ETV Bharat / state

ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆಗೆ ಹೋಟೆಲ್​ ದಾನ ನೀಡಿದ ಶ್ರೀಮತಿ ಮೀರಾ ನಾಯ್ಡು - ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡಲು ಮುಂದಾದ ಆಸ್ಪತ್ರೆ

ಅತಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಿ ಕ್ಯಾನ್ಸರ್ ಗುಣಪಡಿಸುತ್ತಿದ್ದ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆಗೆ ಶ್ರೀಮತಿ ಮೀರಾ ನಾಯ್ಡುರವರು ತಮ್ಮ ಹೋಟೆಲ್​​ನ್ನು ದಾನವಾಗಿ ನೀಡಿದ್ದಾರೆ.

ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆಗೆ ಹೋಟೆಲ್​ ದಾನ ನೀಡಿದ ಶ್ರೀಮತಿ ಮೀರಾ ನಾಯ್ಡು
Mrs Meera Naidu
author img

By

Published : Jan 15, 2020, 10:34 PM IST

ಬೆಂಗಳೂರು: ಅತಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಿ ಕ್ಯಾನ್ಸರ್ ಗುಣಪಡಿಸುತ್ತಿದ್ದ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತೊಂದು ಮೈಲಿಗಲ್ಲು ಇಟ್ಟಿದ್ದು, ಮಕ್ಕಳ ಕ್ಯಾನ್ಸರ್ ರೋಗಕ್ಕೆ ಉಚಿತವಾಗಿ ಚಿಕಿತ್ಸೆ ನೀಡಲು ಮುಂದಾಗಿದೆ. ಅಲ್ಲದೇ ಈ ಆಸ್ಪತ್ರೆಗೆ ಶ್ರೀಮತಿ ಮೀರಾ ನಾಯ್ಡುರವರು ತಮ್ಮ ಹೋಟೆಲ್​​ನ್ನು ದಾನವಾಗಿ ನೀಡಿದ್ದಾರೆ.

ಶಂಕರ ಟ್ರಸ್ಟ್ ವ್ಯವಸ್ಥಾಪಕರು ಹಾಗೂ ಕ್ಯಾನ್ಸರ್ ಶಸ್ತ್ರವೈದ್ಯರಾದ ಡಾ. ಶ್ರೀನಾಥ್

ಬಸವನಗುಡಿಯಲ್ಲಿರುವ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ 2012 ರಿಂದ ಇಂದಿನವರೆಗೆ 43,000 ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಿದ್ದು, ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಿ ಗುಣಪಡಿಸುವಲ್ಲಿ ಶಂಕರ ಆಸ್ಪತ್ರೆ ಹೆಸರುವಾಸಿಯಾಗಿದೆ. ಚಿಕಿತ್ಸೆಯ ಜೊತೆಗೆ ಕ್ಯಾನ್ಸರ್ ರೋಗಿಗಳಿಗೆ ನಿತ್ಯ ಅನ್ನದಾನ ಸೇವೆಯನ್ನು ಮಾಡುತ್ತಾ ಬಂದಿದೆ.

ಈ ಕುರಿತು ಶಂಕರ ಟ್ರಸ್ಟ್ ವ್ಯವಸ್ಥಾಪಕರು ಹಾಗೂ ಕ್ಯಾನ್ಸರ್ ಶಸ್ತ್ರವೈದ್ಯರಾದ ಡಾ. ಶ್ರೀನಾಥ್ 'ಈಟಿವಿ ಭಾರತ್​' ಜೊತೆ ಮಾತನಾಡಿ, ಕ್ಯಾನ್ಸರ್ ರೋಗವನ್ನು ಗುಣಪಡಿಸಲು ದುಬಾರಿ ವೆಚ್ಚ ತಗುಲುತ್ತದೆ. ತಮ್ಮ ಆಸ್ಪತ್ರೆಯಲ್ಲಿ ಚಿಕ್ಕ ಮಕ್ಕಳಿಗೆ ಕ್ಯಾನ್ಸರ್ ಉಚಿತವಾಗಿ ಗುಣಪಡಿಸುವ ಒಂದು ವಿಭಾಗವನ್ನು ಆರಂಭಿಸಿದ್ದೇವೆ. ಅದರಲ್ಲಿ ದೂರದ ಹಳ್ಳಿಗಳಿಂದ ಬರುವ ಬಡಜನರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಯೋಜನೆ ಇದೆ. ಈ ಮೂಲಕ ಚಿಕ್ಕ ಮಕ್ಕಳ ಕ್ಯಾನ್ಸರ್ ಗುಣಪಡಿಸಬಹುದಾಗಿದೆ ಎಂದರು.

