ಬೆಂಗಳೂರು: ದೇಶಾದ್ಯಂತ ಜನವರಿ 16 ರಿಂದ ಕೋವಿಡ್ ಲಸಿಕಾ ಅಭಿಯಾನ ಪ್ರಾರಂಭವಾಗಿತ್ತು. ಮೊದಲ ಹಂತವಾಗಿ ಕೊರೊನಾ ವಾರಿಯರ್ಸ್ ಅಂದರೆ ಆರೋಗ್ಯ ಕಾರ್ಯಕರ್ತರಿಗೆ ನಂತರ ಫ್ರಂಟ್ ಲೈನ್ ವರ್ಕರ್ಸ್ಗೆ ಲಸಿಕೆ ನೀಡಲಾಯ್ತು.
ಇದಾದ ಬಳಿಕ ಮಾರ್ಚ್ 1 ರಿಂದ ಹಿರಿಯ ನಾಗರಿಕರಿಗೆ ಲಸಿಕೆ ನೀಡಲಾಗುತ್ತಿದೆ. ಕಳೆದ ವಾರವಷ್ಟೇ 18 ವರ್ಷ ಮೇಲ್ಪಟ್ಟವರಿಗೂ ಉಚಿತವಾಗಿ ಲಸಿಕಾ ಅಭಿಯಾನ ಶುರುವಾಗಿದೆ.
ಈ ದೊಡ್ಡ ಲಸಿಕಾ ಅಭಿಯಾನದಡಿ ಕರ್ನಾಟಕದಾದ್ಯಂತ ಈವರೆಗೆ 1,00,72,795 (ಒಂದು ಕೋಟಿ ಎಪ್ಪತ್ತು ಸಾವಿರ) ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಇದರಲ್ಲಿ ಎರಡನೇ ಡೋಸ್ ಅನ್ನು 17.23 ಲಕ್ಷ ಜನರಿಗೆ ನೀಡಿರುವ ಮಾಹಿತಿ ಸಿಕ್ಕಿದೆ.
ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ ಮತ್ತು 44 ವರ್ಷದೊಳಗಿನ ಲಸಿಕಾ ಕಾರ್ಯಕ್ರಮದಲ್ಲಿ ಈವರೆಗೆ 5,136 ಮಂದಿಗ ಮೊದಲ ಡೋಸ್ ನೀಡಲಾಗಿದೆ. ಮೊದಲ ಡೋಸ್ನಲ್ಲಿ ಆರೋಗ್ಯ ಕಾರ್ಯಕರ್ತರು 6,84,128 ಮಂದಿ, ಎರಡನೇ ಡೋಸ್ 4,38,181 ಮಂದಿ ಪಡೆದಿದ್ದಾರೆ. ಮುಂಚೂಣಿ ಕಾರ್ಯಕರ್ತರು ಮೊದಲ ಡೋಸ್ 4,36,541, ಎರಡನೇ ಡೋಸ್ ಅನ್ನ 1,66,254 ಮಂದಿ ಲಸಿಕೆ ಪಡೆದಿದ್ದಾರೆ. ಹಿರಿಯ ನಾಗರಿಕರು ಮೊದಲ ಡೋಸ್ನಲ್ಲಿ 35,64,167, ಎರಡನೇ ಡೋಸ್ 8,23,432 ಮಂದಿ ಪೂರ್ಣಗೊಳಿಸಿದ್ದಾರೆ.
ಅನಾರೋಗ್ಯ ಸಮಸ್ಯೆಯಿಂದ ಬಳುತ್ತಿರುವವರು ಮೊದಲ ಡೋಸ್ 36,38,269 ಮಂದಿ, ಎರಡನೇ ಡೋಸ್ 3,16,687 ಲಸಿಕೆ ಪಡೆದುಕೊಂಡಿದ್ದಾರೆ.