ETV Bharat / state

ಕಾಶ್ಮೀರದಂತೆ ನಕಲಿ ಗಾಂಧಿ ಕುಟುಂಬಕ್ಕೂ ವಿಶೇಷ ಸವಲತ್ತು ಕೊಡಬೇಕಾ?: ಛಲವಾದಿ ವಾಗ್ದಾಳಿ - ಕಾಂಗ್ರೆಸ್ ಟೀಕಿಸಿದ ಛಲವಾದಿ ನಾರಾಯಣಸ್ವಾಮಿ

ಇಡಿ ಒಂದು ಸ್ವಾಯತ್ತ ಸಂಸ್ಥೆ. ನೋಟಿಸ್ ಕೊಟ್ಟರೆ ಜ್ವರ ಬರುತ್ತದಾ? ನೀವು ಇದೇ ರೀತಿ ನಡೆದುಕೊಂಡಾಗ ಬೇರೆಯವರಿಗೆ ಜ್ವರ ಬರಲಿಲ್ಲವೇ? ಈ ನಕಲಿ ಗಾಂಧಿ ಕುಟುಂಬಕ್ಕೆ ದೇಶದ ಜನರು ಬುದ್ಧಿ ಕಲಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಮತ್ತು ಎಸ್​ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.

chalavadi-narayanaswamy-slams-congress-over-ed-notice
ಜಮ್ಮು ಕಾಶ್ಮೀರಕ್ಕಿದ್ದಂತೆ ನಕಲಿ ಗಾಂಧಿ ಕುಟುಂಬಕ್ಕೆ ವಿಶೇಷ ಸವಲತ್ತು ಕೊಡಬೇಕಾ: ಛಲವಾದಿ ವಾಗ್ದಾಳಿ
author img

By

Published : Jun 13, 2022, 6:24 PM IST

ಬೆಂಗಳೂರು: ದೇಶದಲ್ಲಿ ಕಾಂಗ್ರೆಸ್‍ನ ವಿಶೇಷತೆ ಏನು? ಅವರು ಪ್ರಶ್ನಾತೀತರೇ? ಈ ನಕಲಿ ಗಾಂಧಿ ಕುಟುಂಬವನ್ನು ಸಂವಿಧಾನ ಮತ್ತು ದೇಶದ ಕಾನೂನಿನ ಪರಿಧಿಯಿಂದ ಹೊರಗಿಡಬಹುದೇ? 370ನೇ ವಿಧಿಯಡಿ ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಇತ್ತು. ಆ ರೀತಿ ಇವರಿಗೂ ಸವಲತ್ತು ಬೇಕೇ? ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಮತ್ತು ಎಸ್​ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯ 'ಜಗನ್ನಾಥ ಭವನ'ದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿ ನೋಟಿಸ್‍ಗೆ ಒಂದು ರಾಷ್ಟ್ರೀಯ ಪಕ್ಷ ಬೀದಿಗಿಳಿದು ಹೋರಾಡುತ್ತದೆ ಎಂದರೆ ಅದಕ್ಕೆ ಅರ್ಥ ಇದೆಯೇ? ಇಡಿ ಇವತ್ತು ಆರಂಭವಾಗಿದೆಯೇ? ಕಾಂಗ್ರೆಸ್ ಕಾಲದಲ್ಲೇ ಆರಂಭವಾಗಿತ್ತಲ್ಲವೇ? ನಿಮ್ಮ ಆಡಳಿತಾವಧಿಯಲ್ಲಿ ನೀವು ಇಡಿ, ಸಿಬಿಐನ್ನು ದುರ್ಬಳಕೆ ಮಾಡಿಕೊಂಡಿದ್ದೀರಾ? ಅದರ ನೆನಪೇನಾದರೂ ನಿಮಗಿದೆಯೇ ಎಂದು ಪ್ರಶ್ನೆಗಳನ್ನು ಮುಂದಿಟ್ಟರು.

