ETV Bharat / state

ಹತ್ಯೆಗೆ ಸಂಚು ಆರೋಪ : ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ವಿರುದ್ಧ ಶಾಸಕ ಎಸ್ ಆರ್ ವಿಶ್ವನಾಥ್ ದೂರು

ಈ ಹಿಂದೆ ಯಲಹಂಕದಲ್ಲಿ ಕಡಬಗೆರೆ ಸೀನಾ ಆಲಿಯಾಸ್ ಶ್ರೀನಿವಾಸ್ ಕೊಲೆ ಸಂಚು ಪ್ರಕರಣದಲ್ಲಿ ನಾನು ಮತ್ತು ತನ್ನ ಸ್ನೇಹಿತರು ಇಲ್ಲದಿದ್ದರೂ ಆತನ ಕಡೆಯಿಂದ ಹೇಳಿಕೆ ನೀಡುವ ಪ್ರಯತ್ನ ಮಾಡಿಸಿ ಅನವಶ್ಯಕವಾಗಿ ಅಪರಾಧ ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಿದ್ದರು..

Vishwanath lodge complaint against Gopalakrishn
ಗೋಪಾಲಕೃಷ್ಣ ವಿರುದ್ಧ ಪೊಲೀಸ್ ಠಾಣೆಯಲ್ಲಿ ಶಾಸಕ ಎಸ್​ಆರ್​​ ವಿಶ್ವನಾಥ್ ದೂರು
author img

By

Published : Dec 1, 2021, 7:08 PM IST

Updated : Dec 1, 2021, 7:47 PM IST

ಬೆಂಗಳೂರು : ಹತ್ಯೆಗೆ ಸಂಚು ರೂಪಿಸಿರುವ ವಿಡಿಯೋ ಬಹಿರಂಗವಾದ ಬೆನ್ನಲ್ಲೇ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ವಿರುದ್ಧ ಯಲಹಂಕ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಅವರು ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತನಿಖೆಗೆ ಆಗ್ರಹಿಸಿದ್ದಾರೆ.

ದೂರಿನ ಸಾರಾಂಶ‌ : ಮತ್ತಗದಹಳ್ಳಿ ಗೋಪಾಲಕೃಷ್ಣ ಮತ್ತು ಇತರರು ನನ್ನ ವಿರುದ್ಧ ಕೊಲೆ ಸಂಚು, ಮಾನಹಾನಿ, ಅನವಶ್ಯಕ ವಿಷಯಗಳಲ್ಲಿ, ಅಪರಾಧ ಪ್ರಕರಣಗಳಲ್ಲಿ ಸಿಲುಕಿಸುವ ಪ್ರಯತ್ನ ನಡೆಸಿದ್ದಾರೆ. ಜೀವ ಭಯ ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತಾನು ಸಿಂಗನಾಯಕನಹಳ್ಳಿಯಲ್ಲಿ ವಾಸವಿದ್ದು, ಸತತವಾಗಿ ಯಲಹಂಕ ಕ್ಷೇತ್ರದಲ್ಲಿ ಶಾಸಕನಾಗಿ ಜನಸೇವೆ ಮಾಡುತ್ತಿದ್ದೇನೆ. ಇದನ್ನು ಸಹಿಸದೆ ದ್ವೇಷ, ಅಸೂಯೆಗಳಿಂದ ಮುತ್ತಗದಹಳ್ಳಿ ಗೋಪಾಲಕೃಷ್ಣ ಮತ್ತು ಇತರರು ಸೇರಿಕೊಂಡು ಕುಳ್ಳ ದೇವರಾಜ್ ಎಂಬಾತನ ಕಡೆಯಿಂದ ಮತ್ತು ಆಂಧ್ರದ ತಂಡದಿಂದ ನನ್ನ ಕೊಲೆಗೆ ಸಂಚು ‌ರೂಪಿಸಲಾಗಿದೆ‌ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಈ ಹಿಂದೆ ಯಲಹಂಕದಲ್ಲಿ ಕಡಬಗೆರೆ ಸೀನಾ ಆಲಿಯಾಸ್ ಶ್ರೀನಿವಾಸ್ ಕೊಲೆ ಸಂಚು ಪ್ರಕರಣದಲ್ಲಿ ನಾನು ಮತ್ತು ತನ್ನ ಸ್ನೇಹಿತರು ಇಲ್ಲದಿದ್ದರೂ ಆತನ ಕಡೆಯಿಂದ ಹೇಳಿಕೆ ನೀಡುವ ಪ್ರಯತ್ನ ಮಾಡಿಸಿ ಅನವಶ್ಯಕವಾಗಿ ಅಪರಾಧ ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಿದ್ದರು.

