ETV Bharat / state

ಡಿಕೆಶಿ ಆಹ್ವಾನ ತಿರಸ್ಕರಿಸಿ ಬೇಷರತ್ತಾಗಿ ಬಿಜೆಪಿ ಸೇರಿದ ಮುದ್ದಹನುಮೇಗೌಡ: ಪಕ್ಷ ಸಂಘಟನೆಗೆ ಪಣ ತೊಟ್ಟ ಶಶಿಕುಮಾರ್ - ಬಿಜೆಪಿ

ಮಾಜಿ‌ ಸಂಸದ ಎಸ್​ ಪಿ ಮುದ್ದಹನುಮೇಗೌಡ, ಚಿತ್ರದುರ್ಗ ಮಾಜಿ ಸಂಸದ, ನಟ ಶಶಿಕುಮಾರ್ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಗುರುವಾರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

Shashikumar says he is not a monk
ಬಿಜೆಪಿ ಸೇರಿದ ಮಾಜಿ ಸಂಸದ ಎಸ್​​ ಪಿ ಮುದ್ದಹನುಮೇಗೌಡ
author img

By

Published : Nov 3, 2022, 12:59 PM IST

ಬೆಂಗಳೂರು: ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ, ನಾನು ಯಾವುದೇ ಷರತ್ತಿಲ್ಲದೆ ಬೇಷರತ್ತಾಗಿ ಬಿಜೆಪಿ ಸೇರಿದ್ದೇನೆ.ಇಲ್ಲಿನ ತತ್ವ, ಸಿದ್ಧಾಂತ ಚೆನ್ನಾಗಿ ಗೊತ್ತು. ಹಾಗಾಗಿ ಟಿಕೆಟ್ ಸೇರಿದಂತೆ ನನಗೆ ಕೊಡುವ ಜವಾಬ್ದಾರಿ ನಿರ್ವಹಿಸುತ್ತೇನೆ. ಕುಣಿಗಲ್ ಕ್ಷೇತ್ರ ಮತ್ತು ತುಮಕೂರು ಜಿಲ್ಲೆಯಲ್ಲಿ ಪಕ್ಷ ಬಲಪಡಿಸುವ ಕೆಲಸ ಮಾಡಲಿದ್ದೇನೆ ಎಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮಾಜಿ ಸಂಸದ ಎಸ್​​ ಪಿ ಮುದ್ದಹನುಮೇಗೌಡ ತಿಳಿಸಿದ್ದಾರೆ.

ಪಕ್ಷದ ಕಾರ್ಯಕರ್ತನಾಗಿ ಇರುತ್ತೇನೆ: ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧ್ಯಕ್ಷರು, ಸಿಎಂ ಹಾಗೂ ಪಕ್ಷದ ನಾಯಕರು ಗೌರವಯುತವಾಗಿ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ನಾನೂ ಕೂಡ ಪಕ್ಷದ ಕಾರ್ಯಕರ್ತನಾಗಿ ಇರುತ್ತೇನೆ. ನಮ್ಮದು ರಾಷ್ಟ್ರೀಯ ಪಕ್ಷ, ಅದರ ನಿಯಮಕ್ಕೆ ನಾನು ಬದ್ಧನಾಗಿದ್ದೇನೆ. ಕುಣಿಗಲ್ ಬಿಜೆಪಿ ನಾಯಕ ಕೃಷ್ಣಾ ಕುಮಾರ್ ಕೂಡ ಕಾರ್ಯಕ್ರಮಕ್ಕೆ ಬಂದಿದ್ದರು. ನಾವೆಲ್ಲರೂ ಒಟ್ಟಾಗಿ ಸೇರಿ ಪಕ್ಷವನ್ನು ಕಟ್ಟುವ ಕೆಲಸ ಮಾಡುತ್ತೇವೆ ಎಂದರು.

ಡಿಕೆಶಿಗೆ ಟಾಂಗ್​ ನೀಡಿದ ಮುದ್ದಹನುಮೇಗೌಡ: ಕೆಪಿಸಿಸಿ ಅಧ್ಯಕ್ಷರು ಕಾಂಗ್ರೆಸ್ ಬಿಟ್ಟು, ಬಿಜೆಪಿ ಸೇರಿರುವವರನ್ನೂ ಸ್ವಾಗತ ಮಾಡೋದಾಗಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ತೊರೆದು, ಬಿಜೆಪಿ ಸೇರಿ ಎಲ್ಲರೂ ಕಂಫರ್ಟ್ ಆಗಿದ್ದಾರೆ ಎಂದು ಡಿಕೆಶಿ ಮುಕ್ತ ಆಹ್ವಾನಕ್ಕೆ ಮುದ್ದಹನುಮೇಗೌಡ ತಿರುಗೇಟು ನೀಡಿದರು. ವಲಸಿಗರು ಕಾಂಗ್ರೆಸ್​ನಲ್ಲಿದ್ದಾಗ ಬಹಳ ನೋವು ಅನುಭವಿಸಿದ್ದರು. ಹಾಗಾಗಿ ಅವರು ಬಿಜೆಪಿ ಸೇರಿದ್ದಾರೆ. ಬಿಜೆಪಿಗೆ ಬಂದವರು ಎಲ್ಲರೂ ಕಂಫರ್ಟ್ ಆಗಿದ್ದಾರೆ ಎಂದು ಹೇಳುವ ಮೂಲಕ ಡಿಕೆಶಿಗೆ ಟಾಂಗ್ ನೀಡಿದರು.

