ETV Bharat / state

ನನ್ನ ಸೋಲಿಗೆ ಬಚ್ಚೇಗೌಡರ ಪುತ್ರ ವ್ಯಾಮೋಹವೇ ಕಾರಣ: ಎಂಟಿಬಿ ನಾಗರಾಜ್

ತೀವ್ರ ಕುತೂಹಲ ಕೆರಳಿಸಿದ್ದ ಉಪ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಹೈ ವೊಲ್ಟೇಜ್ ಕ್ಷೇತ್ರಗಳಲ್ಲಿ ಒಂದಾದ ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಗೆ ಅಚ್ಚರಿ ಫಲಿತಾಂಶ ನೀಡಿರುವ ಮತದಾರ ಸ್ವತಂತ್ರ ಅಭ್ಯರ್ಥಿ ಸ್ವಾಭಿಮಾನಿ ಶರತ್ ಬಚ್ಚೇಗೌಡರಿಗೆ ವಿಜಯಮಾಲೆ ತೊಡಿಸಿದ್ದು, ಈ ಹಿನ್ನೆಲೆಯಲ್ಲಿ ಮಾಧ್ಯಮ ಗೋಷ್ಠಿ ನಡೆಸಿದ ಎಂಟಿಬಿ ನಾಗರಾಜ್ ತಮ್ಮ ಬದ್ಧ ವೈರಿ ಬಿಜೆಪಿ ಸಂಸದ ಬಿ ಎನ್ ಬಚ್ಚೇಗೌಡ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

mtb-nagaraj
ಎಂಟಿಬಿ ನಾಗರಾಜ್
author img

By

Published : Dec 9, 2019, 8:36 PM IST

ಹೊಸಕೋಟೆ: ನನ್ನ ಸೋಲಿಗೆ ನೇರ ಕಾರಣ ಬಿಜೆಪಿ ಸಂಸದ ಬಿ ಎನ್ ಬಚ್ಚೇಗೌಡ. ಇವತ್ತು ಪುತ್ರನನ್ನು ಪಕ್ಷೇತರನಾಗಿ ನಿಲ್ಲಿಸಿ, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿ ನನ್ನ ಸೋಲಿಗೆ ಕಾರಣರಾಗಿದ್ದಾರೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್ ಆರೋಪಿಸಿದ್ದಾರೆ.

ಎಂಟಿಬಿ ನಾಗರಾಜ್

ಗರುಡಚಾರ್ ಪಾಳ್ಯದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ ದ್ರೋಹವೆಸಗಿ ನನ್ನ ಸೋಲಿಗೆ ಕಾರಣರಾದ ಬಿ ಎನ್ ಬಚ್ಚೇಗೌಡರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ನಾಯಕರು ಹಾಗೂ ರಾಜ್ಯದ ಸಿಎಂ ಗೆ ಒತ್ತಾಯಿಸುತ್ತೇನೆ ಎಂದರು.

ಇನ್ನು ಸೋಲಿನ ಬಗ್ಗೆ ಸಿಎಂ ಜೊತೆ ಚರ್ಚಿಸಿದ್ದೇನೆ. ಸ್ಥಾನಮಾನ ಕೊಡುವ ಬಗ್ಗೆ ಇನ್ನೂ ಭರವಸೆ ನೀಡಿಲ್ಲ. ರಾಜಕಾರಣದಲ್ಲಿ ಸೋಲು ಗೆಲುವು ಸಹಜ. ರಾಜಕಾರಣ ಇಷ್ಟಕ್ಕೆ ಮುಗಿದಿಲ್ಲ. ನಾನು ನಿಮ್ಮೊಂದಿಗೆ ಇರುತ್ತೇನೆ ಎಂದು ತಮ್ಮ ಕಾಣಲು ಬಂದ ಕಾರ್ಯಕರ್ತರು ಅಭಿಮಾನಿಗಳನ್ನು ಸಂತೈಸಿದ ಅವರು, ಬಿಜೆಪಿ ಪಕ್ಷದ ನಾಯಕರುಗಳ ಮುಂದಿನ ತಿರ್ಮಾನ ಗಮನಿಸಿ ಮುಂದಿನ ನಡೆ ಬಗ್ಗೆ ತಿರ್ಮಾನಿಸುವುದಾಗಿ ತಿಳಿಸಿದ್ದಾರೆ.

Intro:ಹೊಸಕೋಟೆ:

ನನ್ನ ಸೋಲಿಗೆ ಬಚ್ಚೇಗೌಡ ಪುತ್ರ ವ್ಯಾಮೋಹ ಕಾರಣ- ಬಿಜೆಪಿ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್ ಆಕ್ರೋಶ.

