ETV Bharat / state

ಪವರ್ ಪಾಲಿಟಿಕ್ಸ್ ಮಾಡದೆ ಪೀಪಲ್ ಪಾಲಿಟಿಕ್ಸ್​​ನಿಂದ ಮೋದಿ ಚಿರಸ್ಮರಣೀಯರಾಗಲಿದ್ದಾರೆ: ಸಿಎಂ - ಮೋದಿ at 20 ಕೃತಿಯನ್ನು ಲೋಕಾರ್ಪಣೆ ಮಾಡಿದ ಸಿಎಂ

ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ನಂತರ ಮತ್ತು ಅಧಿಕಾರಕ್ಕೆ ಬರುವ ಮೊದಲು ಮೋದಿ ವಿಚಾರಧಾರೆ, ಆದರ್ಶದಲ್ಲಿ ಯಾವುದೂ ಬದಲಾಗಿಲ್ಲ. ಅವರು ಯಾವತ್ತೂ ಪವರ್​ ಪಾಲಿಟಿಕ್ಸ್​ ಮಾಡಿಲ್ಲ, ಬದಲಿಗೆ ಪೀಪಲ್​ ಪಾಲಿಟಿಕ್ಸ್​​ ಮಾಡಿದ್ದಾರೆ. ಹಾಗಾಗಿ ದೇಶದ ಇತಿಹಾಸ, ಚರಿತ್ರೆ ಮತ್ತು ದೇಶದ ಭವಿಷ್ಯದಲ್ಲಿ ಸದಾಕಲಾ ಚಿರಸ್ಮರಣೀಯರಾಗಿ ಇರಲಿದ್ದಾರೆ ಎಂದು ಸಿಎಂ ಹೇಳಿದರು.

Modi at 20 book inaugurated by cm
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
author img

By

Published : Jun 27, 2022, 7:09 PM IST

Updated : Jun 27, 2022, 8:46 PM IST

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅಧಿಕಾರದ ರಾಜಕಾರಣ ಮಾಡದೆ ಜನರ ರಾಜಕಾರಣ ಮಾಡಿದ್ದರಿಂದ ದೇಶದ ಇತಿಹಾಸ, ಚರಿತ್ರೆ ಮತ್ತು ದೇಶದ ಭವಿಷ್ಯದಲ್ಲಿ ಸದಾಕಾಲ ಚಿರಸ್ಮರಣೀಯರಾಗಿ ಇರಲಿದ್ದಾರೆ. ಹತ್ತಿರ ಇದ್ದವರಿಗೆ ಮೋದಿ ಬಡವರ ಬಗ್ಗೆ ಮಿಡಿಯುವ ಹೃದಯವಂತಿಕೆಯ ವ್ಯಕ್ತಿಯಾಗಿ ಕಂಡರೆ, ದೂರ ಇದ್ದವರಿಗೆ ಆಶ್ರಯದಾತ, ಅಣ್ಣ, ತಂದೆ, ಭರವಸೆ ಮತ್ತು ಅಪ್ಪಟ ದೇಶಾಭಿಮಾನಿಯಾಗಿ ಕಾಣುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸೇವೆಯೇ ಜೀವನದ ಗುರಿ: ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ, ಮೋದಿ@20 ಕೃತಿಯನ್ನು ಲೋಕಾರ್ಪಣೆ ಮಾಡಿದರು. ನಂತರ ಮಾತನಾಡಿದ ಅವರು, ಮೋದಿ ಬಾಲ್ಯವನ್ನು ಕಷ್ಟದಲ್ಲಿ ಕಳೆದಿದ್ದಾರೆ. ಚಹಾ ಮಾರಾಟ ಮಾಡುತ್ತಾ ಅಪಮಾನ, ನೋವು ಅನುಭವಿಸಿರುವ ವ್ಯಕ್ತಿ ಮೋದಿ. ಅದೆಲ್ಲದರ ನಡುವೆ ತತ್ವ, ಆದರ್ಶ ಬೆಳೆಸಿಕೊಂಡು, ರಾಮಕೃಷ್ಣ ಪರಮಹಂಸ, ವಿವೇಕಾನಂದರ ತತ್ವವನ್ನು ಜೀವನದಲ್ಲಿ ಅಳವಡಿಸೊಕೊಂಡಿರುವ ಆರ್​​ಎಸ್ಎಸ್ ನಿಷ್ಠಾವಂತ ಪ್ರಚಾರಕ. ಎರಡು ವರ್ಷ ಹಿಮಾಲಯದಲ್ಲಿ ಕುಳಿತು ಎಲ್ಲವನ್ನು ತಿಳಿಯುವ ಪ್ರಯತ್ನ ಮಾಡಿದರು. ಅಧಿಕಾರ ಇರಲಿ ಇಲ್ಲದೇ ಇರಲಿ, ಸೇವೆಯೇ ಜೀವನದ ಗುರಿ ಎಂದು ಹೊರಟರು ಎಂದರು.