ಟಿಕೆಟ್ ಕೇಳಿಲ್ಲ: ನಾನು ಟಿಕೆಟ್ ಬೇಕು ಅಂತ ಎಲ್ಲೂ ಕೇಳಿಲ್ಲ. ಪ್ರಧಾನಿ ನರೇಂದ್ರ ಮೋದಿ ಕಾರ್ಯವೈಖರಿ ಬಗ್ಗೆ ಮೆಚ್ಚಿ ಬಂದಿದ್ದೇನೆ ಎಂದು ಮಾಜಿ ಸಂಸದ, ನಟ ಶಶಿಕುಮಾರ್ ತಿಳಿಸಿದ್ದಾರೆ. ಬಿಜೆಪಿ ಸೇರ್ಪಡೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕೂಡ ಎಸ್ಸಿ- ಎಸ್ಟಿ ಸಮುದಾಯಕ್ಕೆ ಕೊಡುಗೆ ನೀಡಿದ್ದಾರೆ. ಮೀಸಲಾತಿ ವಿಚಾರವಾಗಿ ಬಹು ವರ್ಷದ ಬೇಡಿಕೆ ಈಡೇರಿಸಿದ್ದಾರೆ. ಚಳ್ಳಕೆರೆ ಟಿಕೆಟ್ ವಿಚಾರದಲ್ಲಿ ಪಕ್ಷದ ತೀರ್ಮಾನಕ್ಕೆ ನಾನು ಬದ್ಧ. ನಾನು ಸನ್ಯಾಸಿಯಲ್ಲ, ಆದರೆ ಪಕ್ಷದ ತೀರ್ಮಾನವೇ ಅಂತಿಮ ಎಂದಿದ್ದಾರೆ.

ಮರಳಿ ಕಾಂಗ್ರೆಸ್​ಗೆ ಬರುವಂತೆ ಡಿ ಕೆ ಶಿವಕುಮಾರ್ ಆಹ್ವಾನ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಶಶಿಕುಮಾರ್, ಡಿಕೆಶಿ ಆಹ್ವಾನ ನನಗೆ ಅನ್ವಯಿಸೋದಿಲ್ಲ. ಹೋಗೋರು ಹೋಗಲಿ. ಬಂದವರು ತಿರಸ್ಕಾರ ಮಾಡಿಯೇ ಅಲ್ವಾ ಬಂದಿರೋದು. ಬಹುಶಃ ಅವರಿಗೆ ಹೇಳಿರಬೇಕು, ನನಗಲ್ಲ ಎಂದರು.

ಕೊರಟಗೆರೆಯಲ್ಲಿ ಸ್ಪರ್ಧೆಗೆ ಸಿದ್ಧ: ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಮಾತನಾಡಿ, ಕೊರಟಗೆರೆಯಲ್ಲಿ ಪಕ್ಷ ಯಾರನ್ನು ಆಯ್ಕೆ ಮಾಡಲಿದೆಯೋ ಅದೇ ಅಂತಿಮ. ನಾನು ಕೂಡ ಟಿಕೆಟ್ ಆಕಾಂಕ್ಷಿ. ಪಕ್ಷ ಅದನ್ನು ಚುನಾವಣೆ ಸಂದರ್ಭದಲ್ಲಿ ಸ್ಪಷ್ಟ ಮಾಡಲಿದೆ. ಹಿರಿಯ ವಕ್ತಾರರಾಗಿ ನನಗೆ ಕೆಲಸ ಮಾಡಲು ಸೂಚಿಸಿದ್ದಾರೆ. ಕೊರಟಗೆರೆ ಕ್ಷೇತ್ರದಲ್ಲಿ ಸ್ಪರ್ಧಿಸಲು ನಾನು ಸಿದ್ಧನಿದ್ದೇನೆ. 35 ವರ್ಷ ಕಾರ್ಯಾಂಗದಿಂದ ಕೆಲಸ ಮಾಡಿ ಅನುಭವ ಇದೆ. ಈಗ ನಿವೃತ್ತಿ ನಂತರ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: ಬಿಜೆಪಿ ಸೇರಿದ ನಟ ಶಶಿಕುಮಾರ್, ಮಾಜಿ ಸಂಸದ ಮುದ್ದಹನುಮೇಗೌಡ

ಡಿಕೆಶಿ ಆಹ್ವಾನ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಹೋಗದೆ ಬಿಜೆಪಿ ಯಾಕೆ ಸೇರ್ಪಡೆಯಾಗಿದ್ದೇನೆ. ಬಿಜೆಪಿ ನೀತಿ, ನಿಯಮ ಅನುಷ್ಠಾನ ಮಾಡಿಕೊಳ್ಳಬೇಕು. ಆ ಪಕ್ಷದಲ್ಲಿ ನಡೆಸುವಂತ ಕೆಲ ನಿಯಮಗಳನ್ನು ಗಮನಿಸಿದ್ದೇನೆ. ಬಿಜೆಪಿಯಲ್ಲಿ ಸಂಕಲ್ಪ ಇದೆ. ಅದನ್ನು ಅನುಷ್ಠಾನಕ್ಕೆ ತರಬೇಕಿದೆ ಅಂತ ಸರ್ಕಾರಕ್ಕೆ ಬೆಂಬಲವಾಗಿ ನಿಂತಿದ್ದೇವೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.