ಇನ್ನು ಶ್ರೀಮತಿ ಮೀರಾ ನಾಯ್ಡುರವರು ತಮ್ಮ ಪತಿಯ ಸ್ಮರಣಾರ್ಥವಾಗಿ ಗಾಂಧಿನಗರದಲ್ಲಿದ್ದ ಲಕ್ಷ್ಮೀ ಹೋಟೆಲ್​ನ್ನು ಆಸ್ಪತ್ರೆಗೆ ದಾನವಾಗಿ ನೀಡಿದ್ದಾರೆ. ಇದರಲ್ಲಿರುವ ಮೂವತ್ತು ಕೋಣೆಗಳನ್ನು ನವೀಕರಣ ಮಾಡಿ ಮೂವತ್ತು ಸಂಸಾರಗಳು ಉಚಿತವಾಗಿ ನೆಲೆಸಲು ಹಾಗೂ ಉಚಿತ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಮಕ್ಕಳು ತಿಂಗಳುಗಳ ಕಾಲ ಚಿಕಿತ್ಸೆಗೆಂದು ನಗರದಲ್ಲಿ ತಂಗಾಬೇಕಾಗುತ್ತದೆ. ಉಳಿದಿಕೊಳ್ಳುವ ಹೆಚ್ಚಾಗಿ ಖರ್ಚು ತಗುಲುತ್ತದೆ. ಮಹಾತಾಯಿ ದಾನ ಮಾಡಿರುವ ಹೋಟೆಲ್​​ ಬಹಳಷ್ಟು ಉಪಕಾರಿಯಾಗಿದೆ ಎಂದು ಮೀರಾ ನಾಯ್ಡುರಿಗೆ ವಂದನೆ ಸಲ್ಲಿಸಿದರು.

ಹದಿನೈದು ದಿನದಲ್ಲಿ ಲಕ್ಷ್ಮಿ ಚಿಲ್ಡ್ರನ್ಸ್ ಹೆಲ್ತ್ ಸೆಂಟರ್ ಸೇವೆಗೆ ಸಿದ್ಧ:
ಹೋಟೇಲ್ ನವೀಕರಣ ಮಾಡಿ ರೋಗಿಗಳ ಕುಟುಂಬ ಚಿಕಿತ್ಸೆಯ ಅವಧಿಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಎಲ್ಲ ತಯಾರಾಗಿದೆ. ಬಿಸಿ ನೀರು, ಅಡುಗೆ ವ್ಯವಸ್ಥೆ ಆಗಿದೆ. ಹದಿನೈದು ದಿನದಲ್ಲಿ ಅಲ್ಲಿ ಕೆಲಸ ಆರಂಭವಾಗಲಿದೆ. ಡೊನೇಷನ್ ಕೊಡುವವರಿಗೆ ಸದಾ ಅವಕಾಶವಿದೆ. ಆಸ್ಪತ್ರೆ, ದಾನ ಮಾಡಲು ಇಚ್ಛಿಸುವವರು 08026981000, ಅಥವಾ 08026981026 ನಂಬರ್​​ಗೆ ಸಂಪರ್ಕಿಸಬಹುದಾಗಿದೆ ಎಂದರು.

Intro:
ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಉಚಿತ ಚಿಕಿತ್ಸೆ ಆರಂಭಿಸಲಿರುವ ಶ್ರೀ ಶಂಕರ ಆಸ್ಪತ್ರೆ- ಉಚಿತ ವಸತಿ ವ್ಯವಸ್ಥೆ ನೀಡಿರುವ ದಾನಿ ಮೀರಾ ನಾಯ್ಡ

