ETV Bharat / state

ಕೆಟ್ಟ ಕೆಲಸ ಮಾಡುವುದರಲ್ಲಿ ಮುನಿರತ್ನ ಅವರಿಗೆ ತುಂಬಾ ಅನುಭವ: ಎಂಎಲ್​ಸಿ ನಾರಾಯಣಸ್ವಾಮಿ - ರಾಜರಾಜೇಶ್ವರಿ ನಗರ ಚುನಾವಣೆ ನ್ಯೂಸ್​

ರಾಜರಾಜೇಶ್ವರಿ ನಗರದ ಬಿಜೆಪಿ ಅಭ್ಯರ್ಥಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್​ ಎಂಎಲ್​ಸಿ ನಾರಾಯಣಸ್ವಾಮಿ, ಕೆಟ್ಟ ಕೆಲಸ ಮಾಡುವುದರಲ್ಲಿ ಅವರಿಗೆ ತುಂಬಾ ಅನುಭವವಿದೆ ಎಂದಿದ್ದಾರೆ.

MLC Narayanswamy
MLC Narayanswamy
author img

By

Published : Nov 1, 2020, 2:16 AM IST

ಬೆಂಗಳೂರು: ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಜೆ ಪಿ ಪಾರ್ಕ್, ಯಶವಂತಪುರದಲ್ಲಿ ಕಾಂಗ್ರೆಸ್​ ಪ್ರಚಾರ ಕಾರ್ಯ ಜೋರಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ನಾರಾಯಣ ಸ್ವಾಮಿ, ಮಾಜಿ ಶಾಸಕ ಮುನಿರತ್ನ ದುಡ್ಡು ಹೊಡೆಯುವುದರಲ್ಲಿ, ಗುಂಡಾಗಿರಿ ಮಾಡುವುದರಲ್ಲಿ ತುಂಬಾ ಅನುಭವವಿದೆ ಎಂದು ವಾಗ್ದಾಳಿ ನಡೆಸಿದರು.

ಮುನಿರತ್ನ ವಿರುದ್ಧ ನಾರಾಯಣಸ್ವಾಮಿ ವಾಗ್ದಾಳಿ

ಈ ಟಿವಿ ಭಾರತ್ ಜತೆ ಮಾತನಾಡಿದ ನಾರಾಯಣಸ್ವಾಮಿ, ನಿಮ್ಮ ಅಭ್ಯರ್ಥಿ ಅನನುಭವಿ, ಆದರೆ ಮುನಿರತ್ನ ಅನುಭವಿ ಎಂದು ಕೇಳುತ್ತಿದ್ದಂತೆ ಉತ್ತರಿಸಿದ ಅವರು, ನಕಲಿ ವೋಟರ್ ಐಡಿ ಸೃಷ್ಟಿಸುವುದರಲ್ಲಿ, ಹಣದ ಆಮಿಷ ಒಡ್ಡುವುದರಲ್ಲಿ, ಪ್ರಜಾತಂತ್ರ ವ್ಯವಸ್ಥೆಗೆ ದಕ್ಕೆ ತರುವುದರಲ್ಲಿ ಮುನಿರತ್ನ ಅವರಿಗೆ ತುಂಬಾ ಅನುಭವ ಇದೆ ಎಂದರು.

ಮುನಿರತ್ನ ಅವರು ಕಾಂಗ್ರೆಸ್​ನಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ ಎಲ್ಲ ಅಧಿಕಾರ ಅನುಭವಿಸಿ ಇದೀಗ ಪಕ್ಷಾಂತರಗೊಂಡು ಪಕ್ಷಕ್ಕೆ ದ್ರೋಹವೆಸಗಿದ್ದಾರೆ. ಡಿಕೆ ಶಿವಕುಮಾರ್​, ಸಿದ್ದರಾಮಯ್ಯ ಹಾಗೂ ಎಲ್ಲ ಕಾಂಗ್ರೆಸ್​ ಮುಖಂಡರು ಒಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಅದರಲ್ಲಿ ಯಶಸ್ವಿಯಾಗುತ್ತೇವೆ ಎಂದರು. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿದ್ಯಾವಂತ ಸುಸಂಸ್ಕೃತ ಮನೆಯ ಹೆಣ್ಣು ಮಗಳಾಗಿದ್ದು, ಕ್ಷೇತ್ರದ ಜನತೆ ಅವರಿಗೆ ಮನೆ ಮಗಳಂತೆ ಆಶೀರ್ವಾದ ಮಾಡುತ್ತಿದ್ದಾರೆ ಎಂದರು.

ಇದೇ ವೇಳೆ ಕೋವಿಡ್ ಪ್ರಶ್ನೆಗೆ ಹಾರಿಕೆಯ ಉತ್ತರ ನೀಡಿದ ಅವರು, ನಾವು ಮನೆ ಮನೆಯ ಪ್ರಚಾರಕ್ಕೆ 5 ಜನ ಮಾತ್ರ ತೆರಳುತ್ತಿದ್ದೇವೆ. ಮಾಸ್ಕ್ , ಸಾಮಾಜಿಕ ಅಂತರ ಕಾಪಾಡಿ ಎಂದು ಇದೇ ವೇಳೆ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.