ETV Bharat / state

ಬೆಂಗಳೂರಲ್ಲಿ ಹರಿದ ನೆತ್ತರು... ಗ್ರಾಹಕರಂತೆ ಅಂಗಡಿಗೆ ಬಂದು ಮಾಲೀಕನ ಬರ್ಬರವಾಗಿ ಕೊಂದ್ರು..! - ಕೊರೊನಾ‌ ಭೀತಿ

ಕ್ರಿಮಿನಾಶಕ ಔಷಧಿ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು, ಮಾಲೀಕನನ್ನು ಕೊಲೆ‌ ಮಾಡಿ ಪರಾರಿಯಾಗಿದ್ದಾರೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿ‌ ತನಿಖೆ ಮುಂದುವರೆಸಿದ್ದಾರೆ.

Murder in Bangalore
ಅಂಗಡಿಗೆ ನುಗ್ಗಿ ಮಾಲೀಕನ ಬರ್ಬರ ಹತ್ಯೆ
author img

By

Published : Jul 7, 2020, 7:32 PM IST

ಬೆಂಗಳೂರು: ಕೊರೊನಾ‌ ಭೀತಿಯಲ್ಲಿ ಸ್ವಲ್ಪ ಕಡಿಮೆಯಾಗಿದ್ದ ಕ್ರೈಮ್ ಮತ್ತೆ ಚಿಗುರಿಕೊಂಡಿದ್ದು, ಸದ್ದಿಲ್ಲದೇ ಕೊಲೆ, ದರೋಡೆಗಳು ನಡೆಯುತ್ತಿವೆ.

ಇಂದು ಸಂಜೆ ವಿಜಯ ನಗರದ ಆರ್.ಪಿ.ಸಿ. ಲೇಔಟ್​​​ನಲ್ಲಿ, ಕ್ರಿಮಿನಾಶಕ ಔಷಧಿ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು ಮಾಲೀಕನನ್ನು ಕೊಲೆ‌ ಮಾಡಿ ಪರಾರಿಯಾಗಿದ್ದಾರೆ.

ಅಂಗಡಿಗೆ ನುಗ್ಗಿ ಮಾಲೀಕನ ಬರ್ಬರ ಹತ್ಯೆ

ಹನುಮೇಶ್ ಗೌಡ ಎಂಬುವರ ಕೊಲೆಯಾಗಿದ್ದು, ಇವರು ಕ್ರಿಮಿನಾಶಕ ಔಷಧಿ ಅಂಗಡಿಯೊಂದನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಇಂದು ದುಷ್ಕರ್ಮಿಗಳು ಗ್ರಾಹಕರ ರೀತಿಯಲ್ಲಿ ಅಂಗಡಿಗೆ ಎಂಟ್ರಿ ಕೊಟ್ಟು, ಔಷಧಿ ವಿಚಾರ ಮಾತಾಡ್ತಾ ಚಾಕು ಇರಿದು ಕೊಲೆ ಮಾಡಿದ್ದಾರೆ. ಸದ್ಯ ವಿಚಾರ ತಿಳಿದು ಸ್ಥಳಕ್ಕೆ ವಿಜಯನಗರ ಎಸಿಪಿ ಹಾಗೂ ಇನ್ಸ್​ಪೆಕ್ಟರ್​ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಹಳೇ ದ್ವೇಷದ ಹಿನ್ನೆಲೆ ಕೊಲೆ‌ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿ‌ ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.