ಬೆಂಗಳೂರು: ಅತಿ ಕಡಿಮೆ ವೆಚ್ಚದಲ್ಲಿ, ಗುಣಮಟ್ಟದ ಚಿಕಿತ್ಸೆ ನೀಡಿ ಕ್ಯಾನ್ಸರ್ ಗುಣಪಡಿಸುತ್ತಿದ್ದ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತೊಂದು ಮೈಲಿಗಲ್ಲು ಇಟ್ಟಿದೆ. ಮಕ್ಕಳ ಕ್ಯಾನ್ಸರ್ ರೋಗಕ್ಕೆ ಉಚಿತವಾಗಿ ಚಿಕಿತ್ಸೆ ನೀಡಲು ಮುಂದಾಗಿದೆ. ಇದರೊಂದಿಗೆ ಮೀರಾ ನಾಯ್ಡು ಬೆಂಗಳೂರು ನಗರದ ಹೃದಯಭಾಗವಾದ ಗಾಂಧಿನಗರದಲ್ಲಿದ್ದ ಬೃಹತ್ ಲಕ್ಷ್ಮೀ ಹೋಟಲನ್ನು ಆಸ್ಪತ್ರೆ ಸೇವೆಗೆ ದಾನವಾಗಿ ನೀಡಿದ್ದಾರೆ.
ಹೌದು ಬಸವನಗುಡಿಯಲ್ಲಿರುವ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ 2012 ರಿಂದ ಇಂದಿನವರೆಗೆ 43,000 ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಿದೆ. ಬಡ ಹಾಗೂ ಮಧ್ಯಮವರ್ಗದ ಜನರಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಿ ಗುಣಪಡಿಸುವಲ್ಲಿ ಶಂಕರ ಆಸ್ಪತ್ರೆ ಹೆಸರುವಾಸಿಯಾಗಿದೆ. ಚಿಕಿತ್ಸೆಯ ಜೊತೆಗೆ ಕ್ಯಾನ್ಸರ್ ರೋಗಿಗಳಿಗೆ ಏಳು ಹೊತ್ತು 'ನಿತ್ಯ ಅನ್ನದಾನ ಸೇವೆ' ಯನ್ನೂ ಮಾಡುತ್ತಾ ಬಂದಿದೆ.

