ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದ್ದು, ಸೋಂಕು ಹರಡುವುದನ್ನ ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ಹಲವು ಟನಲ್ಗಳನ್ನು ನಿರ್ಮಿಸಲಾಗಿದ್ದು, ಇದೀಗ, ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಮೂಡಲಪಾಳ್ಯ ವಾರ್ಡ್ನನಲ್ಲಿ ಮೊದಲ ಜೈವಿಕ ದ್ರಾವಣ ಸಿಂಪಡನೆ ಟನಲ್ನನ್ನು ವಸತಿ ಸಚಿವ ವಿ.ಸೋಮಣ್ಣ, ಬಿ.ಬಿ.ಎಂ.ಪಿ. ಸದಸ್ಯ ದಾಸೇಗೌಡ ಉದ್ಘಾಟನೆ ಮಾಡಿದರು.
ಇದೇ ವೇಳೆ ಮಾತಾನಾಡಿದ ವಸತಿ ಸಚಿವ ವಿ.ಸೋಮಣ್ಣ, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಡವರು ಮತ್ತು ಮಧ್ಯಮ ವರ್ಗದವರ ಸಂಖ್ಯೆ ಹೆಚ್ಚಿದೆ. ಕೊರೊನಾ ವೈರಸ್ ಸಾಂಕ್ರಮಿಕ ರೋಗದ ವಿರುದ್ಧ ಇಗಾಗಲೇ ಜನಜಾಗೃತಿ ಮೂಡಿಸಲಾಗಿದೆ. ಮೂಡಲಪಾಳ್ಯ ವಾರ್ಡಿನ ಮಾರ್ಕೆಟ್ ಬರುವವರಿಗೆ ಜೈವಿಕ ದ್ರಾವಣ ಸಿಂಪಡನೆ ಮಾಡುವುದರಿಂದ ಕೊರೊನಾ ವೈರಸ್ ಮುಕ್ತ ಮಾಡಲು ಸಹಕಾರಿಯಾಗಿದೆ ಎಂದರು.
ಇನ್ನು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಕಡೆ ಜೈವಿಕ ದ್ರಾವಣ ಸಿಂಪಡನೆ ಟನಲ್ ಸ್ಥಾಪಿಸಲಾಗುವುದು, ಇನ್ನು ಮೂರು ತಿಂಗಳುಗಳ ಕಾಲ ಜನರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಬಿ.ಬಿ.ಎಂ.ಪಿ.ಸದಸ್ಯ ದಾಸೇಗೌಡ ಮಾತನಾಡಿ, ಬೆಂಗಳೂರಿನ ಪ್ರಪ್ರಥಮ ಜೈವಿಕ ದ್ರಾವಣ ಸಿಂಪಡನೆ ಟನಲ್ ಇದಾಗಿದ್ದು, ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಟನಲ್ನನ್ನು ಸ್ಥಾಪಿಸಲಾಗಿದೆ. ಜೈವಿಕ ದ್ರಾವಣದಲ್ಲಿ ಯಾವುದೇ ರಾಸಯನಿಕ ಇರುವುದಿಲ್ಲ, ಇದನ್ನು ಸಿಂಪಡನೆ ಮಾಡುವುದರಿಂದ ದೇಹದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದರು.