ETV Bharat / state

ಸಿದ್ದರಾಮಯ್ಯ ಮೇಲೆ ಗೂಬೆ ಕೂರಿಸುವ ಯತ್ನ ನಡೆಯುತ್ತಿದೆ: ರಾಘವೇಂದ್ರ ಹಿಟ್ನಾಳ್ - mla

ಆಪರೇಷನ್ ಕಮಲದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮೇಲೆ ಗೂಬೆ ಕೂರಿಸುವ ಯತ್ನ ನಡೆಯುತ್ತಿದೆ ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹೇಳಿದ್ದಾರೆ.

hitnal
author img

By

Published : Jul 11, 2019, 5:21 PM IST

ಕೊಪ್ಪಳ: ನಾನು ಹಾಗೂ ಕುಷ್ಟಗಿ ಶಾಸಕ ಅಮರೇಗೌಡರು ಸಿದ್ದರಾಮಯ್ಯ ಅವರ ಆಪ್ತರೆ. ಆದರೆ, ಆಪರೇಷನ್ ಕಮಲಕ್ಕೆ ಸಿದ್ದರಾಮಯ್ಯ ಕಾರಣವಾಗಿದ್ರೆ ನಾವು ಹೋಗಬೇಕಿತ್ತು. ಯಾಕೆ ಹೋಗಿಲ್ಲ? ಇದೆಲ್ಲಾ ಸಿದ್ದರಾಮಯ್ಯ ಅವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಎಂದು ಕೊಪ್ಪಳ ಕ್ಷೇತ್ರದ ಕೈ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹೇಳಿದ್ದಾರೆ.

ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಮಲಕ್ಕೆ, ಒಂದು ವೇಳೆಗೆ ಸಿದ್ದರಾಮಯ್ಯ ಅವರು ಕಾರಣವಾಗಿದ್ದರೆ ನಮ್ಮನ್ಯಾಕೆ ಕಳಿಸಿಲ್ಲ ಎಂದು ರಾಘವೇಂದ್ರ ಹಿಟ್ನಾಳ್ ಪ್ರಶ್ನೆ ಮಾಡಿದರು. ನಾವೆಲ್ಲರೂ ಸಿದ್ದರಾಮಯ್ಯ ಆಪ್ತರೇ. ಕೆಲವರು ಆಮಿಷಕ್ಕೆ ಒಳಗಾಗಿದ್ದಾರೆ. ಆದರೆ, ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವುದಿಲ್ಲ. ಕಾಂಗ್ರೆಸ್ ನಲ್ಲಿಯೇ ಇರ್ತೀನಿ. ಬಿಜೆಪಿ ಹಣದ ಆಮಿಷ, ಅಧಿಕಾರದ ಆಸೆ ತೋರಿಸಿ ಸರ್ಕಾರವನ್ನು ಅಸ್ಥಿರ ಮಾಡುವ ಕೆಲಸ ಮಾಡುತ್ತಿದೆ.

ಸರ್ಕಾರದ ಕುರಿತು ಮಾತನಾಡುತ್ತಿರುವ ರಾಘವೇಂದ್ರ ಹಿಟ್ನಾಳ್

ಸರ್ಕಾರ ಉಳಿಯುತ್ತೋ ಬಿಡುತ್ತೋ ಗೊತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಘಟನೆಗಳು ನಡೆಯಬಾರದು. ಇದು ಒಳ್ಳೆಯ ಬೆಳವಣಿಗೆಯಲ್ಲ. ಈಗ ರಾಜಿನಾಮೆ ನೀಡಿರೋರು ಕಾರ್ಯಕರ್ತರ ಬಳಿ ಚರ್ಚಿಸದೇ ರಾಜಿನಾಮೆ ನೀಡಿದ್ದು ಸರಿಯಲ್ಲ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹೇಳಿದರು.

Intro:Body:ಕೊಪ್ಪಳ:- ನಾನು ಹಾಗೂ ಕುಷ್ಟಗಿ ಶಾಸಕ ಅಮರೇಗೌಡರು ಸಿದ್ದರಾಮಯ್ಯ ಅವರ ಆಪ್ತರೆ. ಆದರೆ, ಆಪರೇಷನ್ ಕಮಲಕ್ಕೆ ಸಿದ್ದರಾಮಯ್ಯ ಕಾರಣವಾಗಿದ್ರೆ ನಾವು ಹೋಗಬೇಕಿತ್ತು. ಯಾಕೆ ಹೋಗಿಲ್ಲ? ಇದೆಲ್ಲಾ ಸಿದ್ದರಾಮಯ್ಯ ಅವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಎಂದು ಕೊಪ್ಪಳ ಕ್ಷೇತ್ರದ ಕೈ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹೇಳಿದ್ದಾರೆ. ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಾಲಕ್ಕೆ ಒಂದು ವೇಳೆಗೆ ಸಿದ್ದರಾಮಯ್ಯ ಅವರು ಕಾರಣವಾಗಿದ್ದರೆ ನಮ್ಮನ್ಯಾಕೆ ಕಳಿಸಿಲ್ಲ ಎಂದು ರಾಘವೇಂದ್ರ ಹಿಟ್ನಾಳ್ ಪ್ರಶ್ನೆ ಮಾಡಿದರು. ನಾವೆಲ್ಲರೂ ಸಿದ್ದರಾಮಯ್ಯ ಆಪ್ತರೇ. ಕೆಲವರು ಆಮಿಷಕ್ಕೆ ಒಳಗಾಗಿದ್ದಾರೆ. ಆದರೆ, ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವುದಿಲ್ಲ. ಕಾಂಗ್ರೆಸ್ ನಲ್ಲಿಯೇ ಇರ್ತೀನಿ. ಬಿಜೆಪಿ ಹಣದ ಆಮಿಷ, ಅಧಿಕಾರದ ಆಸೆ ತೋರಿಸಿ ಸರ್ಕಾರವನ್ನು ಅಸ್ಥಿರ ಮಾಡುವ ಕೆಲಸ ಮಾಡುತ್ತಿದೆ.ಸರ್ಕಾರ ಉಳಿಯುತ್ತೋ ಬಿಡುತ್ತೋ ಗೊತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಘಟನೆಗಳು ನಡೆಯಬಾರದು. ಇದು ಒಳ್ಳೆಯ ಬೆಳವಣಿಗೆಯಲ್ಲ. ಈಗ ರಾಜಿನಾಮೆ ನೀಡಿರೋರು ಕಾರ್ಯಕರ್ತರ ಬಳಿ ಚರ್ಚಿಸದೆ ರಾಜಿನಾಮೆ ನೀಡಿದ್ದು ಸರಿಯಲ್ಲ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹೇಳಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.