ಬಡತನ ದೂರ ಮಾಡಿದ ಮೋದಿ: ಸ್ಥಾನಮಾನಕ್ಕೆ ಎಲ್ಲರೂ ಹಂಬಲಿಸುತ್ತಾರೆ. ಯಾವುದು ಇರುವುದಿಲ್ಲವೋ ಅದರ ಬಯಕೆ ಎಲ್ಲರಲ್ಲಿಯೂ ಇರಲಿದೆ. ಆದರೆ ಮೋದಿ ಗುಜರಾತ್ ಸಿಎಂ ಆಗಿ ಯಾರೂ ಹಸಿವಿನಿಂದ ಬಳಲಬಾರದು ಎಂದು ಕೆಲಸ ಮಾಡಿದರು. ಬಡತನ ದೂರ ಮಾಡಿದ ಧೀಮಂತ ನಾಯಕರಾದರು. ತಮ್ಮ ರೀತಿ ಸಮಾಜದಲ್ಲಿ ಯಾರಿಗೂ ಅಪಮಾನ ಆಗಬಾರದು ಎಂದು ಸರ್ವರಿಗೂ ಸಮಪಾಲು, ಸಮಬಾಳು ಪಾಲಿಸಿ ಕಾರ್ಯಕ್ರಮ ರೂಪಿಸಿ ಸಮಾನತೆಯ ಅವಕಾಶಗಳನ್ನು ಮಾಡಿಕೊಟ್ಟಿದ್ದಾರೆ. ಅವರೊಬ್ಬ ಮಾನವೀಯ ಗುಣ ಹೊಂದಿದ ನಾಯಕರಾಗಿದ್ದಾರೆ ಎಂದು ಸಿಎಂ ಬಣ್ಣಿಸಿದರು.

ಮೋದಿ@20 ಕೃತಿ ಲೋಕಾರ್ಪಣೆ ಕಾರ್ಯಕ್ರಮ

ಪೀಪಲ್​​ ರಾಜಕಾರಣ ಮಾಡಿದ್ದ ಮೋದಿ: ತನಗಾಗಿ ಬದುಕುವುದು ಸಹಜ. ಆದರೆ ಇತರರಿಗಾಗಿ ಬದುಕುವುದು ದೊಡ್ಡ ಗುಣ. ಅಂತಹ ವ್ಯಕ್ತಿ ಮೋದಿ. ಅಧಿಕಾರಕ್ಕೆ ಬಂದ ನಂತರ ಮತ್ತು ಅಧಿಕಾರಕ್ಕೆ ಬರುವ ಮೊದಲು ಮೋದಿ ವಿಚಾರಧಾರೆ, ಆದರ್ಶದಲ್ಲಿ ಯಾವುದೂ ಬದಲಾಗಿಲ್ಲ. ಎರಡು ರೀತಿಯ ರಾಜಕಾರಣ ಇದೆ. ಮೊದಲನೆಯದು ಪವರ್ ಪಾಲಿಟಿಕ್ಸ್, ಅಧಿಕಾರ ಪಡೆಯಲು ಮತ್ತು ಉಳಿಸಿಕೊಳ್ಳಲು ಹೋರಾಟ ಮಾಡುವ ರಾಜಕಾರಣ ಎರಡನೇಯದ್ದು. ಪೀಪಲ್ ಪಾಲಿಟಿಕ್ಸ್, ಜನರಿಗಾಗಿ ಹೋರಾಟ ಮಾಡುವುದಾಗಿದೆ. ಮೋದಿ ಅಧಿಕಾರದ ರಾಜಕಾರಣ ಮಾಡದೆ ಜನರ ರಾಜಕಾರಣ ಮಾಡಿದ್ದರಿಂದ ದೇಶದ ಇತಿಹಾಸ, ಚರಿತ್ರೆ ಮತ್ತು ದೇಶದ ಭವಿಷ್ಯದಲ್ಲಿ ಸದಾಕಲಾ ಚಿರಸ್ಮರಣೀರಾಗಿ ಇರಲಿದ್ದಾರೆ ಎಂದು ಹೇಳಿದರು.

