ETV Bharat / state

ಮಂಡ್ಯದಲ್ಲಿ ಆಪರೇಷನ್ ಕಮಲ: ಸುಮಲತಾ ಆಪ್ತ ಸಚ್ಚಿದಾನಂದ ಸೇರಿ ಹಲವರು ಬಿಜೆಪಿಗೆ ಸೇರ್ಪಡೆ - ಸಚಿವ ಅಶ್ವತ್ಥ್ ನಾರಾಯಣ್

ಅತಿ ಹೆಚ್ಚು ಸಾಲ ತೆಗೆದುಕೊಂಡಿರುವ ಜಿಲ್ಲೆ ಅಂದರೆ ಮಂಡ್ಯ. ಅತಿಹೆಚ್ಚಿನ ಆತ್ಮಹತ್ಯೆ ಆಗುವ ಜಿಲ್ಲೆ ಎಂದರೆ ಅದು ಮಂಡ್ಯ ಜಿಲ್ಲೆ. ಆದರೆ, ನಂಬಿ ಅವಕಾಶ ಕೊಟ್ಟ ವ್ಯಕ್ತಿಗಳು ಏನು ಮಾಡಿದ್ದಾರೆಂದು ಎಲ್ಲರಿಗೂ ಗೊತ್ತಿದೆ ಎಂದು ಸಚಿವ ಅಶ್ವತ್ಥ ನಾರಾಯಣ್ ಅವರು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಹೆಸರು ಹೇಳದೇ ಪರೋಕ್ಷವಾಗಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

MP Sumalatha Amabareesh's close aide Sacchidananda joined BJP
ಸುಮಲತಾ ಆಪ್ತ ಸಚ್ಚಿದಾನಂದ ಸೇರಿ ಹಲವರು ಬಿಜೆಪಿ ಸೇರ್ಪಡೆ
author img

By

Published : Nov 28, 2022, 1:04 PM IST

ಬೆಂಗಳೂರು: ಟಾರ್ಗೆಟ್ ಹಳೆ ಮೈಸೂರು ಭಾಗವಾಗಿ ಚುನಾವಣಾ ಪೂರ್ವದಲ್ಲೇ ಆಪರೇಷನ್ ಕಮಲ ಆರಂಭಿಸಿರುವ ಬಿಜೆಪಿ ನಾಯಕರು ಸತತ ಪ್ರಯತ್ನದ ಬಳಿಕ ಅಂತಿಮವಾಗಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಆಪ್ತ ಸಚ್ಚಿದಾನಂದ ಸೇರಿ ಮಂಡ್ಯದ ಪ್ರಮುಖ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಸುಮಲತಾರನ್ನು ಸೇರಿಸಿಕೊಳ್ಳುವ ಮೊದಲಿನ ಭಾಗವಾಗಿ ಈ ಆಪರೇಷನ್ ನಡೆದಿದೆ ಎನ್ನಲಾಗುತ್ತಿದೆ.

ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುಮಲತಾ ಆಪ್ತ ಇಂಡುವಾಳು ಸಚ್ಚಿದಾನಂದ, ನಾಗಮಂಗಲದ ರವಿ, ಶ್ರೀರಂಗಪಟ್ಟಣದ ಲಿಂಗರಾಜು ಬಿಜೆಪಿ ಸೇರ್ಪಡೆಯಾದರು. ಪಕ್ಷದ ಭಾವುಟ ಮತ್ತು ಶಾಲು ಹೊದಿಸಿ ಸಚಿವ ಅಶ್ವತ್ಥ ನಾರಾಯಣ್, ಕೆ.ಗೋಪಾಲಯ್ಯ, ನಾರಾಯಣ ಗೌಡರು, ಸಿಪಿ ಯೋಗೇಶ್ವರ್​, ನಿರ್ಮಲ್ ಕುಮಾರ್ ಸುರಾನ, ಶಾಸಕ ಸತೀಶ್ ರೆಡ್ಡಿ, ರವಿ ಸುಬ್ರಹ್ಮಣ್ಯ ಅವರು ಮಂಡ್ಯ ನಾಯಕರಿಗೆ ಸ್ವಾಗತ ಕೋರಿ ಪಕ್ಷಕ್ಕೆ ಬರಮಾಡಿಕೊಂಡರು.

