ETV Bharat / state

17 ಶಾಸಕರ ಫೋಟೋ ಇಟ್ಟು ಹಾರ ಹಾಕಿ ಗೌರವಿಸಬೇಕು: ಲೆಹರ್ ಸಿಂಗ್​​

ರಾಜೀನಾಮೆ ನೀಡಿದ ಎಲ್ಲಾ 17 ಶಾಸಕರ ಫೋಟೋ ಇಟ್ಟು ಹಾರ ಹಾಕಿ ಗೌರವಿಸಬೇಕು. ಒಂದೂವರೆ ವರ್ಷದ ಅಪವಿತ್ರ ಸರ್ಕಾರ ಬೀಳಲು‌ ಕಾರಣರಾಗಿದ್ದಕ್ಕೆ ನಿಜಕ್ಕೂ ಅವರಿಗೆ ಅಭಿನಂದಿಸುತ್ತೇನೆ ಎಂದು ಬಿಜೆಪಿ ಸದಸ್ಯ ಲೆಹರ್ ಸಿಂಗ್ ಹೇಳಿದರು.

MLC Lehar Singh talk in vidhanasabha
ಬಿಜೆಪಿ ಸದಸ್ಯ ಲೆಹರ್ ಸಿಂಗ್
author img

By

Published : Feb 18, 2020, 5:47 PM IST

ಬೆಂಗಳೂರು: ರಾಜೀನಾಮೆ ನೀಡಿದ ಎಲ್ಲಾ 17 ಶಾಸಕರ ಫೋಟೋ ಇಟ್ಟು ಹಾರ ಹಾಕಿ ಗೌರವಿಸಬೇಕು. ಒಂದೂವರೆ ವರ್ಷದ ಅಪವಿತ್ರ ಸರ್ಕಾರ ಬೀಳಲು‌ ಕಾರಣರಾಗಿದ್ದಕ್ಕೆ ನಿಜಕ್ಕೂ ಅವರಿಗೆ ಅಭಿನಂದಿಸುತ್ತೇನೆ ಎಂದು ಬಿಜೆಪಿ ಸದಸ್ಯ ಲೆಹರ್ ಸಿಂಗ್ ಹೇಳಿದರು. ಹಿಂದಿ ಭಾಷಾ ಪ್ರಭಾವಿತ ಕನ್ನಡದಲ್ಲಿ ಮಾತನಾಡಿದ ಅವರು, ಪರಿಷತ್ ಊಟದ ವಿರಾಮದ ನಂತರದ ಕಲಾಪದಲ್ಲಿ ಗಮನ ಸೆಳೆದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ಈ ಸರ್ಕಾರದಿಂದ ಯಾವುದೇ ಸಾಧನೆಯಾಗಿಲ್ಲ. ಇದನ್ನು ಹೊಗಳಲು ನಾಚಿಕೆ ಆಗಲ್ವಾ ಎಂದು ಕಿಡಿಕಾರಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದವರು ಇನ್ಮುಂದೆ ಪ್ರತಿಪಕ್ಷದಲ್ಲಿ ಕೂರುವುದನ್ನು ರೂಢಿಸಿಕೊಳ್ಳಿ. ಮುಂದಿನ ಮೂರು ವರ್ಷ ಬಿ.ಎಸ್​.ಯಡಿಯೂರಪ್ಪನವರ ಸರ್ಕಾರ ಭದ್ರವಾಗಿರಲಿದೆ ಎಂದರು. ಸಿ.ಎಂ.ಇಬ್ರಾಹಿಂ ಭಾಷಣ ಪ್ರಸ್ತಾಪಿಸಿ, ಇಂದಿರಾ ಗಾಂಧಿ ವಿಚಾರವನ್ನು ಅನಗತ್ಯವಾಗಿ ಪ್ರಸ್ತಾಪಿಸಿದ್ದಾರೆ. ಸಿಎಎ ಪ್ರಸ್ತಾಪ ಮಾಡಿ, ವಿದೇಶದಿಂದ ಬರುವ ಮುಸ್ಲಿಮರಿಗೆ ಅನ್ವಯವಾಗಲಿದೆ. ಇಲ್ಲಿನ ಮುಸ್ಲಿಮರಿಗೆ ಸಮಸ್ಯೆ ಆಗಲ್ಲ ಎಂದರು.