ತೀವ್ರ ಕುತೂಹಲ ಕೆರಳಿಸಿದ್ದ ಉಪ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಹೈ ವೊಲ್ಟೇಜ್ ಕ್ಷೇತ್ರಗಳಲ್ಲಿ ಒಂದಾದ ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಗೆ ಅಚ್ಚರಿ ಫಲಿತಾಂಶ ನೀಡಿರುವ ಮತದಾರ ಸ್ವತಂತ್ರ ಅಭ್ಯರ್ಥಿ ಸ್ವಾಭಿಮಾನಿ ಶರತ್ ಬಚ್ಚೇಗೌಡರಿಗೆ ವಿಜಯಮಾಲೆ ತೊಡಿಸಿದ್ದಾರೆ. ಹೌದು ಸೋಲಿನ ಬಳಿಕ ಮಾಧ್ಯಮ ಗೋಷ್ಠಿ ನಡೆಸಿದ ಎಂಟಿಬಿ ನಾಗರಾಜ್ 70 ಸಾವಿರಕ್ಕೂ ಅಧಿಕ ಮತ ನೀಡಿದ ಹೊಸಕೋಟೆ ಮತದಾರ ಪ್ರಭುಗಳಿಗೆ ಅಭಿನಂಧನೆ ಸಲ್ಲಿಸಿದ್ದಾರೆ. ಜೊತೆಗೆ ತಮ್ಮಬದ್ಧ ವೈರಿ ಬಿಜೆಪಿ ಸಂಸದ ಬಿ ಎನ್ ಬಚ್ಚೇಗೌಡ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Body:ನನ್ನ ಸೋಲಿಗೆ ನೇರ ಕಾರಣ ಬಿಜೆಪಿ ಸಂಸದ ಬಿ ಎನ್ ಬಚ್ಚೇಗೌಡ. ಬಿಜೆಪಿ ಪಕ್ಷದಿಂದ ಶಾಸಕ, ಸಚಿವ ಸಂಸದರಾಗಿ ಅಧಿಕಾರ ಅನುಭವಿಸಿದ ಬಚ್ಚೇಗೌಡ ಮಗನನ್ನು ಬೆಂಬಲಿಸಿ ಪಕ್ಷ ಮತ್ತು ಪಕ್ಷದ ಅಧಿಕೃತ ಅಭ್ಯರ್ಥಿಯಾದ ನನಗೆ ದ್ರೋಹವೆಸಗಿದ್ದಾರೆ. ಮಗನ ಭವಿಷ್ಯಕ್ಕಾಗಿ ವಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು ಕುತಂತ್ರ ನಡೆಸಿದ್ದಾರೆ.

Conclusion:ಪಕ್ಷ ದ್ರೋಹವೆಸಗಿ ನನ್ನ ಸೋಲಿಗೆ ಕಾರಣರಾದ ಬಿ ಎನ್ ಬಚ್ಚೇಗೌಡರ ಮೇಲೆ ಬಿಜೆಪಿ ಹೈ ಕಮಾಂಡ್ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನೂ ಸೋಲಿನ ಬಗ್ಗೆ ಸಿಎಂ ಜೊತೆ ಚರ್ಚಿಸಿದ್ದೆನೆ. ಸ್ಥಾನಮಾನ ಕೊಡುವ ಬಗ್ಗೆ ಇನ್ನೂ ಭರವಸೆ ನೀಡಿಲ್ಲ. ರಾಜಕಾರಣದಲ್ಲಿ ಸೋಲು ಗೆಲುವು ಸಹ. ರಾಜಕಾರಣ ಇಷ್ಟಕ್ಕೆ ಮುಗಿದಿಲ್ಲ. ನಾನು ನಿಮ್ಮೊಂದಿಗೆ ಇರುತ್ತೆನೆ ಎಂದು ತಮ್ಮ ಕಾಣಲು ಬಂದ ಕಾರ್ಯಕರ್ತರು ಅಭಿಮಾನಿಗಳನ್ನು ಸಂತೈಸಿದ ಅವರು ಬಿಜೆಪಿ ಪಕ್ಷದ ನಾಯಕರುಗಳ ಮುಂದಿನ ತಿರ್ಮಾನದ ಗಮನಿಸಿ ಮುಂದಿನ ನಡೆ ಬಗ್ಗೆ ತಿರ್ಮಾನಿಸುವುದಾಗಿ ಗರುಡಚಾರ್ ಪಾಳ್ಯದ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪರಾಜಿತ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ತಿಳಿಸಿದ್ದಾರೆ.

ಬೈಟ್ : ಎಂಟಿಬಿ ನಾಗರಾಜ್, ಬಿಜೆಪಿ ಪರಾಜಿತ ಅಭ್ಯರ್ಥಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.