ಅಹೋರಾತ್ರಿ ಧರಣಿ: ಪ್ರತಿಭಟನೆ ಜೊತೆಗೆ ಕೈ ನಾಯಕರಿಂದ ಅಂತಾಕ್ಷರಿ ಹಾಡು! - ಶಾಸಕರ ಅಹೋರಾತ್ರಿ ಧರಣಿ ಅಪ್ಡೇಟ್
ಶಾಸಕರ ಅಹೋರಾತ್ರಿ ಧರಣಿ ಮುಂದುವರಿದಿದ್ದು, ಪ್ರತಿಭಟನೆ ಜೊತೆಗೆ ಕೈ ನಾಯಕರು ಅಂತಾಕ್ಷರಿ ಹಾಡುವ ಮೂಲಕ ಕಾಲ ಕಳೆದರು.
ಬೆಂಗಳೂರು: ಸದನದಲ್ಲಿ ಅಹೋರಾತ್ರಿ ಧರಣಿ ಮುಂದುವರಿಸಿರುವ ಕಾಂಗ್ರೆಸ್ ಶಾಸಕರು ಅಂತಾಕ್ಷರಿ ಹಾಡುವ ಮೂಲಕ ರಾತ್ರಿ ಪ್ರತಿಭಟನೆ ನಡೆಸಿದರು.
ಎರಡನೇ ದಿನದ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದರು. ಸಚಿವ ಈಶ್ವರಪ್ಪರ ವಾಜಾಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಬಳಿಕ ಶಾಸಕರು ಅಂತಾಕ್ಷರಿ ಹಾಡುವ ಮೂಲಕ ರಿಲ್ಯಾಕ್ಸ್ ಮೂಡಿಗೆ ಹೋದರು. ಶಾಸಕರು ಹಾಡುಗಳನ್ನು ಹೇಳುವ ಮೂಲಕ ಎರಡನೇ ದಿನದ ಅಹೋರಾತ್ರಿ ಧರಣಿ ನಡೆಸಿದರು.
ಓದಿ: ರೋಚಕ ಪಂದ್ಯದಲ್ಲಿ ಗೆಲುವು ಕಂಡ ಭಾರತ.. ನಾಯಕ ರೋಹಿತ್ ಪಡೆಗೆ ಸತತ ಮೂರನೇ ಸರಣಿ ಜಯ!
ಇದಕ್ಕೂ ಮುನ್ನ ಕೈ ಶಾಸಕರು ಭರ್ಜರಿ ಭೋಜನ ಸವಿದರು. ಅನ್ನ ಸಾಂಬರ್, ಮುದ್ದೆ, ಚಪಾತಿ, ಪಾಯಸ, ಮೊಸರು, ಸಲಾಡ್ನೊಂದಿಗೆ ಊಟ ಸವಿದರು. ವಿಧಾನಸಭೆ ಸಚಿವಾಲಯದಿಂದಲೇ ಊಟದ ವ್ಯವಸ್ಥೆ ಮಾಡಲಾಗಿತ್ತು.