ಶಾಸಕನಾದ ನನ್ನ ಮಾನಹಾನಿ ಮಾಡಿರುತ್ತಾರೆ. ಈ ಹಿಂದೆ ನನ್ನ ಮೇಲೆ ವಿಚಾರಣೆಯಾದ ಕೆಲವು ಪ್ರಕರಣಗಳಲ್ಲಿಯೂ ಈತನ ಕೈವಾಡ ಇರುವ ಬಗ್ಗೆ ಅನುಮಾನ ಇದೆ. ವಿಶೇಷವಾಗಿ ನಾನು ತೋಟಕ್ಕೆ ಒಂಟಿಯಾಗಿ ಬರುವ ವೇಳೆ, ವಾಕಿಂಗ್ ಮಾಡುವ ವೇಳೆ, ಕಾರ್ಯಕ್ರಮಗಳಿಗೆ ಹೋಗಿ ಬರುವ ವೇಳೆ ನನ್ನ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಬೇಕು ಎಂಬ ಆತನ ದ್ವೇಷ ಮನೋಭಾವ ಮತ್ತು ಸಂಚಿಗೆ ಪೂರಕವಾಗಿ ನನ್ನ ಮೇಲೆ ಹಲ್ಲೆ ಮಾಡಲು ಪ್ರಯತ್ನವೂ ಸಾರ್ವಜನಿಕರ ಗಮನಕ್ಕೆ ಬಂದಿದೆ.

ಈಗ ನೋಡಿದರೆ ಆತನು ಚುನಾವಣಾ ದೃಷ್ಟಿಯಿಂದ ನನ್ನ ಮಾನಹಾನಿ ಮಾಡಲು, ಕೊಲೆಗೆ ಸಂಚು ರೂಪಿಸಿ ಸುಪಾರಿ ನೀಡಿರುವುದು ಕಂಡು ಬಂದಿದೆ. ಇದರಿಂದ ನನ್ನ ಕ್ಷೇತ್ರದ ಜನತೆ ಆತಂಕಕ್ಕೆ ಒಳಗಾಗಿದ್ದಾರೆ. ಇದರ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ವಿಶ್ವನಾಥ್ ಮನವಿ ಮಾಡಿದ್ದಾರೆ.

ಎಸ್ಪಿ ವಂಶಿಕೃಷ್ಣ ಮಾಹಿತಿ : ಯಲಹಂಕ ಶಾಸಕ ವಿಶ್ವನಾಥ್​​ನವರು ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ವಿರುದ್ಧ ಕೊಲೆ ಆರೋಪದಡಿ ರಾಜಾನುಕುಂಟೆ ಠಾಣೆಗೆ ಲಿಖಿತ ದೂರು ನೀಡಿದ್ದಾರೆ.

ಶಾಸಕರ ದೂರಿನ ಕುರಿತಂತೆ ಮಾಹಿತಿ ನೀಡಿದ ಎಸ್ಪಿ

ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿ ಜೊತೆ ಮಾತನಾಡುತ್ತಿರುವ ಎಡಿಟೆಡ್ ವಿಡಿಯೋ ಮಾತ್ರ ನಮಗೆ ಲಭ್ಯವಾಗಿದೆ‌. ಪ್ರಕರಣ ದಾಖಲಿಸಿಕೊಳ್ಳುವಂತೆ ಹೇಳಿದ್ದೇನೆ. ಈ ಕುರಿತಾಗಿ ಹೆಚ್ಚಿನ ಮಾಹಿತಿ ಈಗ ಹೇಳಲು ಸಾಧ್ಯವಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶಿಕೃಷ್ಣ ಹೇಳಿದ್ದಾರೆ.

ಬಿಗಿ ಭದ್ರತೆ:

police security to vishwanath house
ವಿಶ್ವನಾಥ್​ ಮನೆಗೆ ಬಿಗಿ ಪೊಲೀಸ್​ ಭದ್ರತೆ

ಶಾಸಕ ಎಸ್ ಆರ್ ವಿಶ್ವನಾಥ್ ಹತ್ಯೆಗೆ ಸಂಚು ನಡೆಸಿರುವ ಹಿನ್ನೆಲೆಯಲ್ಲಿ ಸಿಂಗನಾಯಕನಹಳ್ಳಿಯ ಅವರ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ.

ಇದನ್ನೂ ಓದಿ: ನಾನು ಸಾವಿಗೆ ಹೆದರುವವನಲ್ಲ: ಕೊಲೆ ಸಂಚಿಗೆ ವಿಶ್ವನಾಥ್ ಪ್ರತಿಕ್ರಿಯೆ

Last Updated : Dec 1, 2021, 7:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.