ನಮ್ಮ ಸರ್ಕಾರ ಬಂದ ನಂತರ ಪ್ರವಾಹ ಬಂತು. 3 ಸಾವಿರ ಕೋಟಿ ರೂ. ಖರ್ಚು ಮಾಡಿದ್ದಾರೆ. ಸಿಎಂ ಬಿಎಸ್​ವೈ ನೇತೃತ್ವದಲ್ಲಿ ಒಂದೊಂದು ಸಮಿತಿ ಮಾಡಬೇಕು. ಸಮರ್ಪಕ ಹಣ ಹಂಚಿಕೆಗೆ ಪ್ರಯತ್ನಿಸೋಣ. ಒಂದೇ ಒಂದು ಹಗರಣ ಆಗಿಲ್ಲ. ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶಕ್ಕೆ ಹಣ ನೀಡಲು ನಿರ್ಧರಿಸಲಾಗಿದೆ ಎಂದು ಸರ್ಕಾರವನ್ನು ಹೊಗಳುವ ಕಾರ್ಯ ಮಾಡಿದರು. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಆಗಮಿಸುತ್ತಿದ್ದಂತೆ, ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್​​​ಗೆ ಮಾತನಾಡುವ ಅವಕಾಶವನ್ನು ಸಭಾಪತಿಗಳು ಕಲ್ಪಿಸಿದರು. ಲೆಹರ್ ಸಿಂಗ್ ಮಾತು ಅಲ್ಲಿಗೆ‌ ಮುಗಿಯಿತು. ಮುಕ್ತಾಯಕ್ಕೆ ಮುನ್ನ ಡ್ರಗ್ಸ್ ಮಾರಾಟ ದಂಧೆ ಬಾಂಗ್ಲಾದೇಶದಿಂದ ವಲಸೆ ಬಂದವರಿಂದ ಆಗುತ್ತಿದೆ. ಅದರ ತಡೆಗೆ ಗೃಹ ಸಚಿವರು ಗಮನ ಹರಿಸಬೇಕೆಂದರು.

ವಿಶಿಷ್ಟ ಭಾಷಾ ಶೈಲಿಯ ಮೂಲಕ ಗಮನ ಸೆಳೆದ ಅವರು, ರಾಜ್ಯಪಾಲರ ಭಾಷಣದ ಬಗ್ಗೆ ಹೆಚ್ಚು ಗಂಭೀರ ಪ್ರಸ್ತಾಪ ಮಾಡಲಿಲ್ಲ. ಪ್ರತಿಪಕ್ಷದ ಸದಸ್ಯರು ಇದನ್ನು ಖಂಡಿಸಿ ಪದೇ ಪದೆ ವಿಷಯಕ್ಕೆ ಬನ್ನಿ ಎಂದು ಒತ್ತಾಯಿಸುತ್ತಲೇ ಇದ್ದರು. ಇನ್ನು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದಾಗ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ನೀವು ಬೇಗ ಮುಗಿಸಿ ಆಮೇಲೆ ಚಿತ್ರದುರ್ಗಕ್ಕೆ ಹೋಗಬೇಕಲ್ಲಾ ಅಂದರು. ಅದಕ್ಕೆ ಸಿಂಗ್ ಪ್ರತಿಕ್ರಿಯೆ ನೀಡಿ, ಇಲ್ಲಾ ಸಂಜೆ ಹೋಗುತ್ತೇನೆ ಎಂದು ಹೇಳಿ ಸದನವನ್ನು ನಗೆಗಡಲಲ್ಲಿ ತೇಲಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.