ಬೆಂಗಳೂರು: ಕಾಂಗ್ರೆಸ್ನ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಸಂಜೆ ಎಲ್ಲಿಗೆ ಹೋಗುತ್ತಾರೋ ಆ ಹೆಸರಿಡಿ ಎಂದು ಹೇಳಿದ್ದಾರೆ. ಬೇಕಾದರೆ ಕಾಂಗ್ರೆಸ್ ಕಚೇರಿಗೆ ಬಾರ್ ಅಂತ ಹೆಸರು ಇಟ್ಟುಕೊಳ್ಳಲಿ ಎಂದು ಸಂಸದ ಪಿ.ಸಿ ಮೋಹನ್ ತಿರುಗೇಟು ನೀಡಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಇತ್ತೀಚೆಗೆ ಕಲಬುರಗಿಯಲ್ಲಿ ಮಾತನಾಡುತ್ತ, ಬಾರ್ ಆ್ಯಂಡ್ ರೆಸ್ಟೋರೆಂಟ್ಗಳಿಗೆ ವಾಜಪೇಯಿ ಹೆಸರಿಡಿ, ವಾಜಪೇಯಿ ಮದ್ಯ ಸೇವಿಸುತ್ತಿದ್ದರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಪಿ ಸಿ ಮೋಹನ್ ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರ ಫೆಲ್ಯೂರ್ ಆಗಿದ್ರೆ 21 ದಿನಗಳ ಕಾಲ ನಡೆದ ಸಂಸತ್ ಕಲಾಪದಲ್ಲಿ ಮಾತನಾಡಬೇಕಿತ್ತು. ಅವರು ಸಂಸತ್ನಲ್ಲಿ ಮಾತನಾಡುವ ಬದಲಾಗಿ ಬೀದಿಯಲ್ಲಿ ನಿಂತು ಮಾತನಾಡುತ್ತಿದ್ದಾರೆ. ಅದಕ್ಕೆ ಕಾಂಗ್ರೆಸ್ಗೆ ಇಂತಹ ಸ್ಥಿತಿ ಬಂದಿದೆ. ದೇಶಾದ್ಯಂತ ಸೋಲು ಕಂಡಿರುವ ಕಾಂಗ್ರೆಸ್ ಮುಳುಗುವ ಹಡಗು. ಜನರಲ್ಲಿ ಅವರ ಬಗ್ಗೆ ವಿಶ್ವಾಸ ಇಲ್ಲದಾಗಿದೆ ಎಂದು ವಾಗ್ದಾಳಿ ನಡೆಸಿದರು.
ಇಂದಿರಾ ಕ್ಯಾಂಟೀನ್ ಮರುನಾಮಕರಣ..
ದೇಶದಲ್ಲಿ ಒಂದೇ ಕುಟುಂಬದ ಹೆಸರು ಇರಬೇಕಾ.? 75 ವರ್ಷಗಳಿಂದ ಒಂದೇ ಕುಟುಂಬದ ಹೆಸರು ಇರಬೇಕಾ..? ಜನರ ಮನಸ್ಸಿನಲ್ಲಿ ಬದಲು ಮಾಡಬೇಕು ಅಂತಿದೆ, ಒಂದೇ ಕುಟುಂಬದ ಹೆಸರು ಯಾಕೆ ಇಡಬೇಕು ಅಂತ ಜನ ಕೇಳ್ತಿದ್ದಾರೆ. ಮೋದಿ ಅವರ ಹೆಸರನ್ನು ಖಾಸಗಿ ಸ್ಟೇಡಿಯಂಗೆ ಇಟ್ಟಿದ್ದೇವೆ. ಇದು ಬಿಜೆಪಿ ಪಾರ್ಟಿ ಅನಿಸಿಕೆ ಅಲ್ಲ ಜನ ಕೇಳ್ತಿದ್ದಾರೆ ಎಂದರು.
ಓದಿ: ಅಫ್ಘಾನಿಸ್ತಾನದಲ್ಲಿರುವ ಭಾರತೀಯರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ: ಪ್ರಹ್ಲಾದ್ ಜೋಶಿ