ಶಂಕರ ಟ್ರಸ್ಟ್ ವ್ಯವಸ್ಥಾಪಕರು ಹಾಗೂ ಕ್ಯಾನ್ಸರ್ ಶಸ್ತ್ರವೈದ್ಯರಾದ ಡಾ. ಶ್ರೀನಾಥ್ ಈಟಿವಿ ಭಾರತ್ ಜೊತೆ ಮಾತನಾಡಿ, ಕ್ಯಾನ್ಸರ್ ರೋಗವನ್ನು ಗುಣಪಡಿಸಲು ದುಬಾರಿ ವೆಚ್ಚ ತಗುಲುತ್ತದೆ. ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕ್ಕ ಮಕ್ಕಳಿಗೆ ಕ್ಯಾನ್ಸರ್ ಉಚಿತವಾಗಿ ಗುಣಪಡಿಸುವ ಒಂದು ವಿಭಾಗವನ್ನು ಆರಂಭಿಸಿದ್ದೇವೆ. ಅದರಲ್ಲಿ ಹಳ್ಳಿ ಕಡೆಯಿಂದ, ದೂರದಿಂದ ಬರುವ ಜನರು, ಬಡಜನರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಯೋಜನೆ ಇದೆ. ಚಿಕ್ಕಮಕ್ಕಳ ಕ್ಯಾನ್ಸರ್ ಅನ್ನು ಗುಣಪಡಿಸಬಹುದಾಗಿದೆ. ನೂರು ಜನರಲ್ಲಿ ಎಂಭತ್ತು ಮಕ್ಕಳ ಕ್ಯಾನ್ಸರ್ ಗುಣಪಡಿಸಬಹುದು. ಇದಕ್ಕೆ ಪೂರಕವಾಗಿ, ಶ್ರೀಮತಿ ಮೀರಾ ನಾಯ್ಡು, ಅವರ ದಿವಂಗತ ಪತಿಯ ಸ್ಮರಣಾರ್ಥವಾಗಿ, ಅವರ ಗಾಂಧಿನಗರದಲ್ಲಿದ್ದ ಲಕ್ಷ್ಮೀ ಹೋಟೆಲನ್ನು ದಾನವಾಗಿ ನೀಡಿದ್ದಾರೆ. ಉದಾರವಾದ ಹೃದಯದಿಂದ ದಾನ ಮಾಡಿದ್ದಾರೆ. 1976 ರಲ್ಲಿ ಕಟ್ಟಿದ ಬಹಳ ಹೆಸರುವಾಸಿಯಾದ, ರಾಜ್ ಕುಮಾರ್ ನಂತಹ ಸಿನಿ ದಿಗ್ಗಜರು ತಂಗಿರುತ್ತಿದ್ದ ಆ ಹೋಟೇಲನ್ನು ದಾನ ಮಾಡಿದ್ದಾರೆ. ಇದರಲ್ಲಿರುವ ಮೂವತ್ತು ಕೋಣೆಗಳನ್ನು ನವೀಕರಣ ಮಾಡಿ, ಮೂವತ್ತು ಸಂಸಾರಗಳು ಉಚಿತವಾಗಿ ನೆಲೆಸಲು ಹಾಗೂ ಉಚಿತ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಮಕ್ಕಳು ಮೂರ್ಲ್ನಾಲ್ಕು ತಿಂಗಳು ಚಿಕಿತ್ಸೆಗಾಗಿ ಬೆಂಗಳೂರಲ್ಲಿ ಉಳಿದುಕೊಳ್ಳಬೇಕಾಗುತ್ತದೆ. ಬೆಂಗಳೂರು ನಗರದಲ್ಲಿ ಉಳಿದಿಕೊಳ್ಳುವ ಖರ್ಚುವೆಚ್ಚ ಹೆಚ್ಚಾಗಿರುವುದರಿಂದ , ಈ ಮಹಾತಾಯಿ ದಾನ ಮಾಡಿರುವ ಹೋಟೇಲ್ ಬಹಳಷ್ಟು ಉಪಕಾರಿಯಾಗಿದೆ. ಇದರಿಂದ ಚಿಕ್ಕ ಮಕ್ಕಳು, ಕ್ಯಾನ್ಸರ್
ರೋಗಿಗಳ ಸೇವೆ ಮಾಡಲು ಸಹಕಾರಿಯಾಗಿದೆ ಎಂದರು.
ಅಲ್ಲದೆ ಶ್ರೀ ಶಂಕರ ಕ್ಯಾನ್ಸರ್ ಸಂಸ್ಥೆ ಯಾವತ್ತಿಗೂ ಮೀರಾ ನಾಯ್ಡು ಕುಟುಂಬಕ್ಕೆ ಚಿರರುಣಿಯಾಗಿರುತ್ತದೆ ಎಂದರು. ಕೆಲವೆಡೆ ಲಕ್ಷ್ಮೀ ಹೋಟೇಲ್ ನ ಮೌಲ್ಯ ಮುನ್ನೂರು ಕೋಟಿ ರೂ ಎಂದು ಪ್ರಿಂಟ್ ಮಿಸ್ಟೇಕ್ ಆಗಿದೆ, ಅದರ ಮೌಲ್ಯ ಮೂವತ್ತು ಕೋಟಿ ರೂ. ಎಷ್ಟೇ ಆದರೂ ದಾನಕ್ಕೆ ಬೆಲೆ ಕಟ್ಟಲಾಗದು ಎಂದು ಅವರು ತಿಳಿಸಿದರು.

ಹದಿನೈದು ದಿನದಲ್ಲಿ ಲಕ್ಷ್ಮಿ ಚಿಲ್ಡ್ರನ್ಸ್ ಹೆಲ್ತ್ ಸೆಂಟರ್ ಸೇವೆಗೆ ಸಿದ್ಧ

ಹೋಟೇಲ್ ಅನ್ನು ನವೀಕರಣ ಮಾಡಿ, ರೋಗಿಗಳ ಕುಟುಂಬ ಚಿಕಿತ್ಸೆಯ ಅವಧಿಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಎಲ್ಲ ತಯಾರಾಗಿದೆ. ಬಿಸಿನೀರು, ಅಡುಗೆ ವ್ಯವಸ್ಥೆ ಆಗಿದೆ. ಹದಿನೈದು ದಿನದಲ್ಲಿ ಅಲ್ಲಿ ಕೆಲಸ ಆರಂಭವಾಗಲಿದೆ.

ಡೊನೇಷನ್ ಕೊಡುವವರಿಗೆ ಸದಾ ಅವಕಾಶವಿದೆ ಹೇಳುವ ಆಸ್ಪತ್ರೆ, ದಾನ ಮಾಡಲು ಇಚ್ಛಿಸುವವರು 08026981000, ಅಥವಾ 08026981026 ನಂಬರ್ ಗೆ ಸಂಪರ್ಕಿಸಬಹುದಾಗಿದೆ.

ಸೌಮ್ಯಶ್ರೀ
Kn_bng_03_shankara_hospital_7202707

Body:...

Conclusion:...

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.