ಮೋದಿಯನ್ನು ಹಾಡಿ ಹೊಗಳಿದ ಸಿಎಂ: ಮೋದಿ ಬಂದ ನಂತರ ಜನರ ಜೀವನ ಗುಣಮಟ್ಟ ಸುಧಾರಿಸಿದೆ. ಕಾನೂನು ವ್ಯವಸ್ಥೆ, ಬಂದರು ಅಭಿವೃದ್ಧಿ, ಜನಸಾಮಾನ್ಯರಿಗೆ ಬೇಕಾದ ವ್ಯವಸ್ಥೆ ಬದಲಾವಣೆ ಆಗಿದೆ. ನಮ್ಮ ಸುತ್ತ ನೋಡಿದರೆ ಸಾಕು ಮೋದಿ ಏನು ಮಾಡಿದ್ದಾರೆ ಅನ್ನೋದು ಗೊತ್ತಾಗಲಿದೆ. ಗಾಂಧಿ ಕಂಡ ಸ್ವಚ್ಛ ಭಾರತದ ಬಗ್ಗೆ ಎಲ್ಲ ಪ್ರಧಾ‌ನಿಗಳು ಕಡೆಗಣನೆ ಮಾಡಿದ್ದರು. ಯಾರೂ ಮಹತ್ವ ನೀಡಿರಲಿಲ್ಲ. ಆದರೆ ಮೋದಿ ಸ್ವಚ್ಛತೆ ಕಲ್ಪನೆಯನ್ನು ಕೊಟ್ಟಿದ್ದಾರೆ. ಘರ್ ಘರ್ ಗಂಗೆ ಘೋಷಿಸಿ ಮನೆ ಮನೆಗೆ ನೀರು ಕೊಡುವ ಘೋಷಣೆ ಮಾಡಿದ್ದಾರೆ. ಯಾವ ಪಿಎಂ ಕೂಡ ಈ ಧೈರ್ಯ ತೋರಿರಲಿಲ್ಲ. ಎಲ್ಲರ ಮನೆಗೆ ನೀರು ಕೊಡುವುದು ಅಷ್ಟು ಸುಲಭದ ಮಾತಲ್ಲ. ಯಾವುದು ನಮಗೆ ಅಸಾಧ್ಯವಾಗಿತ್ತೋ ಅದನ್ನು ಸಾಧ್ಯವನ್ನಾಗಿ ಮಾಡುತ್ತಿರುವುದು ಮೋದಿ ಎಂದು ಮೋದಿಯನ್ನು ಹಾಡಿಹೊಗಳಿದರು.

ನಮಗೆ ಐದು ಸಾವಿರ ವರ್ಷಗಳ ದೊಡ್ಡ ಚರಿತ್ರೆ ಇದೆ. ಆದರೆ ಈಗ ಬೇಕಾಗಿರುವುದು ಚಾರಿತ್ರ್ಯ, ಜನರ ನಡವಳಿಕೆ, ಮೌಲ್ಯದ ಆಧಾರದಲ್ಲಿ ಚಾರಿತ್ರ್ಯ ಬರಲಿದೆ. ಬಹಳ ಜನ ಆಚಾರ್ಯರಿದ್ದಾರೆ. ಆದರೆ ಬೇಕಾಗಿರುವುದು ಆಚರಣೆ, ಇಂತಹ ಸಂದರ್ಭದಲ್ಲಿ ಮೋದಿ ಚಾರಿತ್ರ್ಯವಂತರಾಗಿ ಆದರ್ಶದ ಆಡಳಿತ ನೀಡಿ ದೇಶಕ್ಕೆ‌ ಚರಿತ್ರೆ ಜೊತೆ ಚಾರಿತ್ರ್ಯ ರೂಪಿಸಲು ಪ್ರಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ಬೊಮ್ಮಾಯಿ ಹೊಗಳಿದರು.

