ETV Bharat / state

ಮದ್ಯದ ಅಮಲಿನಲ್ಲಿ ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡಿದ ಸ್ನೇಹಿತನ ಹತ್ಯೆ: ಆರೋಪಿ ಬಂಧನ - ಸ್ನೇಹಿತನ ಹತ್ಯೆ

ಅಭಿಜಿತ್​ ಎಂಬ ವ್ಯಕ್ತಿ ಆತನ ಹೆಂಡತಿ ಬಗ್ಗೆ ಸ್ನೇಹಿತ ಬಸವರಾಜ್​​, ಕುಡಿದ ಅಮಲಿನಲ್ಲಿ ಕೆಟ್ಟದಾಗಿ ಮಾತನಾಡಿದ ಎಂಬ ಕಾರಣಕ್ಕೆ ಆತನನ್ನು ಕೊಲೆ ಮಾಡಿದ್ದಾನೆ. ಡಿ.6ರ ರಾತ್ರಿ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯ ಸಿದ್ಧಲಿಂಗೇಶ್ವರ ಥಿಯೇಟರ್ ಬಳಿ ಕೊಲೆ ನಡೆದಿತ್ತು.

Murder of a man who spoke badly
ಪತ್ನಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದವನ ಹತ್ಯೆ
author img

By

Published : Dec 8, 2022, 1:07 PM IST

ಬೆಂಗಳೂರು: ಮದ್ಯದ ಅಮಲಿನಲ್ಲಿ ಸ್ನೇಹಿತನನ್ನ ಕೊಲೆ ಮಾಡಿದ್ದ ಆರೋಪಿಯನ್ನ ಪುಟ್ಟೇನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ‌. ಅಭಿಜಿತ್ ಬಂಧಿತ ಆರೋಪಿ. ಡಿ.6ರ ರಾತ್ರಿ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯ ಸಿದ್ಧಲಿಂಗೇಶ್ವರ ಥಿಯೇಟರ್ ಬಳಿ ಸ್ನೇಹಿತ ಬಸವರಾಜ್ (25) ಎಂಬಾತನನ್ನ ಕತ್ತು ಸೀಳಿ ಕೊಲೆ ಮಾಡಿ, ಆರೋಪಿ ತಲೆಮರೆಸಿಕೊಂಡಿದ್ದ.

ಮೂಲತಃ ಕನಕಪುರದವನಾಗಿರುವ ಅಭಿಜಿತ್ 2 ವರ್ಷಗಳಿಂದ ಪ್ಲಂಬಿಂಗ್, ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ. ಗದಗ ಮೂಲದವನಾಗಿದ್ದ ಬಸವರಾಜ್, ಅಭಿಜಿತ್ ಜೊತೆಯಲ್ಲೇ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ: ಮಹಿಳೆ ಜೊತೆ ನಂಟಿನ ಸಂಶಯ: ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಅಭಿಜಿತ್ ಹಾಗೂ ಆತನ ಪತ್ನಿಗೆ ಅವಾಚ್ಯ ಪದ ಬಳಸಿ ನಿಂದಿಸುತ್ತಿದ್ದ ಬಸವರಾಜ್, ಘಟನಾ ದಿನವೂ ಕುಡಿದ ಮತ್ತಿನಲ್ಲಿ ಅಭಿಜಿತ್ ಪತ್ನಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ ಎನ್ನಲಾಗ್ತಿದೆ. ಇದರಿಂದ ಕೋಪಗೊಂಡ ಆತ ಮದ್ಯದ ಅಮಲಿನಲ್ಲಿ ಬಸವರಾಜ್​ನನ್ನ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.