ಬೆಂಗಳೂರು : ವಿಲ್ಸನ್ ಗಾರ್ಡನ್ನಲ್ಲಿ ನೆನೆಗುದಿಗೆ ಬಿದ್ದಿದ್ದ ಮಹಾಬೋಧಿ ಆಸ್ಪತ್ರೆಗೆ ಮತ್ತೆ ಚಾಲನೆ ಸಿಕ್ಕಿದೆ. ಸಂಸದರಾದ ಡಿ ಕೆ ಸುರೇಶ್ ಅವರ ನೆರವಿನೊಂದಿಗೆ ಸಂಸದ ತೇಜಸ್ವಿ ಸೂರ್ಯ ಈ ಆಸ್ಪತ್ರೆಗೆ ಚಾಲನೆ ನೀಡಿದ್ದಾರೆ.
ಕಳೆದ ಏಳು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಮಹಾಬೋಧಿ ಆಸ್ಪತ್ರೆ ಸುಸಜ್ಜಿತ ವ್ಯವಸ್ಥೆಗಳೊಂದಿಗೆ ಕೋವಿಡ್ ಚಿಕಿತ್ಸೆಗೆ ಸಜ್ಜಾಗಿದೆ. 50 ಹಾಸಿಗೆಗಳ ಸೌಲಭ್ಯ ಇದ್ದು, 40 ಬೆಡ್ಗಳಿಗೆ ಆಕ್ಸಿಜನ್ ಹಾಗೂ ಹತ್ತು ಬೆಡ್ಗಳು ಐಸಿಯು ಸೌಲಭ್ಯ ಹೊಂದಿವೆ.
![MP Tejaswi Surya inaugurates Mahabodhi Hospital with the help of DK Suresh](https://etvbharatimages.akamaized.net/etvbharat/prod-images/11689981_thu.jpg)
ಈ ಬಗ್ಗೆ ವಿಡಿಯೋ ಮೂಲಕ ಮಾತನಾಡಿರುವ ಸಂಸದ ತೇಜಸ್ವಿ ಸೂರ್ಯ, ನಗರದಲ್ಲಿ ಪ್ರತಿ ದಿನ ಬೆಡ್ ಜಾಸ್ತಿ ಮಾಡಬೇಕು. ಐಸಿಯು ಹೆಚ್ಚಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ.
ಹೀಗಾಗಿ, ಕಳೆದ ಹತ್ತು ದಿನಗಳಿಂದ ಸತತ ಪ್ರಯತ್ನ ಮಾಡಿ, ಬಿಬಿಎಂಪಿ ಅಧಿಕಾರಿಗಳು, ಬೇರೆ ಬೇರೆ ಆಸ್ಪತ್ರೆ ಅಧಿಕಾರಿಗಳು, ಎನ್‌ಜಿಒ ಹಾಗೂ ಸಂಸದ ಡಿಕೆ ಸುರೇಶ್ ಸೇರಿ ಎಲ್ಲರ ಸಹಕಾರದೊಂದಿಗೆ ಆಸ್ಪತ್ರೆ ಆರಂಭವಾಗಿದೆ ಎಂದರು.