ETV Bharat / state

ಕೋವಿಡ್ ಬಗ್ಗೆ ಭಯ ಬೇಡ, ಎಚ್ಚರಿಕೆ ಇರಲಿ: ಡಿ.ಕೆ.ಸುರೇಶ್ - ಕೊರೊನಾ ರೋಗದ ಬಗ್ಗೆ ಜನರಿಗೆ ಡಿ.ಕೆ. ಸುರೇಶ್ ಕಿವಿಮಾತು

ಕೊರೊನಾ 2ನೇ ಅಲೆ ನಮ್ಮಲ್ಲಿ ಆತಂಕ ತಂದಿದೆ. ಇದು ಕೇವಲ 14 ದಿನದಲ್ಲಿ ಗುಣಮುಖವಾಗುವ ಕಾಯಿಲೆ. ಇದರ ಆರಂಭಿಕ ಗುಣ ಲಕ್ಷಣ ಕಂಡ ತಕ್ಷಣ ಚಿಕಿತ್ಸೆ ಪಡೆದು, ವೈದ್ಯರ ಸಲಹೆ ಪಾಲಿಸಿದರೆ ಬದುಕುಳಿಯಲು ಸಾಧ್ಯ ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದ್ದಾರೆ.

ಡಿ.ಕೆ. ಸುರೇಶ್ ಕಿವಿಮಾತು
ಡಿ.ಕೆ. ಸುರೇಶ್ ಕಿವಿಮಾತು
author img

By

Published : May 9, 2021, 12:27 PM IST

ಬೆಂಗಳೂರು: ಕೋವಿಡ್ ಬಗ್ಗೆ ಭಯ ಬೇಡ, ಎಚ್ಚರಿಕೆ ಇರಲಿ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.

ಸಂಸದ ಡಿ.ಕೆ. ಸುರೇಶ್ ಕಿವಿಮಾತು

ಕೋವಿಡ್ ಎರಡನೆಯ ಅಲೆಯ ಬಗ್ಗೆ ತಮ್ಮ ಅನಿಸಿಕೆ ಮತ್ತು ಅನುಭವವನ್ನು ವಿಡಿಯೋ ಸಂದೇಶದ ಮೂಲಕ ಹಂಚಿಕೊಂಡಿರುವ ಅವರು, ಇದು ಕೇವಲ 14 ದಿನದಲ್ಲಿ ಗುಣಮುಖವಾಗುವ ಕಾಯಿಲೆ. ಈ ರೋಗದ ಆರಂಭಿಕ ಗುಣಲಕ್ಷಣ ಕಂಡ ತಕ್ಷಣ ಚಿಕಿತ್ಸೆ ಪಡೆದು, ವೈದ್ಯರ ಸಲಹೆ ಪಾಲಿಸಿದರೆ ಬದುಕುಳಿಯಲು ಸಾಧ್ಯ. ಬಂದಿದ್ದು ಕೇವಲ ಮಾಮೂಲಿ ಜ್ವರ ಎಂದು ಉದಾಸೀನ ಮಾಡಿದರೆ, ಸಾವಿನ ಹತ್ತಿರಕ್ಕೆ ಕೊಂಡೊಯ್ಯುತ್ತದೆ ಎಂದು ಎಚ್ಚರಿಸಿದ್ದಾರೆ.

ಇದೇನು ಕ್ಷಯ, ಕ್ಯಾನ್ಸರ್‌ಗಿಂತ ಕೆಟ್ಟ ಕಾಯಿಲೆ ಅಲ್ಲ. ಆದರೆ ಕೋವಿಡ್ ಪಾಸಿಟಿವ್ ಎಂದು ಹೇಳಿಕೊಳ್ಳಲು ಜನ ಅಂಜುತ್ತಿದ್ದಾರೆ. ಎಚ್ಐವಿ ಪಾಸಿಟಿವ್ ಬಂದರೆ ಅದು ನಾಚಿಕೆಯಾಗಬಲ್ಲ ರೋಗವಾಗಿದ್ದು ಸಮಾಜ ಬೇರೆ ರೀತಿ ನೋಡುತ್ತದೆ. ಕೋವಿಡ್ ನೀವು ತಂದುಕೊಂಡ ಕಾಯಿಲೆ ಅಲ್ಲ. ನಿಮ್ಮನ್ನು ಹುಡುಕಿ ಬಂದು ಅಂಟಿಕೊಂಡಿರುವ ಕಾಯಿಲೆ. ಧೈರ್ಯವಾಗಿ ಹೇಳಿಕೊಳ್ಳಿ. ನೀವು ಧೈರ್ಯವಾಗಿದ್ದರೆ ರೋಗ ನಿಯಂತ್ರಣ ಶಕ್ತಿ ಹೆಚ್ಚಾಗಲಿದೆ. ಪ್ರತಿಯೊಬ್ಬರಿಗೂ ಕೋವಿಡ್ ಎದುರಿಸುವ ಶಕ್ತಿ ಇದೆ. ಎಲ್ಲರೂ ರೋಗ ಗೆಲ್ಲುತ್ತೀರಿ. ಕುಟುಂಬ ಸದಸ್ಯರು, ಬಂದು-ಬಳಗ, ಸ್ನೇಹಿತರು ಯಾವುದೇ ಕೋವಿಡ್ ರೋಗಿಯನ್ನು ದೂರವಿಡುವ ಕಾರ್ಯ ಮಾಡಬೇಡಿ. ಸಾಮಾಜಿಕ ಅಂತರ ಕಾಪಾಡಿಕೊಂಡು, ಅವರಿಗೆ ಧೈರ್ಯ ಹೇಳುವ ಕಾರ್ಯ ಮಾಡಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ನಾಳೆಯಿಂದ 18-44 ವರ್ಷ ವಯೋಮಾನದವರಿಗೆ ಕೋವಿಡ್ ಲಸಿಕೆ: ಡಾ.ಕೆ.ಸುಧಾಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.