ನವ ದೆಹಲಿ: ರಾಜಧಾನಿ ಬೆಂಗಳೂರಿನಲ್ಲಿ ಮಾನವ ಚಾಲಿತ(ಮ್ಯಾನುವಲ್) 26 ರೈಲ್ವೆ ಗೇಟ್ಗಳಿದ್ದು, ಇವು ವಾಹನಗಳ ಸಂಚಾರ ದಟ್ಟಣೆಗೆ ಕಾರಣವಾಗಿದೆ. ಆದ್ದರಿಂದ ಆದಷ್ಟು ಬೇಗ ಈ ಗೇಟ್ಗಳನ್ನು ತೆಗೆದುಹಾಕಬೇಕೆಂದು ಲೋಕಸಭೆಯಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದ ಬಿಜೆಪಿ ಸಂಸದ ಪಿ ಸಿ ಮೋಹನ್ ರೈಲ್ವೆ ಇಲಾಖೆಗೆ ಮನವಿ ಮಾಡಿದರು.
ಮ್ಯಾನುವಲ್ ರೈಲ್ವೆ ಗೇಟ್ಗಳ ಸಮಸ್ಯೆ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, ಬೆಂಗಳೂರು ನಗರದೊಳಗೆ 26 ಮ್ಯಾನುವಲ್ ರೈಲ್ವೆ ಗೇಟ್ಗಳಿವೆ. ಬಾಣಸವಾಡಿ-ಹೆಬ್ಬಾಳ ನಡುವೆ 6, ಕಾರ್ಮಲ್ರಾವ್ ಸ್ಟೇಷನ್-ಬೈಯಪ್ಪನಹಳ್ಳಿ ಮಧ್ಯೆ 3 ಮತ್ತು ಯಲಹಂಕ, ಯಶವಂತಪುರ, ಚನ್ನಸಂದ್ರ ಹಾಗೂ ಕೆಂಗೇರಿ ಸೇರಿ ಹಲವೆಡೆ ಈ ಗೇಟ್ಗಳು ಇವೆ ಎಂದರು.
-
There are 26 manually operated LC gates in #Bengaluru, reducing vehicular traffic to a snail's pace besides triggering traffic jams.
— P C Mohan (@PCMohanMP) December 15, 2022 " class="align-text-top noRightClick twitterSection" data="
Serpentine queues of vehicles on either side of the railway tracks are a common sight.
Urged @RailMinIndia to eliminate LC gates at the earliest. pic.twitter.com/hgVlCnDyno
">There are 26 manually operated LC gates in #Bengaluru, reducing vehicular traffic to a snail's pace besides triggering traffic jams.
— P C Mohan (@PCMohanMP) December 15, 2022
Serpentine queues of vehicles on either side of the railway tracks are a common sight.
Urged @RailMinIndia to eliminate LC gates at the earliest. pic.twitter.com/hgVlCnDynoThere are 26 manually operated LC gates in #Bengaluru, reducing vehicular traffic to a snail's pace besides triggering traffic jams.
— P C Mohan (@PCMohanMP) December 15, 2022
Serpentine queues of vehicles on either side of the railway tracks are a common sight.
Urged @RailMinIndia to eliminate LC gates at the earliest. pic.twitter.com/hgVlCnDyno
ರೈಲ್ವೆ ಗೇಟ್ಗಳ ಕಾರಣ ರೈಲು ಹಳಿಗಳ ಇಕ್ಕೆಲಗಳಲ್ಲಿ ವಾಹನಗಳು ಸರತಿ ಸಾಲು ಸಾಮಾನ್ಯವಾಗಿದೆ. ಹೀಗಾಗಿ, ಸವಾರರು ಸಾಕಷ್ಟು ಸಮಸ್ಯೆಗಳಲ್ಲಿ ಸಿಲುಕುತ್ತಿದ್ದಾರೆ. ಆದ್ದರಿಂದ ಮ್ಯಾನುವಲ್ ರೈಲ್ವೆ ಗೇಟ್ಗಳನ್ನು ತೆಗೆದುಹಾಕಿ ಸ್ವಯಂಚಾಲಿತ ಗೇಟ್ಗಳ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.
'ಶಾಲಾ-ಕಾಲೇಜುಗಳಲ್ಲಿ ವೈಯಕ್ತಿಕ ಹಣಕಾಸು ನಿರ್ವಹಣೆಯ ಕೌಶಲ್ಯ ಕಲಿಸಿ': ಶಾಲಾ ಮತ್ತು ಕಾಲೇಜುಗಳಲ್ಲೇ ವಿದ್ಯಾರ್ಥಿಗಳಿಗೆ ವೈಯಕ್ತಿಕ ಹಣಕಾಸು ನಿರ್ವಹಣೆಯು ಕೌಶಲ್ಯಗಳನ್ನು ಕಲಿಸುವ ನಿಟ್ಟಿನಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯವು ಕ್ರಮ ಕೈಗೊಳ್ಳಬೇಕೆಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದರು. ಲೋಕಸಭಾ ಕಲಾಪದಲ್ಲಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು.
