ETV Bharat / state

ಎಂಎಂಎ ಫೈಟ್​​ನಲ್ಲಿ ಪಾಕ್​​ಗೆ ಮಣ್ಣು ಮುಕ್ಕಿಸಿದ ಕರುನಾಡ ಫೈಟರ್.. ವಿವಿಧ ಸಂಘ-ಸಂಸ್ಥೆಗಳಿಂದ ಸನ್ಮಾನ

ಆಲ್‌ ಇಂಡಿಯಾ ಎಂಎಂಎ ಫೆಡರೇಷನ್‌ ಪ್ರಧಾನ ಕಾರ್ಯದರ್ಶಿ ಹಾಗೂ ತರಬೇತಿ ನೀಡಿದ ಅಬ್ದುಲ್‌ ಮುನೀರ್ ಮಾತನಾಡಿ, ಸಾಕಷ್ಟು ಶ್ರಮದಿಂದ ನಮ್ಮ ಬೆಂಗಳೂರಿನ ಹುಡುಗ ಮೊಹಮ್ಮದ್‌ ಫರಾದ್‌ ಈ ಗೆಲುವನ್ನು ಸಾಧಿಸಿದ್ದಾನೆ. ಸೋತಿರುವ ಪಾಕಿಸ್ತಾನಿ ಫೈಟರ್‌ ಹಿಂದಿನ ಹಲವು ಪಂದ್ಯಗಳಲ್ಲಿ ಭಾರತೀಯ ಕ್ರೀಡಾಪಟುಗಳನ್ನು ಸೋಲಿಸಿದ್ದರು..

author img

By

Published : Mar 17, 2021, 5:08 PM IST

Mixed Martial Arts Fight in Bahrain news
ಎಂಎಂಎ ಫೈಟ್​​

ಬೆಂಗಳೂರು : ಮಾರ್ಚ್‌ 11ರಂದು ಬಹ್ರೇನ್‌ನಲ್ಲಿ ನಡೆದ ಎಂಎಂಎ (ಮಿಕ್ಸಡ್‌ ಮಾರ್ಷಲ್‌ ಆರ್ಟ್ಸ್‌) ಫೈಟ್‌ನಲ್ಲಿ ಬೆಂಗಳೂರಿನ ಫೈಟರ್‌ ಮೊಹಮ್ಮದ್ ಫರಾದ್‌, ಪಾಕಿಸ್ತಾನಿ ಫೈಟರ್‌ ಉಲೂಮಿ ಕರೀಮ್‌ರನ್ನು ನಾಕ್‌ಔಟ್‌ ಮಾಡಿ ಗೆಲುವು ಸಾಧಿಸಿದ್ದರು.

ಓದಿ: ಸಿಡಿ‌ ಪ್ರಕರಣದಲ್ಲಿ ನಿರ್ಭಯಾ ಗೈಡ್​ಲೈನ್ಸ್ ಉಲ್ಲಂಘನೆ: ಪೊಲೀಸ್ ಆಯುಕ್ತರಿಗೆ ದೂರು ನೀಡಿದ ವಕೀಲ

ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಹಾಗೂ ದೇಶದ ಪತಾಕೆ ಹಾರಿಸಿದ ಬೆಂಗಳೂರಿನ ಫೈಟರ್​​​ಗೆ ಕರ್ನಾಟಕ ಸ್ಟೇಟ್‌ ಫುಟ್‌ಬಾಲ್‌ ಅಸೋಸಿಯೇಷನ್‌, ನಲಪಾಡ್‌ ಅಕಾಡೆಮಿ ಹಾಗೂ ಬೌರಿಂಗ್‌ ಇನ್ಸ್‌ಟಿಟ್ಯೂಟ್‌ ಜಂಟಿಯಾಗಿ ಸನ್ಮಾನಿಸಿದವು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಫೈಟರ್‌ ಮೊಹಮ್ಮದ್ ಫರಾದ್, ಎಂಎಂಎ ಇತ್ತೀಚೆಗೆ ಜಗತ್ತಿನಾದ್ಯಂತ ಬಹಳಷ್ಟು ಪ್ರಸಿದ್ದಿ ಪಡೆದಿದೆ. ಈ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಬಹಳಷ್ಟು ದೈಹಿಕ ಶ್ರಮ ಹಾಗೂ ಶಕ್ತಿಯ ಅಗತ್ಯವಿದೆ.

ನಿಜವಾದ ಫೈಟ್‌ನಲ್ಲಿ ಅದರಲ್ಲೂ ನಮ್ಮ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನಿ ಫೈಟರ್‌ನ ನಾಕ್‌ಔಟ್‌ ಮಾಡಿ ಗೆಲುವು ಸಾಧಿಸಿದ್ದು ಬಹಳ ಸಂತಸ ತಂದಿದೆ. ನನ್ನ ಗೆಲುವನ್ನು ಗುರುತಿಸಿ ಕರ್ನಾಟಕ ಸ್ಟೇಟ್‌ ಫುಟ್‌ಬಾಲ್‌ ಅಸೋಸಿಯೇಷನ್‌, ನಲಪಾಡ್‌ ಅಕಾಡೆಮಿ ಹಾಗೂ ಬೌರಿಂಗ್‌ ಇನ್ಸ್‌ಟಿಟ್ಯೂಟ್‌ ನನ್ನ ಊರಿನಲ್ಲಿ ಸನ್ಮಾನಿಸುತ್ತಿರುವುದು ಬಹಳ ಖುಷಿಯ ವಿಷಯ ಎಂದರು.