ಎಲ್ಲ ಪಕ್ಷದವರು ಈ ದೇಶದ ಕಾನೂನು ಎಲ್ಲರಿಗೂ ಒಂದೇ ಎಂದು ತಿಳಿದಿದ್ದಾರೆ. ಅನೇಕ ಸಂದರ್ಭಗಳಲ್ಲಿ ತಪ್ಪುಗಳಾದಾಗ ಇಡಿ, ಸಿಬಿಐನಂತಹ ಸಂಸ್ಥೆಗಳನ್ನು ಎದುರಿಸಿ ಸಮಸ್ಯೆಗಳನ್ನು ಪರಿಹರಿಸಿಕೊಂಡಿದ್ದಾರೆ. ಕಾನೂನು ಬಿಜೆಪಿಗೆ ಒಂದು, ಜೆಡಿಎಸ್‍ಗೆ ಇನ್ನೊಂದು ಮತ್ತು ಕಾಂಗ್ರೆಸ್‍ಗೆ ಮತ್ತೊಂದು ಎಂದು ಇರುವುದಿಲ್ಲ. ಪ್ರತಿ ಭಾರತೀಯನಿಗೆ ಸಂವಿಧಾನ ಮತ್ತು ಕಾನೂನು ಅನ್ವಯ ಆಗುತ್ತದೆ ಎಂದು ತಿಳಿಸಿದರು.

ಇಡಿ ಒಂದು ಸ್ವಾಯತ್ತ ಸಂಸ್ಥೆ. ನೋಟಿಸ್ ಕೊಟ್ಟರೆ ಜ್ವರ ಬರುತ್ತದಾ? ನೀವು ಇದೇ ರೀತಿ ನಡೆದುಕೊಂಡಾಗ ಬೇರೆಯವರಿಗೆ ಜ್ವರ ಬರಲಿಲ್ಲವೇ? ಈ ನಕಲಿ ಗಾಂಧಿ ಕುಟುಂಬಕ್ಕೆ ದೇಶದ ಜನರು ಬುದ್ಧಿ ಕಲಿಸಬೇಕು ಎಂದು ಕರೆ ನೀಡಿದರು. ಕಾಂಗ್ರೆಸ್ ಪಕ್ಷ ಕರ್ನಾಟಕ, ಮಹಾರಾಷ್ಟ್ರ, ರಾಜಸ್ತಾನ ಬಿಟ್ಟರೆ ಬೇರೆಲ್ಲಿ ಉಳಿದಿದೆ? ಎಂದು ಕೇಳಿದರು. ನಿಮ್ಮ ಹೋರಾಟಕ್ಕೆ ಮಣಿದು ಇಡಿ ನಿಮ್ಮನ್ನು ಬಿಟ್ಟು ಬಿಡುತ್ತದೆಯೇ ಎಂದರು.

ಕಾಂಗ್ರೆಸ್​​ನಲ್ಲಿ ಎಲ್ರೂ ಚೇಲಾಗಳು: ಕಾಂಗ್ರೆಸ್​​ನಲ್ಲಿ‌ ಇರೋರೆಲ್ಲ ಚೇಲಾಗಳೇ, ಎಲ್ರೂ ನಕಲಿ ಗಾಂಧಿ ಕುಟುಂಬದ ಚೇಲಾಗಳು, ಸಿದ್ದರಾಮಯ್ಯ, ಡಿಕೆಶಿ, ಖರ್ಗೆ ಎಲ್ಲರೂ ಒಂದೇ ಕುಟುಂಬಕ್ಕೆ ಗಂಟು ಬಿದ್ದಿದ್ದಾರೆ. ಹೀಗಾಗಿ ಇವರೆಲ್ಲ ಚೇಲಾಗಳು, ನಕಲಿ ಗಾಂಧಿಗಳನ್ನು ದೇಶದಿಂದ ಓಡಿಸುವ ಕಾಲ ಬಂದಿದೆ. ಅವರು ಓಡಿದರೆ ಈ ಚೇಲಾಗಳೂ ಅವರ ಹಿಂದೆ ಓಡುತ್ತಾರೆ. ಅಲ್ಲಿಗೆ ಭಾರತ ಶುದ್ಧಿಯಾಗುತ್ತದೆ ಎಂದು ಗರಂ ಆದರು.

ಇದನ್ನೂ ಓದಿ: ಇಡಿ ಕಚೇರಿ ಎದುರು ಕಾಂಗ್ರೆಸ್​ ಪ್ರತಿಭಟನೆ.. ಸಿದ್ದರಾಮಯ್ಯ ಸೇರಿ ಹಲವರನ್ನ ವಶಕ್ಕೆ ಪಡೆದ ಪೊಲೀಸರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.