ಬೆಂಗಳೂರು/ಆನೇಕಲ್: ಕೇಂದ್ರ ಸರ್ಕಾರ ಪೌರತ್ವ ಕಾಯ್ದೆ ತಿದ್ದುಪಡಿ ಬೆಂಬಲಿಸಿ ಎಂದು ಬಿಜೆಪಿ ಪಂಜಿನ ಮೆರವಣಿಗೆ ನಡೆಸಿತು.
ಬೆಂಗಳೂರು ನಗರ ಜಿಲ್ಲೆ ಆನೇಕಲ್ ಪಟ್ಟಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಭಾಗವಹಿಸಿದ್ದು ಸಿಎಎ ವಿರೋಧಿಸುವವರನ್ನು ತರಾಟೆಗೆ ತೆಗೆದುಕೊಂಡರು. 1947ರಲ್ಲಿ ಧರ್ಮಾಧಾರಿತವಾಗಿ ಪಾಕಿಸ್ತಾನ-ಭಾರತ ಇಬ್ಭಾಗವಾಯ್ತು, ಹಿಂದೂ ನಾಯಕರ ವಿರೋಧದ ನಡುವೆ ಕಾಂಗ್ರೆಸ್ನ ನೆಹರೂ ಪ್ರಧಾನಿಯಾಗುವ ಸಲುವಾಗಿ ದೇಶ ಇಬ್ಭಾಗಕ್ಕೆ ಅಸ್ತು ಅಂದಿದ್ರು. ಅತ್ತ ಮಹಮ್ಮದ್ ಆಲಿ ಜಿನ್ನಾ ಪಾಕಿಸ್ತಾನದ ಹಿಂದೂಗಳನ್ನ ಒತ್ತೆಯಾಳುಗಳಾಗಿಟ್ಟುಕೊಳ್ಳುತ್ತೇವೆ ಎಂದಿದ್ದರು. ಕಾರಣ ಭಾರತದಲ್ಲಿನ ಮುಸ್ಲಿಮರಿಗೆ ಹಿಂಸೆ ನೀಡಿದರೆ ಪಾಕಿಸ್ತಾನದ ಹಿಂದೂಗಳಿಗೆ ಹಿಂಸೆ ನೀಡುವ ಹುನ್ನಾರ ಅವರದಾಗಿತ್ತು ಎಂದರು.
ಪಾಕಿಸ್ತಾನ ಇಬ್ಭಾಗವಾದಾಗ ಹಿಂದೂಗಳ ಸಂಖ್ಯೆ 15% ಇದ್ದು, ಈಗ 2% ಕ್ಕೆ ಇಳಿದಿದೆ. ಬಾಂಗ್ಲಾದಲ್ಲಿ 22% ಇತ್ತು ಈಗ 7%ಕ್ಕೆ ಇಳಿದಿದೆ. ಇದಕ್ಕೆ ಮೂರೇ ಕಾರಣಗಳು ಒಂದು ಹಿಂದುಗಳು ಸತ್ತಿರಬೇಕು, ಇಲ್ಲಾ ಮತಾಂತರಗೊಂಡಿರಬೇಕು, ಇಲ್ಲಾಂದ್ರೆ ಶರಣಾಗತಿ ಹೊಂದಿ ಭಾರತಕ್ಕೆ ವಲಸೆ ಬಂದಿರಬೇಕು ಇಲ್ಲಿಯವರೆಗೆ ಅನ್ಯ ದೇಶದ ಹಿಂದೂಗಳು ನರಕ ಅನುಭವಿಸುತ್ತಿದ್ದಾರೆ. ನರಕ ತೋರಿಸಿದವರಿಗೆ ಇಲ್ಲಿ ಸ್ಥಳಾವಕಾಶ ನೀಡಬಾರದೆಂದು ಸಿಎಎ ಆಗ್ರಹಿಸುತ್ತದೆ. ಆದ್ದರಿಂದ ಸಿಎಎಗೆ ಬೆಂಬಲ ವ್ಯಕ್ತಪಡಿಸಿ ಎಂದರು.