ಇದನ್ನೂ ಓದಿ: ಸಂಪುಟ ವಿಸ್ತರಣೆ ಕುರಿತ ಪ್ರಶ್ನೆಗೆ ಮೌನವಾದ ಸಿಎಂ ಬಸವರಾಜ ಬೊಮ್ಮಾಯಿ

ಮೋದಿ ಕನಸನ್ನು ಕಾಣದೆ ಅವುಗಳನ್ನು ಆಚರಣೆಗೆ ತಂದಿದ್ದಾರೆ. ದೇಶಕ್ಕೆ ಸಮರ್ಥ ನಾಯಕತ್ವ ಕೊಟ್ಟು, ಮೌಲ್ಯ ರಾಜಕಾರಣ ಸ್ಥಾಪಿಸಿದ್ದಾರೆ. ಹಾಗಾಗಿ ದೇಶಕ್ಕೆ ಮೋದಿ ನಾಯಕತ್ವ ಅಗತ್ಯವಿದೆ. ಅವರು ಅಂದುಕೊಂಡಿರುವ ಕೆಲಸ ಮುಗಿಯಬೇಕು. ಗುರಿ ಮುಟ್ಟಬೇಕು. ಮೋದಿ ವಿಚಾರಧಾರೆ, ಕಾರ್ಯಕ್ರಮ ಒಪ್ಪಿ ಬೆಂಬಲಿಸುವ ಅಗತ್ಯವಿದೆ ಎಂದು ಸಿಎಂ ಕರೆ ನೀಡಿದರು.

ಭಾರತದಲ್ಲಿ ಜಿ-20 ಸಮ್ಮೇಳನ: ಜಿ-20 ಸಮ್ಮೇಳನ ಈ ಬಾರಿ ಭಾರತದಲ್ಲಿ ಆಗಲಿದೆ. ಇದರಲ್ಲಿರುವ ವಿಶ್ವದ 20 ರಾಷ್ಟ್ರಗಳಿಂದಲೇ ಜಗತ್ತಿನ 80 ಜಿಡಿಪಿ ಆಗಲಿದೆ. ಅಂತಹ ಶೃಂಗದ ಆಯೋಜನೆ ಮಾಡುವ ಅವಕಾಶ ಮೋದಿ ನಾಯಕತ್ವದಲ್ಲಿ ದೇಶಕ್ಕೆ ಮೊದಲ ಬಾರಿ ಸಿಕ್ಕಿದೆ. ಬೆಂಗಳೂರಿನಲ್ಲಿ 9 ಸಭೆ ಆಗಲಿವೆ. ಈ ಅವಕಾಶ ಸಿಗುತ್ತಿರುವುದೇ ಭಾರತಕ್ಕೆ ವಿಶ್ವಮನ್ನಣೆ ಸಿಗುತ್ತಿರುವುದಕ್ಕೆ ನಿದರ್ಶನ ಎಂದರು.

ಪರರಿಗಾಗಿ ಬದುಕಿದ ಮೋದಿ: ಒಂದು ವೃಕ್ಷ, ಒಂದು ನದಿ ತನಗಾಗಿ ಏನನ್ನೂ ಮಾಡಿಕೊಳ್ಳುವುದಿಲ್ಲ. ಅದೇ ರೀತಿ ಮೋದಿ ತಮಗಾಗಿ ಏನನ್ನೂ ಮಾಡಿಕೊಳ್ಳದೆ ಪರರಿಗಾಗಿ ಬದುಕುತ್ತಿರುವ ಗುಣಗಳನ್ನು ನಾನು ಮೋದಿಯವರಲ್ಲಿ ಕಂಡಿದ್ದೇನೆ ಎಂದು ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ತಿಳಿಸಿದ್ದಾರೆ.

ಮೋದಿ @20 ಪುಸ್ತಕದಲ್ಲಿ ನಾನೊಂದು ಲೇಖನ ಬರೆದಿದ್ದೇನೆ. ಅದರ ಹೆಸರು then comes the winds of change ಅಂತ. ನಾನು ಮೋದಿಯವರನ್ನು ಯಾವ ರೀತಿಯಲ್ಲೂ ಬಲ್ಲವಳಲ್ಲ. ಅವರ ಜತೆ ನಾನು ಕೆಲಸವನ್ನು ಮಾಡಿಲ್ಲ ಅವರಿರೋದು ದಿಲ್ಲಿ, ನಾನಿರೋದು ಹಳ್ಳಿ. ಅವರ ಬಗ್ಗೆ ಬರೆದುಕೊಡಿ ಅಂದಾಗ ಏನು ಬರೆಯಬೇಕೆಂದು ಗೊತ್ತಾಗ್ಲಿಲ್ಲ. ನನ್ನ ಬಳಿ‌ ಅಂಕಿ ಅಂಶಗಳೂ ಇರಲಿಲ್ಲ. ನನಗೆ ಗೊತ್ತಿರುವ ಮಾಹಿತಿ ಬರೆದಿದ್ದೇನೆ. ಈ ಲೇಖನ ಬರೆಯುತ್ತ ಬರೆಯುತ್ತ ಮೋದಿಯವರನ್ನು ನೋಡುವ ದೃಷ್ಟಿಕೋನ ಬದಲಾಯಿತು ಎಂದು ಸುಧಾಮೂರ್ತಿ ಹೇಳಿದರು.

Last Updated : Jun 27, 2022, 8:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.