MP Sumalatha Amabareesh's close aide Sacchidananda joined BJP
ಸುಮಲತಾ ಆಪ್ತ ಸಚ್ಚಿದಾನಂದ ಸೇರಿ ಹಲವರು ಬಿಜೆಪಿ ಸೇರ್ಪಡೆ

ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಸಚ್ಚಿದಾನಂದ ಸೇರಿದಂತೆ ಹಲವರ ಸೇರ್ಪಡೆಯಿಂದ ಮಂಡ್ಯ ಭಾಗದಲ್ಲಿ ಬಿಜೆಪಿಗೆ ದೊಡ್ಡ ಶಕ್ತಿ ಹಾಗೂ ಹೊಸ ಸಂಚಲನ ಮೂಡಿಸಿದೆ. ಮಂಡ್ಯದಲ್ಲಿ ಈಗ ಒಬ್ಬರು ಎಂಎಲ್​ಎ ಇದ್ದಾರೆ. ಮುಂದೆ 7ಕ್ಕೆ 7 ಶಾಸಕರು ಬಿಜೆಪಿಯಿಂದ ಆಯ್ಕೆ ಆಗುತ್ತಾರೆ.

ಇದನ್ನೂ ಓದಿ: ಅವಕಾಶ ಸಿಕ್ಕಲ್ಲಿ ಇಂದು ದೆಹಲಿಯಲ್ಲಿ ಜೆಪಿ ನಡ್ಡಾ ಭೇಟಿ ಸಾಧ್ಯತೆ: ಸಿಎಂ ಬೊಮ್ಮಾಯಿ‌

ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಮಾಡುತ್ತಿರುವ ಕೆಲಸದಿಂದ ಇದು ಸಾಧ್ಯವಾಗಲಿದೆ. ನಾರಾಯಣಗೌಡ ಹಾಗೂ ಗೋಪಾಲಯ್ಯರ ಪ್ರಯತ್ನದಿಂದ ಕೆಂಪೇಗೌಡ ಪ್ರತಿಮೆಯ ಮಣ್ಣು ಸಂಗ್ರಹ ರಥಯಾತ್ರೆ ಯಶಸ್ವಿ ಆಗಿದೆ. ಈ ಯಾತ್ರೆಯಿಂದ ಮಂಡ್ಯದಲ್ಲಿ ಹಿಂದುತ್ವದ ಪರವಾದ ವಾತಾವರಣ ನಿರ್ಮಾಣ ಆಗಿದೆ. ಮುಂದಿನ ದಿನಗಳಲ್ಲಿ ‌ಅಲ್ಲಿ ಹಿಂದುತ್ವ ಮತ್ತಷ್ಟು ಜಾಸ್ತಿ ಆಗುತ್ತದೆ ಮುಂದೆಯೂ ಅಲ್ಲಿ ಹಿಂದುತ್ವದ ಆಧಾರದಲ್ಲೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಕ್ಕಡದಲ್ಲಿ ಹೊಡೆದರು: ಸಚಿವ ನಾರಾಯಣಗೌಡ ಮಾತನಾಡಿ, ಇಡೀ ಭಾರತದಲ್ಲೇ ಒಳ್ಳೆಯ ಪಕ್ಷ ಅಂದರೆ ಅದು ಬಿಜೆಪಿ, ಅದಕ್ಕಾಗಿ ನಾನು ಹಿಂದೆ ಜೆಡಿಎಸ್ ತೊರೆದು ಬಿಜೆಪಿ ಸೇರಿದೆ. ಆಗ ಯಾವ ಕಡೆ ನೋಡಿದರೂ ಯಾರೂ ಕಾಣಿಸುತ್ತಿರಲಿಲ್ಲ, ಮದ್ದೂರು ಸ್ವಾಮಿ ಸೇರಿದಂತೆ ಹಲವರು ನನ್ನ ಜೊತೆ ಬಿಜೆಪಿಗೆ ಬಂದರು. ಒಂದು ಒಂದೂವರೆ ವರ್ಷದಿಂದ ಸಚ್ಚಿದಾನಂದನಿಗೆ ನಾವು ಗಾಳ ಹಾಕುತ್ತಿದ್ದೆವು. ಆದರೆ, ಕೊನೆಗೂ ಅವರು ಪಕ್ಷಕ್ಕೆ ಸೇರ್ಪಡೆಯಾದರು ಎಂದರು.

