ETV Bharat / state

ಸಿಲಿಕಾನ್ ಸಿಟಿಯಲ್ಲಿ 15 ಕೋಟಿ ದಂಡ ವಸೂಲಿ ಮಾಡಿದ ಮಾರ್ಷಲ್​​ಗಳು - ಬಿಬಿಎಂಪಿ ಮಾಹಿತಿ

ಸಿಲಿಕಾನ್​​​​ ಸಿಟಿಯ 198 ವಾರ್ಡ್​ಗಳಲ್ಲಿ 260ಕ್ಕೂ ಹೆಚ್ಚು ಮಾರ್ಷಲ್​​ಗಳು ಕಾರ್ಯಾಚರಣೆ ನಡೆಸುತ್ತಿದ್ದು, ಕೋವಿಡ್ ರೂಲ್ಸ್ ಬ್ರೇಕ್​​ ಮಾಡುವವರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಪ್ರತಿ ವಾರ್ಡ್​ನಲ್ಲೂ ಮಾರ್ಷಲ್​ಗಳು ಎಡೆಬಿಡದೆ ಗಸ್ತು ತಿರುಗುತ್ತಿದ್ದಾರೆ..

More than 15 crore covid fines collected by marshall at Bangalore
ಸಿಲಿಕಾನ್ ಸಿಟಿಯಲ್ಲಿ ಮಾರ್ಷಲ್​​ಗಳಿಂದ 15 ಕೋಟಿ ಕೋವಿಡ್​​ ದಂಡ ವಸೂಲಿ
author img

By

Published : Jan 28, 2022, 10:02 PM IST

Updated : Jan 28, 2022, 11:14 PM IST

ಬೆಂಗಳೂರು: ಕೋವಿಡ್​ ನಿಯಮ ಉಲ್ಲಂಘಿಸಿದವರಿಂದ ಈವರೆಗೆ ಸುಮಾರು 150 ಕೋಟಿ ರೂ. ಕೋವಿಡ್​​​​​ ದಂಡ ವಸೂಲಿಯಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದ್ದು, ಮಾಸ್ಕ್​ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡಬೇಕೆಂದು ಸರ್ಕಾರವು ಮಾರ್ಷ​ಲ್​​ಗಳನ್ನು ನೇಮಿಸಿ ಕೋವಿಡ್ ರೂಲ್ಸ್ ಬ್ರೇಕ್​​ ಮಾಡುವ ಜನರ ಮೇಲೆ ಕಣ್ಣಿಟ್ಟಿತ್ತು. ಅದರಂತೆ ಸಿಲಿಕಾನ್ ಸಿಟಿಯ 198 ವಾರ್ಡ್​ಗಳಿಂದ ಈವರೆಗೆ ಸುಮಾರು 15 ಕೋಟಿ ರೂ. ಕೋವಿಡ್​​ ಸಂಬಂಧಿಸಿದ ದಂಡ ವಸೂಲಿ ಮಾಡಲಾಗಿದೆ.

ಸಿಲಿಕಾನ್​​​​ ಸಿಟಿಯ 198 ವಾರ್ಡ್​ಗಳಲ್ಲಿ 260ಕ್ಕೂ ಹೆಚ್ಚು ಮಾರ್ಷಲ್​​ಗಳು ಕಾರ್ಯಾಚರಣೆ ನಡೆಸುತ್ತಿದ್ದು, ಕೋವಿಡ್ ರೂಲ್ಸ್ ಬ್ರೇಕ್​​ ಮಾಡುವವರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಪ್ರತಿ ವಾರ್ಡ್​ನಲ್ಲೂ ಮಾರ್ಷಲ್​ಗಳು ಎಡೆಬಿಡದೆ ಗಸ್ತು ತಿರುಗುತ್ತಿದ್ದಾರೆ. ನಗರದಲ್ಲಿ ಕಳೆದ 21 ತಿಂಗಳಲ್ಲಿ 14,66,55,441 ರೂ.ದಂಡ ಸಂಗ್ರಹ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರತಿ ಜಿಲ್ಲೆಯಲ್ಲ, ಗ್ರಾಮಗಳಲ್ಲಿ ಗೋಶಾಲೆ ಆರಂಭಿಸಿ : ಹೈಕೋರ್ಟ್

ಈವರೆಗೆ ಮಾಸ್ಕ್ ಸಂಬಂಧ 6,06,579 ಕೇಸ್​ ಬಿದ್ದಿದ್ದು, ಸಾಮಾಜಿಕ ಅಂತರ ಪಾಲಿಸಿದವರ ಮೇಲೆ 33,880 ಕೇಸ್ ದಾಖಲಾಗಿದ್ದು, ಸಾಮಾಜಿಕ ಅಂತರ ಮೀರಿದವರಿಂದ ಇರುವರೆಗೆ 77,67,160 ರೂ. ದಂಡ ಸಂಗ್ರಹವಾಗಿದೆ ಎಂದು ತಿಳಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 28, 2022, 11:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.