ಬೆಂಗಳೂರು: ಬಟ್ಟೆ ಕೊಳ್ಳುವ ನೆಪದಲ್ಲಿ ಬಂದು ಮೊಬೈಲ್ ಕದ್ದು ಪರಾರಿಯಾಗಿರುವ ಘಟನೆ ನಗರದ ಬಸವನಗುಡಿಯ ಗಾಂಧಿ ಬಜಾರ್ನಲ್ಲಿ ನಡೆದಿದೆ.
ಬಟ್ಟೆ ಖರೀದಿಸಲೆಂದು ಅಂಗಡಿಗೆ ಬಂದ ವ್ಯಕ್ತಿಯೊಬ್ಬ ಅಂಗಡಿಯಲ್ಲಿ ಮೊದಲು ವ್ಯಾಪಾರ ಮಾಡುವ ರೀತಿ ನಾಟಕವಾಡಿದ್ದಾನೆ. ಈ ವೇಳೆ ಅಂಗಡಿ ಮಾಲೀಕ ಮೊಬೈಲನ್ನು ಟೇಬಲ್ ಮೇಲೆ ಇಟ್ಟಿರುವುದನ್ನು ಗಮನಿಸಿದ್ದಾನೆ. ಈ ವೇಳೆ ಮೊಬೈಲ್ ಮೇಲೆ ಬಟ್ಟೆ ಹಾಕಿ ಯಾರಿಗೂ ಅನುಮಾನ ಬಾರದ ರೀತಿ ಮೊಬೈಲ್ ಎಗರಸಿಕೊಂಡು ಎಸ್ಕೇಪ್ ಆಗಿದ್ದಾನೆ.
ಇನ್ನು ಕಳ್ಳನ ಕೈಚಳಕದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಾಥಮಿಕ ತನಿಖೆ ವೇಳೆ ಈತ ಇದೇ ರೀತಿ ಹಲವು ಅಂಗಡಿಗಳಲ್ಲಿ ಕಳ್ಳತನ ಮಾಡಿರುವ ಗುಮಾನಿ ಶಂಕೆ ಇದ್ದು, ಮೊಬೈಲ್ ಕಳ್ಳನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.