ಸಿಪಿ ಯೋಗೇಶ್ವರ್ ನಮ್ಮ ಜಿಲ್ಲೆಯವರಲ್ಲ. ಆದರೆ, ನಿಮ್ಮ ನೇತೃತ್ವದಲ್ಲಿ ಹಿಂದೆ ನಾವು ಬಿಜೆಪಿ ಸೇರಿದ್ದೇವೆ. ಮಂಡ್ಯ ಬೇರೆ ಬೇರೆ ಭದ್ರಕೋಟೆಯಾಗಿತ್ತು. ಇವತ್ತು ನಮ್ಮ ಜಿಲ್ಲೆಗೆ ದೊಡ್ಡ ಶಕ್ತಿ ಬಂದಂತಾಗಿದೆ. ಮಂಡ್ಯದಲ್ಲಿ ಬಿಜೆಪಿ ದೊಡ್ಡ ಮಟ್ಟಕ್ಕೆ ಬೆಳೆಯುತ್ತಿರೋದು ನಮಗೆ ಖುಷಿ ತರಿಸಿದೆ. ಮಂಡ್ಯದಲ್ಲಿ ಮುಂದೆ 7 ಸೀಟುಗಳನ್ನು ಗೆಲ್ಲುತ್ತೇವೆ. ನಾನು ಇಡೀ ಜಿಲ್ಲೆಯಲ್ಲಿ ಸೇವಕನಾಗಿ ಕಲಸ ಮಾಡುತ್ತೇನೆ ನಾವು ಯಾರು ಕಾಂಗ್ರೆಸ್. ಜೆಡಿಎಸ್​ಗೆ ಭಯ ಪಡುವ ಅವಶ್ಯಕತೆ ಇಲ್ಲ. ನೀವೆಲ್ಲರೂ ನಮ್ಮ ಜೊತೆ ಬಂದಿದ್ದು, ನನಗೆ ದೊಡ್ಡ ಖುಷಿ ತಂದಿದೆ.

ನಮ್ದೆ ಸರ್ಕಾರ ಇದೆ. ಅಲ್ಲಿ ಯಾವುದೇ ಗೂಂಡಾಗಳು ಇಲ್ಲ. ಆದರೆ, ಹಿಂದೆ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದಾಗ, ಕೆಆರ್ ಪೇಟೆಯಲ್ಲಿ ದೊಡ್ಡ ಗುಂಡಾಗಳು ಇದ್ದರು. ಆವಾಗ ನನಗೆ ಕಲ್ಲಿನಲ್ಲಿ ಹೊಡೆದರು. ಎಕ್ಕಡದಲ್ಲಿ ಹೊಡೆದರು. ಆದರೆ, ಅವರಿಗೆ ಕೊನೆಗೆ ತಕ್ಕ ಪಾಠ ಕಲಿಸಿದ್ದೇವೆ ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.

ತಮ್ಮ ಸರ್ಕಾರದ ವಿರುದ್ಧ ಕಿಡಿ: ವಿಧಾನ ಪರಿಷತ್ ಸದಸ್ಯ ಸಿಪಿ ಯೋಗೇಶ್ವರ್ ಮಾತನಾಡಿ, ಈ ಹಿಂದೆ ಮಂಡ್ಯ ಭಾಗದಲ್ಲಿ ಅಭ್ಯರ್ಥಿಗಳ ಕೊರತೆ ಇತ್ತು. ಆದರೆ, ಈ ಬಾರಿ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ಇರುವುದರಿಂದ ಕೊರತೆ ನೀಗಿದೆ. ಮಂಡ್ಯ ಜಿಲ್ಲೆಯಲ್ಲಿ ಪಕ್ಷ ಗಟ್ಟಿಯಾಗಬೇಕಾದರೆ. ಸರ್ಕಾರದ ಯಂತ್ರ ಕೆಲಸ ಮಾಡಬೇಕು. ಮಂಡ್ಯ ಭಾಗದಲ್ಲಿ ಬರೀ‌ ಭಾವನಾತ್ಮಕಕಾಗಿ ಗೆಲ್ಲೋಕೆ ಆಗಲ್ಲ. ಆದರೆ, ಅಲ್ಲಿ ಅಭಿವೃದ್ಧಿ ಮೂಲಕ ಗೆಲ್ಲಬೇಕು. ರಾಜಕೀಯ ಅಂದರೆ ಸ್ಪರ್ಧೆ ಇದ್ದೆ ಇರುತ್ತದೆ. ಆದರೆ, ಸರ್ಕಾರದ ಆಡಳಿತ ಯಂತ್ರ ಗಟ್ಟಿಯಾಗಿ ಇರಬೇಕು ಎಂದರು.

