ಬೆಂಗಳೂರು : ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆ ದುರದೃಷ್ಟಕರ. ಪೊಲೀಸರು ಈ ಬಗ್ಗೆ ಕಠಿಣ ತನಿಖೆ ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್ ಎಸ್ ಎಸ್, ಬಜರಂಗದಳ, ವಿಶ್ವಹಿಂದೂ ಪರಿಷತ್ ಎಂದು ನಾವೂ ಕೂಡ ಬಾಯಿಗೆ ಬಂದಂತೆ ಹೇಳಿಕೆ ಕೊಡುತ್ತಿದ್ದೇವೆ. ಇನ್ನೊಂದೆಡೆ ಯಾವ ಪುರುಷಾರ್ಥವೂ ಇಲ್ಲದೆ ಹತ್ಯೆ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಬಗ್ಗೆ ಗೃಹ ಇಲಾಖೆ ಸರಿಯಾಗಿ ತನಿಖೆ ನಡೆಸಬೇಕು. ಕಾಸು ಕೊಟ್ಟು ಬಂದವರು ಎಲ್ಲಿ ಕೆಲಸ ಮಾಡುತ್ತಾರೆ ಎಂದು ಪೊಲೀಸರ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವದ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸರ್ಕಾರ ತನ್ನ ಮೂರು ವರ್ಷ ಆಡಳಿತ ಪೂರೈಸಿರುವುದಕ್ಕೆ ಜನೋತ್ಸವ ಕಾರ್ಯಕ್ರಮ ಮಾಡುತ್ತಿದೆ. ಇದು ಜನರ ಉತ್ಸವ. ಪ್ರಜಾಪ್ರಭುತ್ವದಲ್ಲಿ ಜನರಿಗಾಗಿ ಮಾಡುವ ಕಾರ್ಯಕ್ರಮ ಜನೋತ್ಸವ. ಆದರೆ ಕಾಂಗ್ರೆಸಸ್ನಲ್ಲಿ ಸಿದ್ದರಾಮೋತ್ಸವ ಮಾಡುತ್ತಿದ್ದಾರೆ. ವ್ಯಕ್ತಿ ಪೂಜೆ ಮಾಡ್ತಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ ನಿಂದ ಸಿಎಂ ಆದವರು, ಎಲ್ಲೂ ಕಾಂಗ್ರೆಸ್ ಪಕ್ಷದ ಸಿಎಂ ಎಂದು ಹೇಳಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಕಾಲದಲ್ಲಿ ಭ್ರಷ್ಟಾಚಾರ ಆಗಲಿಲ್ಲವಾ.? : ಈ ಹಿಂದೆ ಸಮಾಜ ಕಲ್ಯಾಣ ಸಚಿವರಾಗಿದ್ದ ಆಂಜನೇಯ ಮೇಲೆ ಸ್ವಾಮೀಜಿಯವರೇ ಆರೋಪ ಮಾಡಿದ್ದರು. ಅಲ್ಲದೆ ಲೋಕಾಯುಕ್ತ ಬಾಗಿಲು ಮುಚ್ಚಿಸಿದವರು ಯಾರು?. ಎಲ್ಲಿ ಬಂಧನಕ್ಕೆ ಒಳಗಾಗುತ್ತೇವೆ ಎಂಬ ಭಯದಿಂದ ಲೋಕಾಯುಕ್ತದ ಬಾಗಿಲು ಮುಚ್ಚಿಸಿದರು ಎಂದು ಸಿದ್ದರಾಮಯ್ಯ ಎಂದು ಹೆಚ್ ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಓದಿ :Praveen Murder.. ಕೇಸ್ ಎನ್ಐಎಗೆ ವಹಿಸಲು ಹಿಂದೆ ಮುಂದೆ ನೋಡಲ್ಲ: ಸಿಎಂ