು, ಬಾದಾಮಿ ಮತ್ತು ಬಾಗಲಕೋಟೆಯಲ್ಲಿ ವಾಣಿಜ್ಯ ನಿಲುಗಡೆ ಇರುತ್ತದೆ.
  • ರೈಲು ನಂ.06204 ಬಿಜಾಪುರದಿಂದ ಮೈಸೂರಿಗೆ ಹಾಸನ ಮಾರ್ಗವಾಗಿ 21 ನೇ ಅಕ್ಟೋಬರ್‌ ರಂದು ದಸರಾ ವಿಶೇಷ ಪ್ರಯಾಣವನ್ನು ನಡೆಸಲಿದೆ. ರೈಲು ಬಿಜಾಪುರದಿಂದ 11:45 ಗಂಟೆಗೆ ಹೊರಟು ಮರುದಿನ 03:00 ಗಂಟೆಗೆ ಮೈಸೂರು ತಲುಪುತ್ತದೆ. ಮಾರ್ಗದಲ್ಲಿ ರೈಲಿಗೆ ಬಾಗಲಕೋಟೆ, ಬಾದಾಮಿ, ಹೊಳೆ ಆಲೂರು, ಹುಬ್ಬಳ್ಳಿ, ಕಾರಜಗಿ, ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ಹಾಸನ, ಹೊಳೆನರಸೀಪುರ ಮತ್ತು ಕೃಷ್ಣರಾಜನಗರದಲ್ಲಿ ವಾಣಿಜ್ಯ ನಿಲುಗಡೆ ಇರುತ್ತದೆ.
  • ರೈಲು ಸಂಖ್ಯೆ.06203 ಮತ್ತು 06204 ಒಂದು ಎರಡನೆಯ ದರ್ಜೆ ಎಸಿ, ಮೂರು ಮೂರನೆಯ ದರ್ಜೆ ಎಸಿ, ಎಂಟು ಸ್ಲೀಪರ್ ದರ್ಜೆ ಮತ್ತು ನಾಲ್ಕು ದ್ವಿತೀಯ ದರ್ಜೆ ಆಸನದ ಕೋಚ್‌ಗಳ ಸಂಯೋಜನೆಯನ್ನು ಹೊಂದಿರುತ್ತದೆ.
  • ಮೈಸೂರಿನಿಂದ ಚಾಮರಾಜನಗರ ಮತ್ತು ಮೈಸೂರಿನಿಂದ ಕೆಎಸ್‌ಆರ್ ಬೆಂಗಳೂರು ನಡುವೆ ಸಂಚರಿಸುವ ದಸರಾ ವಿಶೇಷ ರೈಲುಗಳ ಸಮಯವನ್ನು ಪರಿಷ್ಕರಣೆ ಮಾಡಲಾಗಿದೆ ಅದರಂತೆ ರೈಲು ಸಂಖ್ಯೆ. 06597 ಈಗ ಕೆಎಸ್‌ಆರ್ ಬೆಂಗಳೂರಿನಿಂದ 17:00 ಗಂಟೆಗೆ ಹೊರಟು 20:15 ಗಂಟೆಗೆ ಮೈಸೂರು ತಲುಪಲಿದೆ ಮತ್ತು ಪ್ರತಿಯಾಗಿ ರೈಲು ನಂ.06598 ಮೈಸೂರಿನಿಂದ 20:30 ಗಂಟೆಗೆ ಹೊರಟು 23:30 ಗಂಟೆಗೆ ಕೆಎಸ್‌ಆರ್ ಬೆಂಗಳೂರು ತಲುಪಲಿದೆ. ಈ ವಿಶೇಷ ರೈಲುಗಳು ಹೆಚ್ಚುವರಿ ಜನದಟ್ಟಣೆ ತೆರವುಗೊಳಿಸಲು ಅಕ್ಟೋಬರ್ 20 ರಿಂದ ಅಕ್ಟೋಬರ್ 24 ರವರೆಗೆ ಸೇವೆಗಳನ್ನು ಹೊಂದಿರುತ್ತವೆ.
  • ರೈಲು ನಂ.06283 ಮೈಸೂರಿನಿಂದ ಚಾಮರಾಜನಗರಕ್ಕೆ ಅಕ್ಟೋಬರ್ 24 ರಂದು 20:45 ಗಂಟೆಗೆ ಮೈಸೂರಿನಿಂದ ಹೊರಟು 22:40 ಗಂಟೆಗೆ ಚಾಮರಾಜನಗರ ತಲುಪಲಿದೆ. ಮತ್ತು ಹಿಂದಿರುಗುವ ದಿಕ್ಕಿನಲ್ಲಿ ರೈಲು ನಂ.06284 ಅಕ್ಟೋಬರ್ 24 ರಂದು 23:00 ಗಂಟೆಗೆ ಚಾಮರಾಜನಗರದಿಂದ ಹೊರಟು ಮರುದಿನ 01:00 ಗಂಟೆಗೆ ಮೈಸೂರಿಗೆ ತಲುಪುತ್ತದೆ.
  • ಪ್ರಯಾಣಿಸುವ ಸಾರ್ವಜನಿಕರು ಈ ದಸರಾ ಹಬ್ಬದ ಋತುವಿನಲ್ಲಿ ತೊಂದರೆ ರಹಿತ ಪ್ರಯಾಣಕ್ಕಾಗಿ ಈ ವಿಶೇಷ ರೈಲು ಸೇವೆಗಳನ್ನು ಬಳಸಿಕೊಳ್ಳಬಹುದು ಮತ್ತು ಪ್ರಯಾಣಿಕರು ಕಾಯ್ದಿರಿಸದ ಟಿಕೆಟ್‌ಗಳನ್ನು ತೊಂದರೆ ಮುಕ್ತವಾಗಿ ಖರೀದಿಸಲು ಯುಟಿಎಸ್ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ನೈರುತ್ಯ ರೈಲ್ವೆ ವಿನಂತಿಸಿದೆ.

ಇದನ್ನೂ ಓದಿ: ಮೈಸೂರು ದಸರಾ ಪ್ರಯುಕ್ತ ನೈರುತ್ಯ ರೈಲ್ವೆಯಿಂದ ವಿಶೇಷ ರೈಲುಗಳ ಸಂಚಾರ: ಹೀಗಿದೆ ವೇಳಾಪಟ್ಟಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.