ಬೆಂಗಳೂರು: ಕೋರ್ ಕಮಿಟಿ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಮಾತನಾಡಿರುವ ಆಡಿಯೋ ಲೀಕ್ ಆದ ಪರಿಣಾಮ ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸಕ್ಕೆ ಮೊಬೈಲ್ ನಿಷೇಧಿಸಲಾಗಿದೆ.
ಸಿಎಂ ಬಿಎಸ್ವೈ ನಿವಾಸಕ್ಕೆ ಭೇಟಿ ನೀಡುವ ಕಾರ್ಯಕರ್ತರು, ಅಭಿಮಾನಿಗಳಿಗೆ ಕಡ್ಡಾಯವಾಗಿ ಫೋನ್ ನಿಷೇಧ ಮಾಡಲಾಗಿದೆ. ಈ ಕುರಿತು ಸಿಎಂ ನಿವಾಸದಲ್ಲಿ ಫೋನ್ ತೆಗೆದುಕೊಂಡು ಹೋಗದಂತೆ ಫಲಕವನ್ನು ಸಹ ಅಳವಡಿಸಲಾಗಿದೆ.
ಕೇವಲ ಶಾಸಕರು, ಸಚಿವರಿಗೆ ಮಾತ್ರ ಮೊಬೈಲ್ ತೆಗೆದುಕೊಂಡು ಹೋಗಲು ಅವಕಾಶ ಕಲ್ಪಿಸಲಾಗಿದೆ. ಆಡಿಯೋ ಲೀಕ್ನಿಂದ ಎಚ್ಚೆತ್ತ ಸಿಎಂ ಯಡಿಯೂರಪ್ಪ, ಮುಂದೆ ಅದೇ ರೀತಿಯ ಅಚಾತುರ್ಯ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ. ಉಪ ಚುನಾವಣೆ ದಿನಾಂಕ ಸಮೀಪಿಸುತ್ತಿದ್ದು, ಸಭೆಗಳು ನಡೆಯುವುದರಿಂದ ಸೂಕ್ಷ್ಮ ವಿಚಾರಗಳು ಸೋರಿಕೆಯಾಗಬಾರದೆಂದು ಮೊಬೈಲ್ ಬ್ಯಾನ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.