ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಾಹನ ಸವಾರರು ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಮೇಲೆ ಟ್ರಾಫಿಕ್ ಪೊಲೀಸರು ತೀವ್ರ ನಿಗಾ ಇಟ್ಟಿದ್ದಾರೆ. ಕೊರೊನಾ ಬಂದ ನಂತರ ತಂತ್ರಜ್ಞಾನ ಹಾಗೂ ರಸ್ತೆ ಬದಿಯಲ್ಲಿ ಪೊಲೀಸರು ನಿಂತು ಸದ್ಯ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಇದೇ ತಿಂಗಳ 11ನೇ ತಾರೀಖಿನಿಂದ 17 ರ ವರೆಗೆ ಸುಮಾರು 1,06,907 ಪ್ರಕರಣ ದಾಖಲಿಸಿ 4,44,70,600 ರೂ. ದಂಡ ವಸೂಲಿ ಮಾಡಿದ್ದಾರೆಂದು ಟ್ರಾಫಿಕ್ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದರು.
ವಸೂಲಿ ಮಾಡಿದ ಪ್ರಕರಣ ನೋಡುವುದಾದರೆ ವೇಗವಾಗಿ ವಾಹನ ಚಾಲನೆ 52 ಪ್ರಕರಣ-15,600 ರೂ. ದಂಡ, ಕುಡಿದು ವಾಹನ ಚಾಲನೆ 5 ಪ್ರಕರಣ, ಕರ್ಕಶ ಪ್ರಕರಣ 29-1,3500 ರೂ. ದಂಡ, ನೋ ಪಾರ್ಕಿಂಗ್ 1,402 ಪ್ರಕರಣ-13,71,000 ರೂ. ದಂಡ, ಮೊಬೈಲ್ ಫೋನ್ ಬಳಕೆ 2,843 ಪ್ರಕರಣ-ದಂಡ 19,22,900 ದಂಡ, ತ್ರಿಪಲ್ ರೈಡ್ 643 ಪ್ರಕರಣ-1,26,800 ರೂ. ದಂಡ, ಸೀಟ್ ಬೆಲ್ಟ್ ಹಾಕದೇ ಇರುವುದು 6,127 ಪ್ರಕರಣ - 28,40,300 ರೂ. ದಂಡ ಹೀಗೆ ವಿವಿಧ ಪ್ರಕರಣಗಳಲ್ಲಿ ಪೆನಾಲ್ಟಿ ಹಾಕಲಾಗಿದೆ ವಿವರಣೆ ನೀಡಿದ್ದಾರೆ.