-
Personal financial management is crucial life skill that young Indians must be taught as they enter job market.
— Tejasvi Surya (@Tejasvi_Surya) December 15, 2022 " class="align-text-top noRightClick twitterSection" data="
It will help them navigate financial life effectively & prevent falling prey to dubious schemes, debt traps.
Urged @EduMinOfIndia to introduce in college curriculum. pic.twitter.com/Qt3hP53K3b
">Personal financial management is crucial life skill that young Indians must be taught as they enter job market.
— Tejasvi Surya (@Tejasvi_Surya) December 15, 2022
It will help them navigate financial life effectively & prevent falling prey to dubious schemes, debt traps.
Urged @EduMinOfIndia to introduce in college curriculum. pic.twitter.com/Qt3hP53K3bPersonal financial management is crucial life skill that young Indians must be taught as they enter job market.
— Tejasvi Surya (@Tejasvi_Surya) December 15, 2022
It will help them navigate financial life effectively & prevent falling prey to dubious schemes, debt traps.
Urged @EduMinOfIndia to introduce in college curriculum. pic.twitter.com/Qt3hP53K3b
ದೊಡ್ಡ ಸಂಖ್ಯೆಯ ಯುವಜನತೆ ಮೊದಲ ಬಾರಿಗೆ ಉದ್ಯೋಗ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿರುತ್ತಾರೆ. ಆದರೆ, ಹಣಕಾಸು ನಿರ್ವಹಣೆಯ ಕೌಶಲ್ಯಗಳು ಅವರಿಗೆ ತಿಳಿದಿಲ್ಲ. ಯಾಕೆಂದರೆ, ಆರ್ಥಿಕ ನಿರ್ವಹಣೆಯ ಶಿಕ್ಷಣವನ್ನು ಶಾಲಾ ಮತ್ತು ಕಾಲೇಜುಗಳಲ್ಲಿ ಭಾಗವಾಗಿ ಕಲಿಸುವ ವ್ಯವಸ್ಥೆ ಇಲ್ಲ. ಹೀಗಾಗಿಯೇ ಯುವಕರಿಗೆ ಹಣದ ಮೌಲ್ಯ, ಆದಾಯದ ದರ, ವಿಮೆ, ಮ್ಯೂಚುವಲ್ ಫಂಡ್‌ಗಳು ಹಾಗೂ ನಿವೃತ್ತಿ ಯೋಜನೆ ಇತ್ಯಾದಿಗಳ ಬಗ್ಗೆ ಅರಿವಿಲ್ಲ. ಇದು ಅವರನ್ನು ಅನಿಶ್ಚಿತ ಆರ್ಥಿಕ ಪರಿಸ್ಥಿತಿಯಲ್ಲಿ ಇರಿಸುತ್ತದೆ ಮತ್ತು ಆರ್ಥಿಕ ವಂಚನೆಗಳಿಗೆ ಒಳಗಾಗುವಂತೆ ಮಾಡುತ್ತಿದೆ ಎಂದು ಹೇಳಿದರು.
ವೈಯಕ್ತಿಕ ಹಣಕಾಸು ನಿರ್ವಹಣೆಯು ನಿರ್ಣಾಯಕ ಜೀವನದ ಕೌಶಲ್ಯವಾಗಿದೆ. ಇದನ್ನು ಶಾಲಾ ಮತ್ತು ಕಾಲೇಜು ಹಂತದಲ್ಲೇ ವಿದ್ಯಾರ್ಥಿಗಳಿಗೆ ಕಲಿಸಿಕೊಡಬೇಕು. ಇದು ಶಾಲೆಯಲ್ಲಿ ಕಲಿಸಬೇಕಾದ ಜೀವನ ಕೌಶಲ್ಯ. ಇದರಿಂದ ಆರ್ಥಿಕ ಜೀವನವನ್ನು ಪರಿಣಾಮಕಾರಿಯಾಗಿ ಮುನ್ನಡೆಸಲು ಸಹಾಯವಾಗುತ್ತದೆ. ಜೊತೆಗೆ ಸಂಶಯಾಸ್ಪದ ಯೋಜನೆಗಳು, ಸಾಲದ ಆಮಿಷದ ಬಲೆಗಳಿಗೆ ಬಲಿಯಾಗುವುದನ್ನು ತಡೆಯುತ್ತದೆ ಎಂದು ತೇಜಸ್ವಿ ಸೂರ್ಯ ತಿಳಿಸಿದರು.
ಇದನ್ನು ಓದಿ: ಆಮದು ಅಡಿಕೆಗೆ ಹೆಚ್ಚು ಸುಂಕ ವಿಧಿಸಿ, ಎಲೆಚುಕ್ಕೆ ರೋಗಕ್ಕೆ ಔಷಧಿ ಪರಿಚಯಿಸಿ: ಬಿ ವೈ ರಾಘವೇಂದ್ರ