ETV Bharat / state

ಎಸಿಬಿ, ಇಡಿಗೆ ನಾನು ಮತ್ತು ಡಿಕೆಶಿ ಸಾಹೇಬ್ರು ಮಾತ್ರ ಕಾಣೋದು: ಜಮೀರ್ ಅಹ್ಮದ್​ ಖಾನ್ - ಎಸಿಬಿ

ಅಕ್ರಮ ಆಸ್ತಿಗಳಿಕೆ ಆರೋಪ ಹಿನ್ನೆಲೆ ಕಾಂಗ್ರೆಸ್​ ಶಾಸಕ ಜಮೀರ್​ ಅಹ್ಮದ್​ ಖಾನ್​ ಅವರಿಗೆ ಎಸಿಬಿ ವಿಚಾರಣೆ ನಡೆಸಿದೆ. ಈ ಕುರಿತು ಬಿಜೆಪಿ ಸರ್ಕಾರ ಹೀಗೆ ಕಾಂಗ್ರೆಸ್​ ನಾಯಕರಿಗೆ ತೊಂದರೆ ಮಾಡುತ್ತಿದೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

KN_BNG_05_ZAMEER_AHAMED_KHAN_BYTE_INFRONT_OF_ACB_OFFICE_7210969
ಜಮೀರ್ ಅಹ್ಮದ್​ ಖಾನ್
author img

By

Published : Aug 6, 2022, 7:25 PM IST

ಬೆಂಗಳೂರು: ಎಸಿಬಿ ವಿಚಾರಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ್ ಜಮೀರ್ ಅಹ್ಮದ್ ಖಾನ್ ಸಮನ್ಸ್ ಮುಖಾಂತರ ಎಸಿಬಿ ಅಧಿಕಾರಿಗಳು ದಾಖಲೆಗಳು ಕೇಳಿದ್ದರು. ದಾಖಲೆಗಳನ್ನ ಸಲ್ಲಿಕೆ ಮಾಡಿದ್ದೇನೆ ಎಂದಿದ್ದಾರೆ.

ಮನೆ ನಿರ್ಮಾಣ ಸಂಬಂಧ ದಾಖಲೆಗಳನ್ನ ಕೊಟ್ಟಿದ್ದೇನೆ. ಬಿಜೆಪಿ ಸರ್ಕಾರ ಇರುವ ಕಡೆ ಕಾಂಗ್ರೆಸ್ ನಾಯಕರಿಗೆ ಹೀಗೆ ತೊಂದರೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ನಾನು ಮತ್ತು ನಮ್ಮ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್​ ಅವರನ್ನೇ ಸರ್ಕಾರ ಟಾರ್ಗೆಟ್ ಮಾಡುತ್ತಿದೆ ಎಂದು ಶಾಸಕ ಜಮೀರ್​ ಅಹ್ಮದ್​ ಖಾನ್ ಆರೋಪಿಸಿದರು.

ಎಸಿಬಿ ವಿಚಾರಣೆ ಬಳಿಕ ಜಮೀರ್ ಅಹ್ಮದ್​ ಖಾನ್ ಪ್ರತಿಕ್ರಿಯೆ

ಅಧಿಕಾರಿಗಳು ಏನೇನು ಕೇಳಿದ್ದಾರೋ ಅದೆಲ್ಲವನ್ನೂ ಕೊಟ್ಟಿದ್ದೇನೆ. ದೇಶದಲ್ಲಿ ಇವತ್ತು ಬಿಜೆಪಿಯವರು ಯಾರು ಮನೆ ಕಟ್ಟಿಲ್ಲ, ಆಸ್ತಿ ಮಾಡಿಲ್ಲ. ಹೀಗಾಗಿ ನಮ್ಮನ್ನೇ ಟಾರ್ಗೆಟ್ ಮಾಡ್ತಿದ್ದಾರೆ ಎಂದೆನಿಸುತ್ತದೆ ಎಂದು ಬಿಜೆಪಿ ವಿರುದ್ಧ‌ ಕಿಡಿಕಾರಿದರು.

ಇದನ್ನೂ ಓದಿ:ಸಿದ್ದರಾಮಯ್ಯರನ್ನು ಸೋಲಿಸಲು ಬಿಜೆಪಿ ಪಣ: ಕೋಲಾರ, ತುಮಕೂರಿನ ಹಿರಿಯ ನಾಯಕರಿಗೆ ಕೇಸರಿ ಪಡೆ ಗಾಳ!?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.