ಸನ್ಮಾನ ಮಾಡಿ ಮಾತನಾಡಿದ ಕರ್ನಾಟಕ ಸ್ಟೇಟ್‌ ಫುಟ್‌ಬಾಲ್‌ ಅಸೋಸಿಯೇಷನ್‌ ಅಧ್ಯಕ್ಷ ಹಾಗೂ ಶಾಸಕರಾದ ಎನ್‌ ಎ ಹ್ಯಾರಿಸ್, ದೈಹಿಕ ಶಕ್ತಿ ಬೇಡುವ ಕ್ರೀಡೆ ಮಿಕ್ಸಡ್‌ ಮಾರ್ಷಲ್‌ ಆರ್ಟ್ಸ್‌, ಇಂತಹ ಕ್ರೀಡೆಯಲ್ಲಿ ನಮ್ಮ ನಗರದ ಹುಡುಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಬಹಳ ಹೆಮ್ಮೆಯ ಸಂಗತಿ. ಇಂತಹ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕಾಗಿರುವುದು ನಮ್ಮ ಅದ್ಯ ಕರ್ತವ್ಯವಾಗಿದೆ.

ಈ ಹಿನ್ನಲೆ ಫುಟ್‌ಬಾಲ್‌ ಅಸೋಸಿಯೇಷನ್‌ ವತಿಯಿಂದ ಸನ್ಮಾನ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅವರಿಗೆ ಬೇಕಾದ ಪ್ರೋತ್ಸಾಹ ನೀಡುವುದಕ್ಕೂ ಸಿದ್ಧರಿದ್ದೇವೆ. ಮೊಹಮ್ಮದ್‌ ಫರಾದ್‌ ಸಾಧನೆ ಇನ್ನೂ ಹಲವರಿಗೆ ಸ್ಫೂರ್ತಿಯಾಗಲಿ ಹಾಗೂ ಹೆಚ್ಚು ಹೆಚ್ಚು ಯುವ ಜನಾಂಗ ಇಂತಹ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿ ಎಂಬುದು ನಮ್ಮ ಆಶಯ ಎಂದರು.

ನಲಪಾಡ್‌ ಅಕಾಡೆಮಿಯ ನಿರ್ದೇಶಕ ಓಮರ್‌ ನಲಪಾಡ್‌ ಹ್ಯಾರಿಸ್‌ ಮಾತನಾಡಿ, ನಮ್ಮ ನಲಪಾಡ್‌ ಅಕಾಡೆಮಿಯಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಎಂಎಂಎನಂತಹ ಕ್ರೀಡೆಗಳನ್ನು ನಾವು ನಮ್ಮ ಅಕಾಡೆಮಿಯಲ್ಲೂ ಅಳವಡಿಸಿಕೊಳ್ಳಲು ಚಿಂತನೆ ನಡೆಸಿದ್ದೇವೆ ಎಂದರು.

ಆಲ್‌ ಇಂಡಿಯಾ ಎಂಎಂಎ ಫೆಡರೇಷನ್‌ ಪ್ರಧಾನ ಕಾರ್ಯದರ್ಶಿ ಹಾಗೂ ತರಬೇತಿ ನೀಡಿದ ಅಬ್ದುಲ್‌ ಮುನೀರ್ ಮಾತನಾಡಿ, ಸಾಕಷ್ಟು ಶ್ರಮದಿಂದ ನಮ್ಮ ಬೆಂಗಳೂರಿನ ಹುಡುಗ ಮೊಹಮ್ಮದ್‌ ಫರಾದ್‌ ಈ ಗೆಲುವನ್ನು ಸಾಧಿಸಿದ್ದಾನೆ. ಸೋತಿರುವ ಪಾಕಿಸ್ತಾನಿ ಫೈಟರ್‌ ಹಿಂದಿನ ಹಲವು ಪಂದ್ಯಗಳಲ್ಲಿ ಭಾರತೀಯ ಕ್ರೀಡಾಪಟುಗಳನ್ನು ಸೋಲಿಸಿದ್ದರು.

ಕ್ರೀಡೆಯಲ್ಲಿ ನಮ್ಮ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರದ ಕ್ರೀಡಾಪಟುಗಳು ಎದುರಾದಾಗ ಬಹಳಷ್ಟು ಮಾನಸಿಕವಾದ ಒತ್ತಡ ಇರುತ್ತದೆ. ಈ ಒತ್ತಡವನ್ನು ಮೀರಿ ದೇಶದ ಹೆಸರನ್ನು ಎತ್ತಿ ಹಿಡಿಯವುದು ಬಹಳ ಹೆಮ್ಮೆಯ ಸಂಗತಿ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.