ಇದನ್ನೂ ಓದಿ: ವಿಧಾನಸಭಾ ಚುನಾವಣಾ ಸಿದ್ಧತೆ: ಕೇಶವಕೃಪಾ ಸಂದೇಶ ಪಾಲಿಸುವಂತೆ ಪ್ರಶಿಕ್ಷಣ ವರ್ಗದಲ್ಲಿ ಟ್ಯೂಷನ್

ಸಚಿವ ಗೋಪಾಲಯ್ಯ ಮಾತನಾಡಿ, ಮುಂದೆ ಮಂಡ್ಯದಲ್ಲಿ ಬಿಜೆಪಿ ಗೆಲ್ಲಿಸುವ ಕೆಲಸ ಮಾಡಬೇಕು. ನಾವು ಶಾಸಕರಾಗಿ ರಾಜೀನಾಮೆ ಕೊಟ್ಟು ಬಂದಿದ್ದೇವೆ. ಈಗ ನಮಗೆ ಖುಷಿ ಇದೆ. ನಮ್ಮ ಶಾಸಕರು ಇದ್ದರೆ ಮಾತ್ರ ನಮ್ಮ ಪಕ್ಷದ ಕಾರ್ಯಕರ್ತರ ರಕ್ಷಣೆ ಮಾಡೋಕೆ ಸಾಧ್ಯ. ಹೀಗಾಗಿ ಇನ್ನೂ ಆರು ತಿಂಗಳು ನೀವೆಲ್ಲರೂ ಹಗಲು-ರಾತ್ರಿ ಕೆಲಸ ಮಾಡಬೇಕು ಎಂದು ಕರೆ ಕೊಟ್ಟರು.

ರಕ್ತ ಹೀರುವಂತ ನಾಯಕ: ಸಚಿವ ಅಶ್ವತ್ಥ ನಾರಾಯಣ್ ಮಾತನಾಡಿ, ಮಂಡ್ಯ ಜಿಲ್ಲೆಯವರು ಅಂದರೆ ರಾಜಕೀಯವನ್ನು ಅರೆದು ಕುಡಿದಿರೋರು. ಅವರಿಗೆ ರಾಜಕೀಯನೇ ಉಸಿರು, ನಿದ್ದೆ, ನೀರು. ಆ ರೀತಿಯ ಅಲ್ಲಿನ ನಾಗರೀಕರು ರಾಜಕೀಯ ಮೈಗೂಡಿಸಿಕೊಂಡಿದ್ದಾರೆ. ಅತಿ ಹೆಚ್ಚು ಸಾಲ ತೆಗೆದುಕೊಂಡಿರುವ ಜಿಲ್ಲೆ ಅಂದರೆ ಮಂಡ್ಯ. ಅತಿಹೆಚ್ಚಿನ ಆತ್ಮಹತ್ಯೆಯಾಗುವ ಜಿಲ್ಲೆ ಅಂದರೆ ಮಂಡ್ಯ.

ಆದರೆ, ನಂಬಿ ನಂಬಿ ಅವಕಾಶ ಕೊಟ್ಟ ವ್ಯಕ್ತಿಗಳು ಏನು ಮಾಡಿದ್ದಾರೆಂದು ಎಲ್ಲರಿಗೂ ಗೊತ್ತಿದೆ. ಅಲ್ಲಿ ಮಂಡ್ಯ ಮೈಶುಗರ್ ಕಾರ್ಖಾನೆ ನಡೆಸೋಕೆ ಪ್ರಯತ್ನ ಮಾಡಿಲ್ಲ. ಅಲ್ಲಿ ಬರೀ ಚೇಷ್ಟೆ, ರಾಜಕೀಯ ಅಷ್ಟೇ, ಅಲ್ಲೀ ಬರೀ ಅವರ ಸ್ವಾರ್ಥಕ್ಕೆ ಅಷ್ಟೇ ರಾಜಕಾರಣ, ಇನ್ನೊಬ್ಬರನ್ನು ರಕ್ತಹೀರುವಂತನನನ್ನು ನಾಯಕ ಅಂತಾ ಕರೆಯುತ್ತೀರಾ? ಅಥವಾ ಅವನನ್ನು ಏನು ಅಂತಾ ಕರೀಬೇಕು ಎಂದು ಎದಿರೇಟು ಕೊಟ್ಟರು.

ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಅದಿತಿ ಪ್ರಭುದೇವ: ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು ಭಾಗಿ

ಪಕ್ಷ ಸೇರ್ಪಡೆಯಾದ ಸಚ್ಚಿದಾನಂದ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯ ನಾಯಕತ್ವವನ್ನು ಒಪ್ಪಿ ನಾನು ಬಿಜೆಪಿ ಸೇರಿದ್ದೇನೆ. ಮುಂದೆ ವಿಧಾನಸಭೆಗೆ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಳುಹಿಸಿ ಕೊಡುತ್ತೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.